Breaking News
Home / Recent Posts / ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳ ಮಕ್ಕಳಿಗೆ ಹೂಗುಚ್ಚ ನೀಡಿ ಸ್ವಾಗತ

ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳ ಮಕ್ಕಳಿಗೆ ಹೂಗುಚ್ಚ ನೀಡಿ ಸ್ವಾಗತ

Spread the love

ಬೆಟಗೇರಿ:ಕರೊನಾ ಸೋಂಕಿನ ಭೀತಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಬಂದ್ ಆಗಿದ್ದ ಶಾಲೆಗಳು ಸರ್ಕಾರದ ನಿರ್ದೇಶನದಂತೆ ಆರಂಭವಾದ ಹಿನ್ನಲೆಯಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳನ್ನು ಭವ್ಯ ಸ್ವಾಗತ ಕೋರುವ ಕಾರ್ಯಕ್ರಮ ಸೋಮವಾರ ಸೆ.6 ರಂದು ನಡೆಯಿತು.


ಗಂಡು ಮಕ್ಕಳ ಶಾಲೆಯ ಮುಖ್ಯಶಿಕ್ಷಕ ವೈ.ಸಿ.ಶೀಗಿಹಳ್ಳಿ ಅವರು ಮಾತನಾಡಿ, ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ ನಿಯಮಗಳನ್ನು ಶಾಲಾ ಮಕ್ಕಳಿಗೆ ತಿಳಿಸಿದರು. ಶಾಲಾ ಮಕ್ಕಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿಕೊಳ್ಳುವ ಮುಂಚೆ ಕೊವೀಡ್ ಪರೀಕ್ಷೆ ಮಾಡಿದ ಬಳಿಕ ಸರಸ್ವತಿ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಸಮರ್ಪನೆ ಜರುಗಿತು.
ಶಾಲೆಯ ವಿದ್ಯಾರ್ಥಿಗಳನ್ನು ಭವ್ಯ ಸ್ವಾಗತ ಕೊರಲು ಉಭಯ ಕನ್ನಡ ಶಾಲೆಯ ಪ್ರವೇಶಕ್ಕೆ ತಳಿರು ತೋರಣ, ಸ್ವಾಗತ ಕೊರುವ ಪ್ರಯುಕ್ತ ಶಾಲಾ ಕೊಠಡಿಗಳ ಪ್ರವೇಶದ ದಾರಿಯುದ್ದಕ್ಕೂ ಅಲ್ಲಲ್ಲಿ ಮಕ್ಕಳಲ್ಲಿ ಉತ್ಸಾಹ ತುಂಬಲು ಬರೆದ ಬರಹಗಳು ರಂಗೋಲಿ ಚಿತ್ರಗಳು ರಾರಾಜಿಸಿದವು. ಶಾಲಾ ಆರಂಭದ ಇಂದಿನ ದಿನ ಇಲ್ಲಿಯ ಉಭಯ ಶಾಲಾ ಮಕ್ಕಳಲ್ಲಿ ನವೂತ್ಸಾಹ ತುಂಬಲು ಶಾಲೆಯ ಶಿಕ್ಷಕ ವೃಂದ ಸ್ವಾಗತ ಕೊರುವ ಕಾರ್ಯ ಕೈಗೊಂಡಿದ್ದರು. ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಶಾಲಾ ಆರಂಭಕ್ಕೆ ಹರ್ಷ ವ್ಯಕ್ತಪಡಿಸಿದರು.
ಉಭಯ ಶಾಲೆಗಳ ಎಸ್‍ಡಿಎಂಸಿ ಅಧ್ಯಕ್ಷರಾದ ರಾಮಣ್ಣ ನೀಲಣ್ಣವರ, ಉದ್ದಪ್ಪ ಚಂದರಗಿ, ಹೆಣ್ಣು ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ಆರ್.ಬಿ.ಬೆಟಗೇರಿ, ಎಸ್.ವೈ.ಸನದಿ, ಆರ್.ಬಿ.ನಾಯ್ಕ, ಗೀತಾ ಕಮತ, ವಿದ್ಯಾ ಪತ್ತಾರ, ಶಕುಂತಲಾ ಬಿರಾದಾರ, ಚೆನ್ನಮ್ಮ ಕುನ್ನಾಳ, ಉಭಯ ಶಾಲೆಗಳ ಎಸ್‍ಡಿಎಂಸಿ ಸದಸ್ಯರು, ಶಿಕ್ಷಕರು, ಬಿಸಿಯೂಟ ಅಡುಗೆ ಸಿಬ್ಬಂದಿ, ಶಿಕ್ಷಣ ಪ್ರೇಮಿಗಳು ಇದ್ದರು.


Spread the love

About inmudalgi

Check Also

ಬೆಟಗೇರಿಯಲಿ ವಿಶ್ವ ಪರಿಸರ ದಿನ ಆಚರಣೆ

Spread the loveಬೆಟಗೇರಿಯಲಿ ವಿಶ್ವ ಪರಿಸರ ದಿನ ಆಚರಣೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೇಟ್ರಿಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ