ಮೂಡಲಗಿ. ತಾಲೂಕಿನ ತುಕ್ಕಾನಟ್ಟಿ ಐ.ಸಿ.ಎ.ಆರ್ ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೀನು ಕೃಷಿಕರ ತರಬೇತಿ ಕಾರ್ಯಕ್ರಮ ಮಂಗಳೂರು ಸಾಗರೋತ್ಪನ್ನಗಳ ರಪ್ತು ಅಭಿವೃದ್ಧಿ ಪ್ರಾಧಿಕಾರ (ಎಮ.ಪಿ.ಇ.ಡಿ.ಎ) ಹಾಗೂ ಬೆಳಗಾವಿ ಮೀನುಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಜರುಗಿತ್ತು.
ಕೆ.ವಿ.ಕೆ.ಯ ಮುಖ್ಯಸ್ಥರಾದ ಡಾ.ಡಿ.ಸಿ.ಚೌಗಲಾರವರು ಮಾತನಾಡಿ ಬೆರಳುದ್ದ ಗಾತ್ರದ ಮೀನು ಮರಿಗಳ ಉದ್ಯಮಕ್ಕೆ ಬಾರಿ ಬೇಡಿಕೆಯಿದ್ದು ಯುವಕರು ಈ ನಿಟ್ಟಿನಲ್ಲಿ ಮನಸ್ಸು ಮಾಡಬೇಕು ಎಂದು ಸೂಚಿಸಿದರು.
ಮಂಗಳೂರು ಸಾಗರೋತ್ಪನ್ನಗಳ ರಪ್ತು ಅಭಿವೃದ್ಧಿ ಪ್ರಾಧಿಕಾರ ಉಪನಿರ್ದೆಶಕ ಪ್ರೇಮದೇವ. ಕೆ.ವಿ ಮಾತನಾಡಿ, ಬೆಳಗಾವಿಯಲ್ಲಿ ಸೀ ಬಾಸ್ ಮೀನು ತಳಿಯನ್ನು ಪರಿಚಯಿಸಲಿದ್ದು ಉತ್ತಮ ಆದಾಯ ತಂದು ಕೊಡುವ ಮೀನಿನ ತಳಿ ಇದಾಗಿದೆ ಹಾಗೂ ಪಂಜರ ಕೃಷಿಗೆ ಸೂಕ್ತವಾದ ಮೀನಿನ ತಳಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿದರು.
ರಾಯಭಾಗ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವ ಅರಕೇರಿ ಮಾತನಾಡಿ, ಮೀನುಗಾರಿಕೆ ಇಲಾಖೆಯ ಯೋಜನೆಗಳನ್ನು ತಿಳಿಸಿದರು. ಹಿಡಕಲ್ಲ ಡ್ಯಾಮ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ ಮೀನು ಮರಿಗಳ ಉತ್ಪಾದನೆಯ ಬಗ್ಗೆ ಮಾಹಿತಿ ನೀಡಿದರು.
ಡಾ: ಗಣೇಶ ಪಂಜರ ಕೃಷಿಯಲ್ಲಿ ಸೀಬಾಸ್ ಮೀನು ಕೃಷಿಯನ್ನು ಸವಿಸ್ತಾರವಾಗಿ ವಿವರಿಸಿದರು. ಕೆವಿಕೆ ವಿಜ್ಞಾನಿಡಾ :ಆದರ್ಶ ಹೆಚ.ಎಸ್ ವಿವಿಧ ಮೀನು ತಳಿಗಳ ಸಾಕಾಣಿಕೆ ಹಾಗೂ ವಿವಿಧ ಮೀನುಗಾರಿಕೆ ಉದ್ಯಮಗಳ ಬಗ್ಗೆ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಮೀನು ಕೃಷಿಕಾರದ ದಡ್ಡಿ ಗ್ರಾಮದ ವಿಜಯ ಬಂಡಾರಿ, ಖನಗಾವದ ಮಂಜುನಾಥ ಕಲ್ಲೋಳಿ ಮತ್ತು ಚಾಪಗಾವದ ರಫಿಕ್ ಸನದಿ ಅವರನ್ನು ಸತ್ಕರಿಸಿದರು. ಡಾ ವಿಷ್ಣುದಾಸ್ ಗುಣಗ ನಿರೂಪಿಸಿ ವಂದಿಸಿದರು.