Breaking News
Home / Recent Posts / ಗುರು ಶಿಷ್ಯರ ಸಂಬಂಧವು ಪವಿತ್ರವಾದದ್ದು

ಗುರು ಶಿಷ್ಯರ ಸಂಬಂಧವು ಪವಿತ್ರವಾದದ್ದು

Spread the love

ಗುರು ಶಿಷ್ಯರ ಸಂಬಂಧವು ಪವಿತ್ರವಾದದ್ದು

ಮೂಡಲಗಿ: ‘ಗುರು ಶಿಷ್ಯರ ಸಂಬಂಧವು ಪವಿತ್ರವಾಗಿದ್ದು,ವಿಧೆಯತೆಯ ಮೂಲಕ ಗುರುವಿನ ಸಾಕಾರತೆಯನ್ನು ಶಿಷ್ಯರು ಕಾಣಬೇಕು’ ಎಂದು ಬ್ರಹ್ಮಕುಮಾರಿ ರೇಖಾಜೀ ಅವರು ಹೇಳಿದರು.
ಇಲ್ಲಿಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಚರಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಭಕ್ತರು ನೀಡಿದ ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು ಗುರು ಆದವರು ಶಿಷ್ಯರನ್ನು ಬೆಳೆಸುವ ಎಲ್ಲ ಸಾಮಥ್ರ್ಯವನ್ನು ಹೊಂದಿರಬೇಕು ಎಂದರು.
ಗುರು ಜ್ಞಾನವನ್ನು ನೀಡುವ ಪುಸ್ತಕದ ಭಂಡಾರವಿದ್ದಂತೆ. ಎಲ್ಲರನ್ನು ಜ್ಞಾನವಂತರನ್ನಾಗಿಸಿ ಆದರ್ಶ ಜೀವನಕ್ಕೆ ದಾರಿ ತೋರಬೇಕು. ಪ್ರೀತಿ, ವಿಶ್ವಾಸಗಳು ಶಾಶ್ವತವಾಗಿ ಉಳಿಯಬೇಕು ಎಂದರು.
ಬ್ರಹ್ಮಕುಮಾರಿ ರೇಖಾಜೀ ಹಾಗೂ ಬ್ರಹ್ಮಕುಮಾರಿ ಸವಿತಾಜೀ ಅವರನ್ನು ಭಕ್ತವೃಂದವು ಸನ್ಮಾನಿಸಿ ಗೌರವಿಸಿದರು.
ಶಿವಪುತ್ರಯ್ಯ ಮಠಪತಿ, ಯಲ್ಲಪ್ಪ ಕುಲಿಗೋಡ, ಗುರಲಿಂಗಪ್ಪ ಶೀಲವಂತ, ಮಲ್ಲಿಕಾರ್ಜುನ ಎಮ್ಮಿ, ಶಿವಬಸು ಗುರವ, ತುಂಗವ್ವ ಸೋನವಾಲಕರ, ಸುಮಿತ್ರಾ ಸೊನವಾಲಕರ, ಮಹಾದೇವಿ ತಾಂವಶಿ, ರಜನಿ ಬಂದಿ, ಮಂಗಲಾ ಬಡ್ಡಿ, ಲಕ್ಷ್ಮೀ ಇದ್ದರು.

 


Spread the love

About inmudalgi

Check Also

ಬಸವರಾಜ ಪಾಟೀಲ ರಾಜ್ಯ ಮಟ್ಟದ ಗುಂಡು ಎಸೆತ ಸ್ಪರ್ಧೆಗೆ ಆಯ್ಕೆ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಸ್.ವೈ.ಸಿ ಶಿಕ್ಷಣ ಸಂಸ್ಥೆಯ ಶ್ರೀ ಸದ್ಗುರು ಯಾಲ್ಲಾಲಿಂಗ ಸ್ವತಂತ್ರ ಪದವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ