ಮೂಡಲಗಿ ಪುರಸಭೆ ಕಾರ್ಮಿಕರಿಗೆ ಆಹಾರ ದಾನ್ಯಗಳ ಕಿಟ್ ವಿತರಣೆ
ಮೂಡಲಗಿ : ಕಾರ್ಮಿಕ ಇಲಾಖೆಯಿಂದ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ನೀಡಲಾಗುವ ಆಹಾರ ಕಿಟ್‍ಗಳನ್ನು ಅರಭಾಂವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶದಂತೆ ವಿತರಿಸಲಾಯಿತು ಎಂದು ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಹೇಳಿದರು.
ಸೋಮವಾರದಂದು ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಒಳಗೊಂಡಂತೆ ವಿವಿಧ ವೃತ್ತಿಯಲ್ಲಿರುವ ಬಡವರಿಗೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ಹಾಗೂ ಸರ್ಕಾರ ಸ್ಪಂದಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಮಾತನಾಡಿ, ಶಾಸಕರ ಜನೋಪಯೋಗಿ ಕಾರ್ಯಕ್ರಮಗಳನ್ನು ವಿವರಿಸಿದರು. ಕೋವಿಡ್ ಎರಡನೇ ಅಲೆಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆಂದು ಹೇಳದರು.
ತಹಶೀಲ್ದಾರ ಡಿ.ಜಿ.ಮಹಾತ್ ಹಾಗೂ ಕಾರ್ಮಿಕ ಇಲಾಖೆಯ ನಿರೀಕ್ಷಕ ಪಾಂಡುರಂಗ ಮಾವರಕರ ಮಾತನಾಡಿ, ರಾಜ್ಯ ಕಾರ್ಮಿಕ ಇಲಾಖೆಯಿಂದ ನೀಡುವ ಕಾರ್ಮಿಕ ಕಾರ್ಡಿನಿಂದ ಅನೇಕ ಉಪಯೋಗಗಳಿವೆ. ಇದನ್ನು ಅರಿತು ಪ್ರತಿಯೊಬ್ಬ ಅಸಂಘಟಿತ ಕಾರ್ಮಿಕರೂ ಕೂಡ ಕಾರ್ಡಿಗೆ ಅರ್ಜಿ ಸಲ್ಲಿಸಿ ಇಲಾಖೆಯ ಯೋಜನೆಗಳ ಉಪಯೋಗ ಪಡೆಯಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ದೀಪಕ್ ಹರ್ದಿ, ತಾಪಂ ಸಹಕಾಯಕ ನಿರ್ದೇಶಕ ಎಸ್.ಎಸ್. ರೋಡನ್ನವರ. ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಹಾಗೂ ಪುರಸಭೆ ಸದಸ್ಯರು ಮತ್ತಿತರು ಇದ್ದರು.