ಮೂಡಲಗಿ: ಮಹಿಳೆ ನಾಲ್ಕು ಗೋಡೆಯ ಮಧ್ಯೆ ಇರದೆ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬದುಕುತ್ತಿರುವ ಮಹಿಳೆಗೆ ಸಾಹಿತ್ಯದ ವೇದಿಕೆಯು ಸ್ಪೂರ್ತಿಯ ಸೆಲೆಯಾಗಿದೆ ಎಂದು ಸಿರಿಗನ್ನಡ ಮಹಿಳಾ ವೇದಿಕೆ ಮತ್ತು ಲೇಖಕಿಯರ ಸಂಘದ ಅಧ್ಯಕ್ಷೆ ಹಾಗೂ ಪಿಯು ಕಾಲೇಜಿನ ಉಪನ್ಯಾಸಕಿ ಸಾವಿತ್ರಿ ಕಮಲಾಪೂರ ಹೇಳಿದರು.
ಅವರು ತಾಲೂಕಿನ ಹಳ್ಳೂರ ಗ್ರಾಮದ ಎಸ್.ಆರ್.ಸಂತಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸಿರಿಗನ್ನಡ ಮಹಿಳಾ ವೇದಿಕೆ ಮತ್ತು ಲೇಖಕಿಯರ ಸಂಘದ ಆಶ್ರಯದಲ್ಲಿ ಜರುಗಿದ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಾಲ್ಯದಲ್ಲಿ ಇರುವಾಗಲೇ ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಮೂಡಿಸುವ ಸಲುವಾಗಿ ಮಕ್ಕಳಿಗಾಗಿ ಕವಿಗೋಷ್ಠಿ ಹಾಗೂ ಕಥಾಗೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೇಖಕಿಯರ ಸಂಘದ ಕಾರ್ಯದರ್ಶಿ ಶಶಿರೇಖಾ ಬೆಳ್ಳಕ್ಕಿ, ಪೂರ್ಣಿಮಾ ಎಲಿಗಾರ, ಉಪನ್ಯಾಸಕರಾದ ಮಂಜುನಾಥ ಕುಂಬಾರ, ವಾಯ್.ಬಿ. ಕಳ್ಳಿಗುದ್ದಿ, ಅನಿತಾ ವಟಂಗೋಡಿ, ದೀಪಾ ಹೊಸಟ್ಟಿ ಹಾಗೂ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
