ಕಡು ಬಡವರಿಗೆ ಅಂಜುಮನ ಸೊಸೈಟಿಯಿಂದ ಅಗತ್ಯ ವಸ್ತುಗಳ ಕಿಟ್ ವಿತರಣೆ
ಮೂಡಲಗಿ: ಕೊರೋನಾ ಎರಡನೇ ಅಲೆಯ ಜನತಾ ಕಪ್ರ್ಯೂ ಹಾಗೂ ಲಾಕ್ ಡೌನ್ ಸಮಯದಲ್ಲಿ ಕಡು ಬಡವರನ್ನು ಗುರುತಿಸಿ ಶುಕ್ರವಾರ ಇಲ್ಲಿಯ ಅಂಜುಮನ ಎ ಇಸ್ಲಾಂ ಕಮೀಟಿಯು 50 ಕಡು ಬಡವರಿಗೆ ಅಗತ್ಯ ವಸ್ತುಗಳ ದಿನಸಿ ಆಹಾರ ಸಾಮಗ್ರಿ ಕಿಟ್ ವಿತರಿಸಿದರು
ಅಂಜುಮನ ಕಮಿಟಿ ಅಧ್ಯಕ್ಷ ಮಲೀಕ ಹುಣಶ್ಯಾಳ ಕಿಟ್ ವಿತರಿಸಿ ಮಾತನಾಡಿ, ಕೊರೋನಾ ನಿಯಂತ್ರಣಕ್ಕೆ ಸರಕಾರ ಜನತಾ ಕಪ್ರ್ಯೂ ಹೇರಿದ್ದು ಸದ್ಯ ಇಂದಿನಿಂದ ಮೂಡಲಗಿ ಪಟ್ಟಣ ಸಂಪೂರ್ಣ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ ಕೊರೋನಾ ನಿಂತ್ರಣಕ್ಕೆ ಇದು ಒಳ್ಳೆಯ ನಿರ್ಧಾರವಾಗಿದೆ ಇದಕ್ಕೆ ಸಾರ್ವಜನಿಕರ ಸಹಕಾರ ಕೂಡ ಅಗತ್ಯವಿದೆ ಸಧ್ಯ ರಮಜಾನ ಹಬ್ಬ ಕೂಡ ಸಮೀಪಿಸುತ್ತಿರುವುದರಿಂದ ಕಡು ಬಡವರಿಗೆ ನೆರವಾಗುವ ದೃಷ್ಟಿಯಿಂದ ನಮ್ಮ ಕಮಿಟಿ ವತಿಯಿಂದ ಕಡು ಬಡವರಿಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ಕೊಡುತ್ತಿದ್ದೇವೆ ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಸಹಾಯ ಒದಗಿಸಲಾಗುವುದು ಲಾಕ್ ಡೌನ ವೇಳೆಯಲ್ಲಿ ಯಾರೂ ಹೊರಗೆ ಬರದೇ ಮನೆಯಲ್ಲೇ ಇರಿ ಜೀವ ಅಮೂಲ್ಯವಾಗಿದೆ ಜೀವವಿದ್ದರೆ ಮುಂದೆ ಏನನ್ನಾದರೂ ಸಾಧಿಸಬಹುದು ಸರಕಾರದ ನಿಯಮಗಳನ್ನು ಚಾಚುತಪ್ಪದೆ ಪಾಲಿಸಬೇಕು. ಮನೆಯಿಂದ ಯಾರು ಅನಾವಶ್ಯಕವಾಗಿ ಹೊರಗೆ ಬರಬೇಡಿ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಕ ಕೊರೋನಾ ವೈರಸ್ ತೊಲಗಿಸಲು ಎಲ್ಲರೂ ಒಂದಾಗಿ ಹೋರಾಡುವಂತೆ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಅಂಜುಮನ ಕಮಿಟಿ ಉಪಾಧ್ಯಕ್ಷ ಮೌಲಾಸಾಬ ಮೊಗಲ, ಕಾರ್ಯದರ್ಶಿ ಶಕೀಲ ಬೇಪಾರಿ, ಅಕ್ಬರ ಪಾಶ್ಚಾಪೂರ, ಮುಫ್ತಿ ಇಬ್ರಾಹಿಂ ಶೇಖ, ಲಾಲಸಾಬ ಸಿದ್ದಾಪೂರ, ಸದಸ್ಯರಾದ ಅಪ್ಪಾಸಾಬ ನದಾಫ್, ಬಾಪುಸಾಬ ಬಿದರಿ, ಮೌಲಾನಾ ಅಬೂಬಕ್ಕರ ಪೈಲವಾನ, ಸಾಹೇಬಲಾಲ ಗದ್ಯಾಳ, ಇಸ್ಮಾಯಿಲ್ ಇನಾಮದಾರ, ಅಶ್ಫಾಕ ಕಲಾರಕೊಪ್ಪ, ಮಗತುಮ ಬೇಪಾರಿ, ಇಕ್ಬಾಲ್ ಪೈಲವಾನ ಇನ್ನಿತರರು ಇದ್ದರು.