ಮೂಡಲಗಿ: ಬುದ್ದ, ಬಸವ, ಅಂಬೇಡ್ಕರ ಅವರ ವಿಚಾರಧಾರೆಗಳು ತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಗೌರವಯುತ ಜೀವನ ಸಾಗಿಸಲು ಸಾಧ್ಯ ಎಂದು ಸ್ಥಳೀಯ ಡಿಎಸ್.ಎಸ್ ಜಿಲ್ಲಾ ಸಂಚಾಲಕ ಮತ್ತು ಮೂಡಲಗಿ ಪುರಸಭೆ ಮಾಜಿ ಸದಸ್ಯ ರಮೇಶ ಸಣ್ಣಕ್ಕಿ ಹೇಳಿದರು.
ಇಲ್ಲಿಯ ಶೀವಬೋಧರಂಗ ಮಠದ ರಸ್ತೆಯಲ್ಲಿರುವ ಅಂಬೇಡ್ಕರ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಮೂಡಲಗಿ ತಾಲೂಕಿನ ವಿವಿಧ ದಲಿತ ಸಂಘಟನೆಗಳ ಆಶ್ರಯದಲ್ಲಿ ಜರುಗಿದ ಮಹಾನಾಯಕ ಡಾ:ಬಾಬಾಸಾಹೇಬ ಅಂಬೇಡ್ಕರ ಅವರ 130 ನೇ ಜಯಂತಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ತಮ್ಮ ಮಕ್ಕಳನ್ನು ಶಿಕ್ಷಣವಂತರಾಗಿ ಸಂಘಟನೆಯೊಂದಿಗೆ ಹೋರಾಟ ಮಾಡಿ ತಮಗಿರುವ ಹಕ್ಕು ಹಾಗೂ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ತಿಳಿಸಿದರು.
ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಬಾಳೇಶ ಬನಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಆರ್.ಪಿ ಸೋನವಾಲಕರ, ಮರೇಪ್ಪ ಮರೆಪ್ಪಗೋಳ, ಪುರಸಭೆ ಸದಸ್ಯರಾದ ಶಿವು ಚಂಡಕಿ, ಜಯಾನಂದ ಪಾಟೀಲ, ಹಸೇನ ಶೇಖ, ಸಂತೋಷ ಸೋನವಾಲಕರ, ಮುಖಂಡರಾದ ಮಲ್ಲಿಕಾರ್ಜುನ ಕಬ್ಬೂರ, ಶಾಬು ಸಣ್ಣಕ್ಕಿ, ಈರಪ್ಪ ಬನ್ನೂರ, ಅನ್ವರ ನದಾಫ್, ನಿಂಗಪ್ಪ ಪಿರೋಜಿ, ಡಾ.ಎಸ್.ಎಸ್ ಪಾಟೀಲ, ಮಲಿಕ್ ಹುಣಶ್ಯಾಳ, ವಿಲಾಸ ಸಣ್ಣಕ್ಕಿ, ಅಶೋಕ ಮರೆನ್ನವರ ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅವರ 130 ನೇ ಜಯಂತಿಯ ಕಾರ್ಯಕ್ರಮ ಜರುಗಿತು.
Home / ತಾಲ್ಲೂಕು / ಬುದ್ದ, ಬಸವ, ಅಂಬೇಡ್ಕರ ಅವರ ವಿಚಾರಧಾರೆಗಳು ತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಗೌರವಯುತ ಜೀವನ ಸಾಗಿಸಲು ಸಾಧ್ಯ-ರಮೇಶ ಸಣ್ಣಕ್ಕಿ
Check Also
ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ
Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …