ಮೂಡಲಗಿ: ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನ ಜಾತೀಯ ಎಲ್ಲೆ ಮೀರಿ ಹಿಂದೂ ಸಮಾಜವನ್ನು ಒಂದುಗೂಡಿಸುತ್ತಿದೆ ಎಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಹೇಳಿದರು.
ಕಲ್ಲೋಳಿ ಪಟ್ಟಣದಲ್ಲಿ ಸೋಮವಾರ ಜ.18 ರಂದು ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿ, ಶ್ರೀರಾಮ ಮಂದಿರ ಟ್ರಸ್ಟ್ ಕಮೀಟಿ ಕಲ್ಲೋಳಿಯಿಂದ ನಿಧಿ ಸಮರ್ಪಣೆ ಪಡೆಯುವ ಮೂಲಕ ಮಹಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದು ಇಡಿ ದೇಶವೇ ಭಾವಪರವಶಕ್ಕೆ ಒಳಗಾಗಿದೆ ಮತ್ತು ಪ್ರತಿಯೊಬ್ಬರು ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಿದ್ದಾರೆ. ಈ ನಿಸ್ವಾರ್ಥ ಮನೋಭಾವವೆ ಭಾರತವನ್ನು ವಿಶ್ವಗುರುವಾಗಿಸುವ ಶಕ್ತಿಯಾಗಲಿದೆ ಎಂದರು.
ಹಿಂದೂ ಸಮಾಜದ ಒಗ್ಗಟ್ಟು ಮತ್ತು ಭಾವೈಕ್ಯತೆ ರಾಮರಾಜ್ಯ ನಿರ್ಮಾಣದ ಪ್ರಥಮ ಮೆಟ್ಟಿಲಾಗಿದೆ. ಅಯೋಧ್ಯೆಯ ಪ್ರಭು ಶ್ರೀರಾಮ ಮಂದಿರ ರಾಷ್ಟ್ರ ಮಂದಿರವಾಗಿ ದೇಶದ ಜನರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಬೆಳೆಸಲಿದೆ, ಆ ಕಾರಣಕ್ಕಾಗಿ ದೇಶದ ಪ್ರತಿಯೊಬ್ಬರು ಈ ಮಹಾ ಅಭಿಯಾನದಲ್ಲಿ ತಮ್ಮ ತನು ಮನ ಧನವನ್ನು ಸಮರ್ಪಿಸಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯಿಂದ ರಾಜ್ಯಸಭಾ ಸದಸ್ಯರಾದ ಈರಣ ಕಡಾಡಿ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಸತೀಶ ಕಡಾಡಿ ಅವರಿಗೆ ಸನ್ಮಾನಿಸಿ ಗೌರವಿಸಿದರು.
ತವಗಮಠದ ಬ್ರಹ್ಮಶ್ರೀ ಬಾಳಯ್ಯ ಮಹಾಸ್ವಾಮಿಗಳು, ಜಿಲ್ಲಾ ಸಂಘ ಚಾಲಕರಾದ ಎಂ ವಾಯ್ ಹಾರುಗೇರಿ, ತಾಲೂಕ ಅಭಿಯಾನ ಸಂಯೋಜಕರಾದ ಚೂನಪ್ಪ ಹಟ್ಟಿ, ಭೂಪಾಲ ಖೆಮಲಾಪೂರ, ಹರೀಶ ಕಾಳೆ, ಬಸವರಾಜ ಮಾಳೆದವರ, ಸಹದೇವ ಖಾನಾಪೂರ, ಶ್ರೀಶೈಲ ಬಿ ಬಿ ಬೆಳಕೂಡ, ರಾಯಪ್ಪ ಪಾಟೀಲ, ಡಾ| ಮಹಾಂತೇಶ ಕಡಾಡಿ, ಸುರೇಶ ಪಾಟೀಲ, ತುಪ್ಪದ, ದತ್ತು ಕಲಾಲ, ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …