ಮೂಡಲಗಿ: ಪ್ರಸಕ್ತ ರಾಜ್ಯದಲ್ಲಿ ಸಿಡಿ ಪ್ರಕರಣದ ಕೋಲಾಹಲಕ್ಕೆ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಂಡು, ಜಾರಕಿಹೊಳಿ ಕುಟುಂಭಕ್ಕೆ ಮುಜಗುರು ಉಂಟಾಗುವದರ ಜೊತೆಗೆ ಚಾರಿತ್ರಿಕವಾಗಿ ತೆಜೋವದೆಯಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೇದ ಕೇಲವು ದಿನಗಳಿಂದ ಅನಾಮದೇಯ ಸಿಡಿಯೊಂದು ಭಿತ್ತರಗೊಂಡ ನಂತರ ರಾಜ್ಯದ ರಾಜಕೀಯ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಪ್ರಕರಣ ದಾಖಲಾಗಿ ಎಸ್.ಐ.ಟಿಗೆ ವರ್ಗವಾದ ನಂತರ ಕೇಲವರ ಬಂಧನವಾಯಿತು. ಸಿಡಿಯಲ್ಲಿರುವ ಯುವತಿ ಎನ್ನಲಾಗುವರು ವಿಡಿಯೋ ಒಂದನ್ನು ಸಾಮಾಜಿ ಜಾಲತಾನ ಹಾಗೂ ದೃಷ್ಯ ಮಾದ್ಯಮಗಳಲ್ಲಿ ಭಿತ್ತರಗೊಂಡಿದೆ. ಸದ್ಯದ ಸ್ಥಿತಿಯಲ್ಲಿ ರಾಜ್ಯ ರಾಜಕಾರಣದಲ್ಲಿ ಮುಂಚೂಣಿಯಲ್ಲಿರುವ ಜಾರಕಿಹೊಳಿಯವರ ಸಿಡಿ ಪ್ರಕರಣವು ನಿಷ್ಪಕ್ಷವಾಗಿ ತನಿಖೆಯಾಗಿ ಜಾರಕಿಹೊಳಿ ಕುಟುಂಬಕ್ಕೆ ಆಗಿರುವ ತೊಂದರೆಯನ್ನು ಸರಿಪಡಿಸಬೇಕು ಇಲ್ಲದಿದ್ದರೆ ಹೋರಾಟದ ಹಾದಿ ಅನಿವಾರ್ಯ ಎಂದು ತಿಳಿಸಿದ್ದಾರೆ.
IN MUDALGI Latest Kannada News