ಹುಬ್ಬಳ್ಳಿ ಸದ್ಗುರು ಸಿದ್ಧಾರೂಢರು ಶಿವನವತಾರಿಯಾಗಿದ್ದರು: ಚಿದಾನಂದ ಮಹಾಸ್ವಾಮಿಜಿ
ಬೆಟಗೇರಿ:ಹುಬ್ಬಳ್ಳಿ ಸದ್ಗುರು ಸಿದ್ಧಾರೂಢರು ಸಕಲರಿಗೆ ಒಳ್ಳೆಯದನ್ನೇ ಬಯಸಿದ ಮಹಾನ್ ಕರುಣಾಮಯಿ ಸದ್ಗುರುವಾಗಿದ್ದರು. ಸದ್ಗುರು ಸಿದ್ಧಾರೂಢರು ಶಿವನವತಾರಿಯಾಗಿದ್ದರು ಎಂದು ಮಲ್ಲಾಪೂರದ ಚಿದಾನಂದ ಮಹಾಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗಜಾನನ ವೇದಿಕೆಯಲ್ಲಿ ಸೆ.11 ರಂದು ನಡೆದ 37ನೇ ಸತ್ಸಂಗ ಸಮ್ಮೇಳನ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇಲ್ಲಿಯ ಸತ್ಸಂಗ ಸಮ್ಮೇಳನಕ್ಕೆ ತನು, ಮನ, ಧನ ಸಹಾಯ, ಸಹಕಾರ ನೀಡುತ್ತಿರುವ ಬೆಟಗೇರಿ ಗ್ರಾಮಸ್ಥರ ಕಾರ್ಯ ಶ್ಲಾಘಿನೀಯವಾಗಿದೆ. ಭಗವಂತನ ರೂಪದಲ್ಲಿ ಸಿದ್ಧಾರೂಢರು ಧರೆಯ ಮೇಲೆ ಅವತರಿಸಿ ಈ ಲೋಕದ ಜನರಲ್ಲಿ ಅಜ್ಞಾನದ ಅಂದಕಾರ ಕಳೆದು, ಸುಜ್ಞಾನದ ಬೆಳಕು ನೀಡಿ, ಸಕಲರನ್ನೂ ಉದ್ಧರಿಸಿದ ಮಹಾನ ಸದ್ಗುರುವಾಗಿದ್ದರು ಎಂದರು.
ಶಿವಶರಣೆ ಡಾ.ನೀಲಮ್ಮತಾಯಿ ಅಸುಂಡಿ, ಹುಣಶ್ಯಾಳದ ನಿಜಗುಣ ದೇವರು, ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ, ತೊಂಡಿಕಟ್ಟಿ ಅಭಿನವ ವೆಂಕಟೇಶ್ವರ ಮಹಾರಾಜರು, ಶಿವಶರಣೆ ಮೈತ್ರಾದೇವಿ, ತಿಮ್ಮಾಪುರ ಶ್ರೀಗಳು ಅವರಿಂದ ಸದ್ಗುರು ಸಿದ್ಧಾರೂಢರ ಲೀಲಾಜೀವನದ ಕುರಿತು ಪ್ರವಚನ, ಕರಕಟ್ಟಿ ಗುರುನಾಥ ಶಾಸ್ತ್ರೀಗಳಿಂದ ಕೀರ್ತನೆ ನಡೆದ ಬಳಿಕ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರು, ಶಾಲಾ ಮಕ್ಕಳು, ಗಣ್ಯರು, ದಾನಿಗಳಿಗೆ ಶ್ರೀಗಳಿಂದ ಶಾಲು ಹೊದಿಸಿ ಸತ್ಕರಿಸಿಲಾಯಿತು.
ಗ್ರಾಮದಲ್ಲಿ 37ನೇ ಸತ್ಸಂಗ ಸಮ್ಮೇಳನ ಸೆ.8ರಿಂದ ಸೆ.11ರವರೆಗೆ ಇಂಚಲದ ಡಾ. ಶಿವಾನಂದ ಭಾರತಿ ಶ್ರೀಗಳ ಘನ ಅಧ್ಯಕ್ಷತೆಯಲ್ಲಿ ಜರುಗಿತು. 4ದಿನಗಳ ಕಾಲ ಈಶ್ವರ ದೇವರ ಗದ್ದುಗೆ ಮುಂ.6ಗಂಟೆಗೆ ಮಹಾಪೂಜೆ, ಅಭಿಷೇಕ, ಸಂಜೆ 7ಗಂಟೆಗೆ ಹೊಸಳ್ಳಿ ಶ್ರೀ ಸೇರಿದಂತೆ ನಾಡಿನ ಹೆಸರಾಂತ ಸ್ವಾಮಿಜಿ, ಸಂತ-ಶರಣರಿಂದ ಪ್ರವಚನ ನಡೆದು, ಸೆ.10ರಂದು ಪ್ರಾತ:ಕಾಲ ಶಿವನಾಮ ಸ್ಮರಣೆ, ಶಿವಾನಂದ ಭಾರತಿ ಶ್ರೀಗಳ ಕೀರಿಟ ಮಹಾಪೂಜೆ, ಶೇಗುಣ್ಸಿಯ ಮಲ್ಲನಗೌಡ ಶಿವಲಿಂಗಪ್ಪಗೋಳ ಅವರಿಂದ ಸಂಗೀತ ಸೇವೆ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಭಜನಾ ತಂಡವರಿಂದ ಶಿವ ಭಜನೆ, ಶಿವ ಜಾಗರಣೆ ನಡೆದು, ಸೆ.11ರಂದು ಪುರಜನರಿಂದ ನೈವೇದ್ಯ ಸಮರ್ಪನೆ, ಸಕಲ ಶ್ರೀಗಳಿಂದ ಪ್ರವಚನ, ಕೀರ್ತನೆ, ಮಹಾಮಂಗಲ, ಮಹಾಪ್ರಸಾದದೊಂದಿಗೆ ಪ್ರಸಕ್ತ ಸತ್ಸಂಗ ಸಮ್ಮೇಳನ ಸರಳವಾಗಿ ಜರುಗಿ ಸಂಪನ್ನಗೊಂಡಿತು.
ಪುಂಡಲೀಕಪ್ಪ ಪಾರ್ವತೇರ, ಬಸಪ್ಪ ದೇಯಣ್ಣವರ, ಬಸವರಾಜ ಪಣದಿ, ಈಶ್ವರ ಬಳಿಗಾರ, ಚಿಂತಪ್ಪ ಸಿದ್ನಾಳ, ಮಹಾದೇವಪ್ಪ ಹಡಪದ, ನಿಂಗಪ್ಪ ಕಂಬಿ, ಈರಪ್ಪ ದೇಯನ್ನವರ, ಬಸನಗೌಡ ದೇಯನ್ನವರ, ಗೌಡಪ್ಪ ಮೆಳೆನ್ನವರ, ಬಸವರಾಜ ನೀಲನ್ನವರ, ಬಸಪ್ಪ ತೋಟಗಿ, ಸಂತ-ಶರಣರು, ಈಶ್ವರ ಭಜನಾ ಮಂಡಳಿ ಸದಸ್ಯರು, ಸ್ಥಳೀಯ ಹಾಗೂ ಸುತ್ತÀ್ತಲಿನ ಹಳ್ಳಿಗಳ ಗಣ್ಯರು ಇತರರಿದ್ದರು.