ಸ್ವಾಮಿ ವಿವೇಕಾನಂದರ 158 ನೇ ಜಯಂತಿ ಹಾಗೂ ಯುವ ದಿನಾಚರಣೆ ಆಚರಣೆ
ಬನವಾಸಿ: ಭವ್ಯ ಭಾರತದ ಸಿಡಿಲ ಸನ್ಯಾಸಿಯಾಗಿ ಉಕ್ಕಿನ ಮನುಷ್ಯರಾಗಿ, ಪರಿವ್ರಾಜಕರಾಗಿ ಯೋಗಿ, ವೀರ ಸನ್ಯಾಸಿ ಇತ್ಯಾದಿ ಬಿದಿರು ಬಾವಲಿಗಳಿಂದ ಪ್ರಖ್ಯಾತರಾಗಿ ಯುವಶಕ್ತಿಯ ಪ್ರೇರಕರಾಗಿ, ಸಾವಿರಾರು ಯುವಜನರ ಬಾಳಿಗೆ ಬೆಳಕಾಗಿ ಬಾಳುತ್ತಿರುವವರು ಸ್ವಾಮಿ ವಿವೇಕಾನಂದರು. ಅವರ ಸಿಂಹಘರ್ಜನೆಯ ನುಡಿಗಳು ನಮಗೆ ಸ್ಪೂರ್ತಿಯಾಗಿದ್ದು ಅವರ ಒಂದೊಂದು ಮಾತುಗಳು ನಮಗೆ ಶ್ರೀರಕ್ಷೆಯಾಗಿವೆ ”ಎಂದು ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್ ತಿಳಿಸಿದರು.
ಅವರು ಸ್ಥಳೀಯ ಜಯಂತಿ ಪ್ರೌಡಶಾಲೆಯಲ್ಲಿ ಹಮ್ಮಿಕೊಂಡ ವೀರಸನ್ಯಾಸಿ ಸ್ವಾಮಿ ವಿವೇಕಾನಂದರ 158 ನೇ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯ ಕಾರ್ಯಕ್ರಮದಲ್ಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಉಕ್ಕಿನ ನರಗಳುಳ್ಳ ಯುವಕರೇ ನಿಮ್ಮೊಳಗಿನ ದಿವ್ಯ ಶಕ್ತಿಯನ್ನು ಅರಿಯಿರಿ, ದೈಹಿಕ ಮಾನಸಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ಶಕ್ತಿಯ ಮಹತ್ವ ಅರಿತುಕೊಳಿ;್ಳ ಪಾಶ್ಚಿಮಾತ್ಯರಿಗೂ ನಮಗೂ ಇರುವ ಬಹು ಮುಖ್ಯ ವ್ಯತ್ಯಾಸವೆಂದರೆ ಚಾರಿತ್ರ್ಯ. ಉತ್ತಮ ಚಾರಿತ್ರ್ಯವಂತನು ಎಲ್ಲರಿಂದಲೂ ಪ್ರಶಂಸಿಲ್ಪಡುತ್ತಾನೆ ಅದಕ್ಕಾಗಿ ಉತ್ತಮ ಚಾರಿತ್ರ್ಯ ರೂಪಿಸಿಕೊಳ್ಳಿ “ ಎಂದು ಕರೆ ನೀಡಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಸದೃಢ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಮುಖ್ಯವಾದುದು ದೇಶದ ಏಳಿಗೆಗಾಗಿ ಶ್ರಮಪಡಿ ಕೋಮು ಸೌಹಾರ್ದತೆ ಕಾಪಾಡಿಕೊಂಡು ನವಭಾರತ ನಿರ್ಮಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವರಾಜ್ ಆಚಾರಿ, ಮುಖ್ಯಾಧ್ಯಾಪಕಿ ಗೀತಾ ಮಲ್ಲಾಪುರ, ಶಿಕ್ಷಕರಾದ ಪ್ರಸನ್ನ ಗುಣಗ, ಪ್ರವೀಣ ಕುಮಾರ್ ಬಂಡೇರ, ಪಿ. ವಿದ್ಯಾ, ಬಿ.ಎಸ್. ಪುಟ್ಟಸ್ವಾಮಿ, ಉದಯ ಭಾಸ್ಕರ ಭಟ್ಟ, ಶರಣಮ್ಮ ಬಾದವಾಡ, ದೀಪಾ ಸಿರ್ಸಿಕರ ಹಾಗೂ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.