ಮೂಡಲಗಿ: ವಾಹನಗಳಲ್ಲಿ ಅಕ್ರಮವಾಗಿ ಅನ್ನಭಾಗ್ಯದ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಎರಡು ವಾಹನಗಳನ್ನು ಮೂಡಲಗಿ ಪಿಎಸ್‍ಐ ಎಚ್.ವೈ.ಬಾಲದಂಡಿ ನೇತೃತ್ವದ ತಂಡ ತಾಲೂಕಿನ ಮುನ್ಯಾಳ ಹಾಗೂ ಖಾನಟ್ಟಿ ಗ್ರಾಮದ ವ್ಯಾಪ್ತಿಯಲ್ಲಿ ವಾಹನಗಳನ್ನು ಜಪ್ತು ಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿದ ಬಗ್ಗೆ ತಿಳಿದು ಬಂದಿದೆ.
ಖಚಿತ ಮಾಹಿತಿ ಮೇರಿಗೆ ಸೋಮವಾರದಂದು ಪಿಎಸ್‍ಐ ಎಚ್.ವೈ.ಬಾಲದಂಡಿ ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ಮಾಡಲು ಮೂಲಕ ತಾಲೂಕಿನ ಮುನ್ಯಾಳ ಗ್ರಾಮದಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಮನೆ ಮನೆಗೆ ತೆರಳಿ ಖರೀಸಿ, ಅದನ್ನು ಹೆಚ್ಚಿನ ಬೆಲೆ ಮಾರಾಟ ಮಾಡಲು ತ್ರೀಚಕ್ರ ವಾಹನದಲ್ಲಿ ಸಾಗುತ್ತಿದ ವೇಳೆ ರಸ್ತೆ ಬಂದಿಯಲ್ಲಿ ನಿಲ್ಲಿಸಿದ ವಾಹನವನ್ನು ತಪಾಸಣೆಗೈದಾಗ ಸುಮಾರು 15,840 ರೂ ಕಿಮ್ಮತ್ತಿನ ಒಟ್ಟು 7.20 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ರಬಕವಿ ಪಟ್ಟಣದ ಆರೋಪಿಗಳಾದ ಬಸವರಾಜ ದುಂಡಪ್ಪ ಜಮಖಂಡಿ, ಪ್ರಭು ಮಾರುತಿ ಅಲಕನೂರ , ಕರೆಪ್ಪ ಪರಸಪ್ಪ ಅಲಕನೂರ, ಶಿರಸು ಸಿದರಾಮ ಖಾನಟ್ಟಿ ಎಂಬುವರನ್ನು ಬಂಧಿಸಿದ್ದಾರೆ.
ಇನ್ನೊಂದು ಪ್ರಕರಣ ದಾಖಲು : ಕಾರ್ಯಾಚಾರಣೆಯಲ್ಲಿ ನಿರತರಾದ ಪೊಲೀಸ್ ಅಧಿಕಾರಿಗಳು ಮಂಗಳವಾರದಂದು ತಾಲೂಕಿನ ಖಾನಟ್ಟಿ ಗ್ರಾಮದಿಂದ ಮದಬಾಂವಿ ಗ್ರಾಮದಕ್ಕೆ ಸಾಗುವ ರಸ್ತೆ ಮಧ್ಯೆ ಮಿನಿ ಟಾಟಾ ಎಸಿ ವಾಹನವನ್ನು ತಪಾಸಣೆಗೈದಾಗ ಸುಮಾರು 11 ಸಾವಿರೂ, ಕಿಮ್ಮಿತ್ತಿನ 5 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ವಾಹನ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
