ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರದಿಂದ ಪುರಸಭೆಯ ವಾರ್ಡ 17ರ ಹನುಮಾನ ದೇವಸ್ಥಾನದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಸ್ವಚ್ಛತೆ ಮಾಡುತ್ತಿರುವರು
ಲಯನ್ಸ್ ಕ್ಲಬ್‍ದಿಂದ ಸ್ವಚ್ಛತಾ ಅಭಿಯಾನ
ಮೂಡಲಗಿ: ‘ಮನೆಯ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ರೋಗಗಳಿಂದ ಮುಕ್ತರಾಗಬೇಕು’ ಎಂದು ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಪುಲಕೇಶ ಸೋನವಾಲಕರ ಹೇಳಿದರು.
ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಪುರಸಭೆಯ ವಾರ್ಡ 17ರ ಹನುಮಾನ ದೇವಸ್ಥಾನದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದ ಅವರು ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಎರಡು ವಾರ್ಡಗಳಲ್ಲಿ ಲಯನ್ಸ್ ಕ್ಲಬ್‍ದಿಂದ ಸ್ವಚ್ಛತೆ ಮಾಡಿದ್ದು, ಮುಂದಿನ ದಿನಗಳಲ್ಲಿ ಬೇರೆ ವಾರ್ಡಗಳಲ್ಲಿ ಸ್ವಚ್ಛತೆ ಮಾಡುವೆವು ಎಂದರು.
ಪುರಸಭೆಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಮಾತನಾಡಿ ಲಯನ್ಸ್ ಕ್ಲಬ್ ಸ್ವಚ್ಛತಾ ಅಭಿಯಾನವು ಆಯಾ ವಾರ್ಡ್‍ದ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತದೆ. ಲಯನ್ಸ್ ಕ್ಲಬ್‍ನ ಕಾರ್ಯವು ಶ್ಲಾಘನೀಯವಾಗಿದೆ ಎಂದರು.
ಪಟ್ಟಣದಲ್ಲಿಯ ಎಲ್ಲ ಪಾನಬೀಡಾ ಅಂಗಡಿಯವರು ಗುಟಕಾ ಮತ್ತು ಇತರೆ ಕಾಗದ, ಪ್ಲಾಸ್ಟಿಕ್‍ಗಳನ್ನು ಗೂಡಿಸಿ ಕಸದ ವಾಹನಕ್ಕೆ ಪ್ರತಿದಿನ ಕೊಡಬೇಕು. ಉತ್ತಮ ಪರಿಸರ ಕಾಯಬೇಕು ಎಂದರು.
ಲಯನ್ಸ್ ವಿಭಾಗೀಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಪುರಸಭೆ ಸದಸ್ಯೆ ಶಾಂತವ್ವ ಕಾಶಪ್ಪ ಝಂಡೇಕುರಬರ, ಆರೋಗ್ಯ ಕಿರಿಯ ನಿರೀಕ್ಷಕ ಪ್ರೀತಮ ಬೋವಿ, ಸ್ಥಳೀಯರಾದ ಮನೋಹರ ಸಣ್ಣಕ್ಕಿ, ವಿ.ಎಚ್. ಬಾಲರಡ್ಡಿ, ಲಯನ್ಸ್ ಸದಸ್ಯರಾದ ಬಾಲಶೇಖರ ಬಂದಿ, ಈರಣ್ಣ ಕೊಣ್ಣೂರ, ಶ್ರೀಶೈಲ್ ಲೋಕನ್ನವರ, ಸುಪ್ರೀತ ಸೋನವಾಲಕರ, ಮಹಾಂತೇಶ ಹೊಸೂರ, ಸಂಜಯ ಮೋಕಾಶಿ, ಶಿವಬೋಧ ಯರಝರ್ವಿ ಸ್ವಚ್ಛತೆಯಲ್ಲಿ ಭಾಗಿಯಾಗಿದ್ದರು.