ಮೂಡಲಗಿಯಲ್ಲಿ ಕಾರ್ಮಿಕರ ದಿನಾಚರಣೆಯನ್ನು ಸರಳವಾಗಿ ಆಚರಣೆ.
ಯುವ ಜೀವನ ಸೇವಾ ಸಂಸ್ಥೆ ಹಾಗೂ ಸಮರ್ಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ಆಶ್ರಯದಲ್ಲಿ ಸ್ಥಳೀಯ ಕಾರ್ಮಿಕರಾದ ಬಸವರಾಜ ಪೋಳ, ಬೀರಪ್ಪ ಮಾಳಗಿ ಶಾನೂರ ಸನ್ನಕ್ಕಿ ಇವರನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ಹಣಮಂತ ಗುಡ್ಲಮನಿ, ಓಂಕಾರ ಜೋತಿ ಸಂಘದ ಅಧ್ಯಕ್ಷ ಗುರು ಗಂಗನ್ನವರ, ಯುವ ಜೀವನ ಸೇವಾ ಸಂಘದ ಕಾರ್ಯದರ್ಶಿ ಬೀರು ವನಶನ್ನಿ, ಸಮರ್ಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ, ಕಲಾವಿದ ಮಂಜುನಾಥ ರೇಳೆಕರ ಇದ್ದರು.
