‘ಕನ್ನಡ ಕೆಲಸಗಳನ್ನು ಮನಸ್ಸು ಕೊಟ್ಟು ಮಾಡಬೇಕು’
ಮೂಡಲಗಿ: ‘ಕನ್ನಡ ನಾಡು, ನುಡಿಗಾಗಿ ಯಾವತ್ತು ಮನಸ್ಸು ಕೊಟ್ಟು ಕೆಲಸ ಮಾಡಿದರೆ, ಮಾಡುವ ಕೆಲಸಗಳೆಲ್ಲ ಯಶಸ್ಸು ಆಗುತ್ತವೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಪ್ರಥಮ ಸಾಹಿತ್ಯ ಸಮ್ಮೇಳನದ ಯಶಸ್ಸಿಗಾಗಿ ಶಾಸಕರಿಗೆ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಕನ್ನಡದ ಕೆಲಸ ಮತ್ತು ಸಾಹಿತ್ಯದ ಬೆಳವಣಿಗೆಗೆ ತಮ್ಮಿಂದ ನಿರಂತರ ಪ್ರೋತ್ಸಾಹ ಇರುತ್ತದೆ ಎಂದರು.
ಮೂಡಲಗಿಯ ತಾಲ್ಲೂಕಿನ ಎಲ್ಲ ಸಾಹಿತಿ, ಕಲಾವಿದರು ಒಗ್ಗಟ್ಟಿನ ಮೂಲಕ ತಾಲ್ಲೂಕುವನ್ನು ಸಾಂಸ್ಕøತಿಕವಾಗಿ ಬೆಳೆಸಬೇಕು. ಉತ್ತಮ ಕಾರ್ಯಗಳಿಗೆ ತಾವು ನಿರಂತರವಾದ ಪ್ರೋತ್ಸಾಹ, ಸಹಾಯ ಮಾಡುವುದಾಗಿ ತಿಳಿಸಿದರು.
ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನವು ನಿರೀಕ್ಷೆ ಮೀರಿ ಯಶಸ್ಸು ಆಗಿದ್ದು ಪರಿಷತ್ತಿನ ಎಲ್ಲ ಪದಾಧಿಕಾರಿಗಳನ್ನು ಶಾಸಕರು ಅಭಿನಂದಿಸಿದರು.
ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ, ಬಾಲಶೇಖರ ಬಂದಿ, ಕಸಾಪ ಅಧ್ಯಕ್ಷ ಸಿದ್ರಾಮ್ ದ್ಯಾಗಾನಟ್ಟಿ ಸಮ್ಮೇಳನದ ಯಶಸ್ಸಿಗೆ ಶಾಸಕರ ಸಹಕಾರವನ್ನು ಪ್ರಶಂಸಿದರು.
ಕಸಾಪ ಪದಾಧಿಕಾರಿಗಳಾದ ಚಿದಾನಂದ ಹೂಗಾರ, ಸಾವಿತ್ರಿ ಕಮಲಾಪೂರ, ಮಹಾದೇವ ಮಲಗೌಡರ, ವೈ.ಬಿ. ಪಾಟೀಲ, ಮಹಾರಾಜ ಸಿದ್ದು, ಶಿವನಗೌಡ ಪಾಟೀಲ, ಪ್ರಕಾಶ ಮೇತ್ರಿ, ಯಲ್ಲಾಲಿಂಗ ವಾಳದ, ಸದಾಶಿವ ಯಕ್ಸಂಬಿ, ಢವಳೇಶ್ವರ ಇದ್ದರು.