Breaking News
Home / Recent Posts / ಕೊಂಕಣ ರೈಲ್ವೆ ಸಮಿತಿಗೆ – ಸಂಸದ ಈರಣ್ಣ ಕಡಾಡಿ

ಕೊಂಕಣ ರೈಲ್ವೆ ಸಮಿತಿಗೆ – ಸಂಸದ ಈರಣ್ಣ ಕಡಾಡಿ

Spread the love

ಕೊಂಕಣ ರೈಲ್ವೆ ಸಮಿತಿಗೆ – ಸಂಸದ ಈರಣ್ಣ ಕಡಾಡಿ

ಮೂಡಲಗಿ: ಕೊಂಕಣ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯರನ್ನಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ನಾಮನಿರ್ದೇಶನ ಮಾಡಿರುವುದಾಗಿ ಕೊಂಕಣ ರೈಲ್ವೆ ನಿಗಮ ನಿಯಮಿತ ಸಂಸ್ಥೆ ಪ್ರಕಟನೆ ಮೂಲಕ ತಿಳಿಸಿದೆ.
ಶನಿವಾರ ಜೂನ 26 ರಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು ಕೊಂಕಣ ರೈಲ್ವೆ ನಿಗಮದ ಮುಂಬರುವ ಯೋಜನೆಗಳ ಅನುμÁ್ಠನ, ನಿಗಮದ ಗುರಿ ಮತ್ತು ಉದ್ದೇಶಗಳ ಸಾಧನೆ, ಸಮರ್ಥ ಕಾರ್ಯನಿರ್ವಹಣೆಯಲ್ಲಿ ನೆರವು ಹಾಗೂ ಮಾರ್ಗದರ್ಶನದ ಜವಾಬ್ದಾರಿ ನಿರ್ವಹಿಸಲು ನಿಗಮವು ಕೊರಿಕೊಂಡಿದೆ.
ಎರಡು ವರ್ಷಗಳ ಈ ಅಧಿಕಾರ ಅವಧಿಯಲ್ಲಿ ಕರ್ನಾಟಕದ ರೈಲ್ವೆ ಬೆಳೆವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಂಸದ ಈರಣ್ಣ ಕಡಾಡಿ ಅವರಿಗೆ ಅವಕಾಶ ಒದಗಿದೆ. ಕೊಂಕಣ ರೈಲ್ವೆ ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ವ್ಯಾಪ್ತಿಯನ್ನು ಹೊಂದಿದೆ. ಕೊಂಕಣ ರೈಲ್ವೆ ಬಳಕೆದಾರರ ಸಲಹಾ ಸಮಿತಿಯಲ್ಲಿ ಸಂಸದರು, ಶಾಸಕರು, ವಾಣಿಜ್ಯೋದ್ಯಮ ಮತ್ತು ಕೈಗಾರಿಕೆಗಳ ಚೇಂಬರಗಳ ಪ್ರತಿನಿಧಿಗಳು ಮತ್ತು ಪಾಸೆಂಜರ್ ಅಸೋಶಿಯೇಶನ್ ಸದಸ್ಯರಾಗಿರುತ್ತಾರೆ.
ಶ್ಲಾಘನೀಯ: 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ ಸಮಾನತೆಯ ಹರಿಕಾರ, ವಿಶ್ವ ಗುರು ಬಸವಣ್ಣನವರ ಪುತ್ಥಳಿಯನ್ನು ಕರ್ನಾಟಕ ವಿಧಾನಸೌಧದ ಆವರಣದಲ್ಲಿ ನಿರ್ಮಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕ್ರಮವನ್ನು ಸಂಸದ ಈರಣ್ಣ ಕಡಾಡಿ ಅವರು ಶ್ಲಾಘಿಸಿದ್ದಾರೆ.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ