Breaking News
Home / Recent Posts / ಹೊಸಮನಿ ಪ್ರತಿಷ್ಠಾನಿಂದ ಐವರು ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

ಹೊಸಮನಿ ಪ್ರತಿಷ್ಠಾನಿಂದ ಐವರು ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

Spread the love

ಹೊಸಮನಿ ಪ್ರತಿಷ್ಠಾನಿಂದ ಐವರು ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

ಮೂಡಲಗಿ: ಕೌಜಲಗಿಯ ದಿ.ಶ್ರೀ ಬಾಳಪ್ಪ ಬಿ.ಹೊಸಮನಿ ಪ್ರತಿಷ್ಠಾನದಿಂದ ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಸನ್2021-22ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದಲ್ಲಿ ಉತ್ತಮ ಸೇವೆಯನ್ನು ಗುರುತಿಸಿ ಐವರು ಶಿಕ್ಷಕರಿಗೆ ತಾಲೂಕಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಮೂಡಲಗಿಯಲ್ಲಿ ಜರುಗಿದ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರಧಾನವನ್ನು ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೌಜಲಗಿ ಮಾಜಿ ಜಿ.ಪಂ ಸದಸ್ಯ ಪರಮೇಶ್ವರ ಬಾ.ಹೊಸಮನಿ ಪ್ರದಾನ ಮಾಡಿ ಗೌರವಿಸಿದರು.

ಆದರ್ಶಶಿಕ್ಷಕ ಪ್ರಶಸ್ತಿಗೆ ಭಾಜನರಾದ ರಡ್ಡೇರಟ್ಟಿಯ ಲಗಳಿ ತೋಟದ ಸರಕಾರಿ ಶಿಕ್ಷಕs ಸಿದ್ಧಪ್ಪ ಕೆಂಚಪ್ಪ ಹಳ್ಳೂರ, ಬೆಟಗೇರಿ ವಿ.ವಿ.ಡಿ ಸರಕಾರಿ ಪ್ರೌಢ ಶಾಲೆಯ ರಾಕೇಶ ತಾನಾಜಿ ನಿಡೋಣಿ, ಸರಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆಯ ಶಿಕ್ಷಕ ಸಿದ್ಧಪ್ಪ ಭೀಮಪ್ಪಾ ಸನದಿ, ಕೌಜಲಗಿಯ ಡಾ.ಎಮ್.ಎಮ್.ದಳವಾಯಿ ಪ್ರೌಢ ಶಾಲೆಯ ವಿವೇಕಾನಂದ ಲಕ್ಕಪ್ಪ ಹಳ್ಳೂರ, ಕರ್ನಾಟಕ ಪಬ್ಲಿಕ ಶಾಲೆಯ ಶಿಕ್ಷಕ ವೆಂಕಟೇಶ ಮಾ.ಕೌಜಲಗಿ ಅವರನ್ನು ಸಮಾರಂಭದ ವೇದಿಕೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ನಿಂಗಪ್ಪ ಕುರಬೇಟ, ತಹಶಿಲ್ದಾರ ಡಿ.ಜಿ.ಮಹಾತ, ಸಿ.ಪಿ.ಆಯ್.ವೆಂಕಟೇಶ ಮುರನಾಳ, ತಾ.ಪಂ ಎಒ ಸಂದೀಪ ಚೌಗಲಾ, ತಜ್ಞ ವೈದ್ಯ ಡಾ.ಆರ್.ಎಸ್.ಬೆಣಚನಮರ್ಡಿ, ಬಿ.ಇ.ಒ ಅಜೀತ ಮನ್ನಿಕೇರಿ ಮತ್ತಿತರು ಶಾಲು ಹೊದಿಸಿ, ಪ್ರಶಸ್ತಿ ಪ್ರತ ನೀಡಿ ಗೌರವಿಸಿದರು.
ಬಿಇ.ಒ ಅಜೀತ ಮನನ್ನಿಕೇರಿ ಅವರು ದಿ.ಶ್ರೀ ಬಾಳಪ್ಪ ಬಿ.ಹೊಸಮನಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೌಜಲಗಿ ಮಾಜಿ ಜಿ.ಪಂ ಸದಸ್ಯ ಪರಮೇಶ್ವರ ಬಾ.ಹೊಸಮನಿ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಸತತ ಏಳು ವರ್ಷಗಳಿಂದ ಶಿಕ್ಷಕಣ ಕ್ಷೇತ್ರದಲ್ಲಿ ಉತ್ತಮ ಸೇವೆಸಲ್ಲಿಸಿದ ಶಿಕ್ಷಕ-ಶಿಕ್ಷಕಿಯರನ್ನು ಗರುತಿಸಿ ಜಾತಿ, ಬೇಧ, ಮತ, ಪಕ್ಷ ಹಾಗೂ ಯಾವುದೇ ಭೇಧ ಭಾವ ಮಾಡದೆ ಸಮಾಜದಲ್ಲಿ ಅವರನ್ನು ತೊಡಗಿಸಿಕೊಂಡು ಶಿಕ್ಷಕರನ್ನು ಗೌರವಿಸುವ ಮುಖಾಂತ ಶಿಕ್ಷಕರು ಇನ್ನೂ ಹೆಚ್ಚು ಕಾರ್ಯ ಮಾಡಲು ಸ್ಪೂತ್ರ್ತಿದಾಯಕ ಕಾರ್ಯ ಮಾಡುತ್ತಿರುವು ಶ್ಲಾಘನಿಸಿ ಶಿಕ್ಷಕರ ಪರವಾಗಿ ಕೃತ್ಞತೆಗಳನ್ನು ಸಲ್ಲಿಸಿದರು.
ಈ ಸಮಯದಲ್ಲಿ ಕೌಜಲಗಿಯ ಪುಂಡಲೀಕ ಯಡವನ್ನವರ, ಭೀಮಶಿ ಶಿವಾಪೂರ, ಬಸಯ್ಯಾ ಸತ್ತಿಗೇರಿ, ಮಹಮ್ಮದಸಾಬ ಫರಾಸ, ಹಣಮಂತ ಗೋಸಬಾಳ ಮತ್ತಿತರು ಇದ್ದರು.

 


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ