Breaking News
Home / Recent Posts /   ‘ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಮುಖ್ಯ’- ಜಿಲ್ಲಾ ಲೋಕಾಯುಕ್ತ ಎಸ್‍ಪಿ ಯಶೋಧಾ ವಂಟಗೂಡಿ

  ‘ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಮುಖ್ಯ’- ಜಿಲ್ಲಾ ಲೋಕಾಯುಕ್ತ ಎಸ್‍ಪಿ ಯಶೋಧಾ ವಂಟಗೂಡಿ

Spread the love

‘ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಮುಖ್ಯ’- ಜಿಲ್ಲಾ ಲೋಕಾಯುಕ್ತ ಎಸ್‍ಪಿ ಯಶೋಧಾ ವಂಟಗೂಡಿ

ಮೂಡಲಗಿ: ‘ಸದೃಢ ಸಮಾಜ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದಾಗಿದೆ’ ಎಂದು ಬೆಳಗಾವಿ ಜಿಲ್ಲಾ ಲೋಕಾಯುಕ್ತ ಎಸ್‍ಪಿ ಯಶೋಧಾ ವಂಟಗೋಡಿ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಶಿವರಾತ್ರಿ ರಾಚೋಟಿ ವೀರಭದ್ರೇಶ್ವರ ಮಠದ ರಥೋತ್ಸವ, ಶಿವರಾತ್ರಿ ಸಂದರ್ಭದಲ್ಲಿ ಡಾ. ಸಿದ್ದಲಿಂಗ್ಯ ಕಲಾ ಹಾಗೂ ಸಾಂಸ್ಕøತಿಕ ಪ್ರತಿಷ್ಠಾನದಿಂದ ಆಚರಿಸಿದ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು ಮಹಿಳೆಯು ಸಹನೆ, ಕರುಣೆಗೆ ಸೀಮಿತವಾಗದೆ ಧೈರ್ಯ, ಆತ್ಮಸ್ಥೈರ್ಯದ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದರು.
ಮಹಿಳೆಯು ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಪರುಷರನ್ನು ಮೀರುವಷ್ಟು ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ತಾಯಿಯಾಗಿ ಕುಟುಂಬ ರಕ್ಷಣೆ ಮಾಡಿ ದೇಶ ಕಾಯುವ ಯೋಧೆವರೆಗೂ ಬೆಳೆದುನಿಂತಿದ್ದಾಳೆ. ಕೃಷಿ ಕೂಲಿಯಿಂದ ಹಿಡಿದು ದೇಶ ಆಳುವ ನಾಯಕಿಯಾಗಿ ಗುರುತಿಸಿಕೊಂಡಿದ್ದಾಳೆ ಎಂದರು.
ಗ್ರಾಮೀಣ ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಉನ್ನತ ಹುದ್ದೆಗಳಲ್ಲಿ ಸೇರಲು ಸಾಕಷ್ಟು ಅವಕಾಶಗಳಿದ್ದು, ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಕಂಡಿತ ದೊರೆಯುತ್ತದೆ ಎಂದರು.
ಅಧ್ಯಕ್ಷತೆವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷೆ ಮಂಜುಳಾ ಹಿರೇಮಠ ಮಾತನಾಡಿ ಸಮಾಜದ ಸಂಸ್ಕøತಿ, ಸಂಸ್ಕಾರ ,ಆಚರಣೆಗಳು ಉಳಿಸುವಲ್ಲಿ ಮಹಿಳೆಯ ಜವಾಬ್ದಾರಿ ಮುಖ್ಯವಾಗಿದೆ ಎಂದರು.
ವೈದ್ಯಕೀಯ ಕೋರ್ಸ ಮುಗಿಸಿರುವ ಡಾ. ಐಶ್ವರ್ಯ ಹಿರೇಮಠ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿದರು.
ಅಕ್ಕನ ಬಳಗ, ವೀರಭದ್ರೇಶ್ವರ ದೇವಸ್ಥಾನ ಸಮಿತಿ, ವೀರಗಾಸೆ ಪುರವಂತರು ಸೇರಿದಂತೆ ಪಟ್ಟಣದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಖುಷಿ ಮತ್ತು ಕ್ರೂತಿ ರಾಮದುರ್ಗ ಪುಟಾಣಿಗಳು ಶಿವ, ಪಾರ್ವತಿ ವೇಷದಲ್ಲಿ ಎಲ್ಲರ ಗಮನಸೆಳದರು.
ರಾಜಶ್ರೀ ಹಿರೇಮಠ ಸ್ವಾಗತಿಸಿದರು. ಶಿವಲೀಲಾ ಹೂಗಾರ ನಿರೂಪಿಸಿದರು, ಸಹನಾ ರಾಮದುರ್ಗ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ