ಕಲ್ಲೋಳಿಯಲ್ಲಿ ಫೆ. 24ರಂದು
‘ತಲ್ಲೂರು ರಾಯನಗೌಡರ ಶೋಧಗಳು’ ರಾಷ್ಟ್ರೀಯ ವಿಚಾರ ಸಂಕಿರಣ
ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಆತಿಥ್ಯದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠದಿಂದ ‘ಕಿತ್ತೂರ ರಾಣಿ ಚನ್ನಮ್ಮ ಸಂಶೋಧನೆ ಮತ್ತು ಇತಿಹಾಸ ಮಂಡಳ: ತಲ್ಲೂರು ರಾಯನಗೌಡರ ಶೋಧಗಳ’ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕರಣವನ್ನು ಫೆ. 24ರಂದು ಬೆಳಿಗ್ಗೆ 10.30ಕ್ಕೆ ಏರ್ಪಡಿಸಿರುವರು.
ವಿಚಾರ ಸಂಕಿರಣವನ್ನು ಸಂಸ್ಥೆಯ ಅಧ್ಯಕ್ಷ ಬಸÀಗೌಡ ಪಾಟೀಲ ಉದ್ಘಾಟಿಸುವರು, ಅಧ್ಯಕ್ಷತೆಯನ್ನು ಪ್ರೊ. ಎಸ್.ಎಂ. ಗಂಗಾಧರಯ್ಯವಹಿಸುವರು, ಮುಖ್ಯ ಅತಿಥಿಗಳಾಗಿ ರಾಣಿ ಚನ್ನಮ್ಮ ವಿವಿಯ ಸಿನೆಟ್ ಸದಸ್ಯ ಹನುಮಂತಯ್ಯ ಶಿಗ್ಗಾಂವವಹಿಸುವರು. ಪ್ರೊ. ಆರ್.ಎಂ. ಷಡಕ್ಷರಯ್ಯ ಆಶಯ ಭಾಷಣ ಮಾಡುವರು.
ಗೋಷ್ಠಿಗಳು: ಮೊದಲ ಗೋಷ್ಠಿಯಲ್ಲಿ ಡಾ. ಮೈತ್ತಾಯಿಣಿ ಗದಿಗೆಪ್ಪಗೋಳ ‘ರಾಯಣಗೌಡರ ಜೀವನಾದರ್ಶಗಳು’, ಡಾ. ಸುರೇಶ ಹನಗಂಡಿ ‘ಕಿತ್ತೂರ ರಾಣ ಚನ್ನಮ್ಮ ಸಂಶೋಧನೆ ಮತ್ತು ಇತಿಹಾಸ ಮಂಡಳ: ಸಂರಚನೆ, ಬೆಳವಣಿಗೆ’ ಕುರಿತು ಮಾತನಾಡುವರು. ಎರಡನೇ ಗೋಷ್ಠಿಯಲ್ಲಿ ಪ್ರಕಾಶ ಗಿರಿಮಲ್ಲನ್ನವರ ‘ಕಿತ್ತೂರ ರಾಣಿ ಚನ್ನಮ್ಮ ಇತಿಹಾಸ ಮತ್ತು ಸಂಶೋಧನಾ ಮಂಡಳದ ಸಾಹಿತ್ಯ’ ಕುರಿತು, ಯಲ್ಲಪ್ಪ ಕಡಕೋಳ ‘ತಲ್ಲೂರು ರಾಯನಗೌಡರ ಶೋಧಗಳು’ ಕುರಿತು ಮತ್ತು ಮೂನೇ ಗೋಷ್ಠಿಯಲ್ಲಿ ಡಾ. ಎಂ. ರಂಗಸ್ವಾಮಿ ‘ಕಿತ್ತೂರ ಚರಿತ್ರೆ ಮರು ನಿರ್ಮಾಣದ ಪ್ರಯತ್ನಗಳು’ ಮತ್ತು ಈಶ್ವರಚಂದ್ರ ಬೆಟಗೇರಿ ಅವರಿಂದ ಕಿತ್ತೂರ ಚನ್ನಮ್ಮ ಪಾತ್ರದ ಪ್ರಾತ್ಯಕ್ಷಿಕೆ’ ಜರುಗುವುದು.
ಸಮಾರೋಪ: ಸಮಾರೋಪದಲ್ಲಿ ಸಾಹಿತಿ ಯ.ರು. ಪಾಟೀಲ, ಪ್ರೊ. ಎಸ್.ಎಂ. ಗಂಗಾಧರಯ್ಯ, ಕಾಲೇಜು ಆಡಳಿತಾಧಿಕಾರಿಗಳು ಭಾಗವಹಿಸುವರು ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.