Breaking News
Home / Recent Posts / ನ.29ರಂದು ಬೆಟಗೇರಿ ದ್ಯಾಮವ್ವದೇವಿ ಕಾರ್ತಿಕೋತ್ಸವ
????????????????????????????????????

ನ.29ರಂದು ಬೆಟಗೇರಿ ದ್ಯಾಮವ್ವದೇವಿ ಕಾರ್ತಿಕೋತ್ಸವ

Spread the love

ನ.29ರಂದು ಬೆಟಗೇರಿ ದ್ಯಾಮವ್ವದೇವಿ ಕಾರ್ತಿಕೋತ್ಸವ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ಕಾರ್ತಿಕೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ ನ.29ರಂದು ನಡೆಯಲಿದೆ.
ನ.29ರಂದು ಬೆಳಿಗ್ಗೆ 7 ಗಂಟೆಗೆ ಸ್ಥಳೀಯ ದ್ಯಾಮವ್ವದೇವಿ ದೇವಸ್ಥಾನದಲ್ಲಿರುವ ಶ್ರೀದೇವಿಯ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ, ಶ್ರೀದೇವಿ ಶೃಂಗಾರಗೊಳಿಸುವ, ಉಡಿತುಂಬುವದು, ಪುರದೇವರ ವಿವಿಧ ಪಲ್ಲಕ್ಕಿಗಳ ಬರಮಾಡಿಕೊಳ್ಳುವದು, ಸಂಜೆ 7 ಗಂಟೆಗೆ ಪಲ್ಲಕ್ಕಿ ಉತ್ಸವ, ಪುರಜನರಿಂದ ಪೂಜೆ ಪುನಸ್ಕಾರ, ನೈವೇದ್ಯ ಸಮರ್ಪನೆ ಬಳಿಕ ಮಹಾಪ್ರಸಾದ, ದೀಪೋತ್ಸವ, ಕಾರ್ತಿಕೋತ್ಸವ ಜರುಗಲಿದೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರಾಜಕೀಯ ಮುಖಂಡರು, ಗಣ್ಯರು, ಗ್ರಾಮ ಪಂಚಾಯತಿ ಮತ್ತು ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಸಂತ-ಶರಣರು ಮುಖ್ಯಅತಿಥಿಗಳಾಗಿ ಕಾರ್ತಿಕೋತ್ಸವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆಂದು ಇಲ್ಲಿಯ ಗ್ರಾಮದೇವತೆ ದ್ಯಾಮವ್ವದೇವಿ ಕಾರ್ತಿಕೋತ್ಸವ ಆಚರಣಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.


Spread the love

About inmudalgi

Check Also

ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಿದೆ’ – ನೇತ್ರತಜ್ಞ ಡಾ. ಸಚಿನ್ ಟಿ.

Spread the love ಕಣ್ಣುಗಳು ಆರೋಗ್ಯ ನಿರ್ಲಕ್ಷಿಸಬಾರದು ಮೂಡಲಗಿ: ಮನುಷ್ಯನ ದೇಹದ ಆರೋಗ್ಯಕ್ಕೆ ಕಣ್ಣುಗಳು ದಿಕ್ಸೂಚಿ ಇದ್ದಂತೆ, ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ