Breaking News
Home / Recent Posts / ಕಳ್ಳಿಗುದ್ದಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಬಾಳಪ್ಪ ಗೌಡರ ಅವಿರೂಧ. ಆಯ್ಕೆ

ಕಳ್ಳಿಗುದ್ದಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಬಾಳಪ್ಪ ಗೌಡರ ಅವಿರೂಧ. ಆಯ್ಕೆ

Spread the love

ಬೆಟಗೇರಿ:ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಗೋಕಾಕ ತಾಲೂಕಿನ ಕಳ್ಳಿಗುದ್ದಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಬಾಳಪ್ಪ ಗೌಡರ ಅವರು ಅವಿರೂಧವಾಗಿ ಆಯ್ಕೆಯಾಗಿದ್ದಾರೆ.


ಸಮೀಪದ ಕಳ್ಳಿಗುದ್ದಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಅಧ್ಯಕ್ಷರ ಆಯ್ಕೆಗಾಗಿ ಏ.28ರಂದು ನಡೆದ ಚುನಾವಣೆಯಲ್ಲಿ ಇಲ್ಲಿಯ ಗ್ರಾಪಂ ನೂತನ ಅಧ್ಯಕ್ಷರಾಗಿ ಬಾಳಪ್ಪ ಗೌಡರ ಅವರು ಅವಿರೂಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಗೋಕಾಕ ಜಿಆರ್‍ಬಿಸಿ ಉಪವಿಭಾಗ ನಂ-7ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀನಿವಾಸ ಬಿರಾದಾರ ತಿಳಿಸಿದರು.
ಗ್ರಾಪಂ ನೂತನ ಅಧ್ಯಕ್ಷರ ಆಯ್ಕೆ ಬಳಿಕ ಗ್ರಾಪಂ ನೂತನ ಅಧ್ಯಕ್ಷ ಬಾಳಪ್ಪ ಗೌಡರ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೆ ಅಧಿಕಾರ ಮುಖ್ಯವಲ್ಲ, ಗ್ರಾಮದ ಅಭಿವೃದ್ಧಿ ಅತ್ಯಂತ ಮುಖ್ಯವಾಗಿದೆ, ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಗೋಕಾಕ ಎನ್‍ಎಸ್‍ಎಫ್ ಕಛೇರಿ ಪ್ರತಿನಿಧಿ ಅಬ್ದುಲ್ ಮಿರ್ಜಾನಾಯ್ಕಿ, ಗ್ರಾಪಂ ಪಿಡಿಒ ಎಮ್.ಎಲ್.ಯಡ್ರಾಂವಿ, ಗೋಕಾಕ ಪ್ರಭಾ ಶುಗರ್ಸ್ ಉಪಾಧ್ಯಕ್ಷ ಎಂ.ಕೆ.ಮಾರಡ್ಡಿ, ಪುಂಡಲೀಕ ದಳವಾಯಿ, ಮಹಾಂತೇಶ ಮೆಟ್ಟಿನ, ಕರೆಪ್ಪ ಬಿಸಗುಪ್ಪಿ, ಮುದಕಣ್ಣ ಸಂಕ್ರಿ, ಅಡಿವೆಪ್ಪ ಅಳಗೋಡಿ, ಗೋಪಾಲ ಮಾದರ, ಗ್ರಾಪಂ ಉಪಾಧ್ಯಕ್ಷೆ ಶೋಭಾ ಮೆಟ್ಟಿನ, ಗ್ರಾಪಂ ಸದಸ್ಯರು, ಗಣ್ಯರು, ಗ್ರಾಮಸ್ಥರು ಇದ್ದರು.
ಪೋಟೊ : 29 ಬಿಟಿಜಿ-1
ಬೆಟಗೇರಿ:ಸಮೀಪದ ಕಳ್ಳಿಗುದ್ದಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬಾಳಪ್ಪ ಗೌಡರ ಅವರು ಅವಿರೂಧವಾಗಿ ಆಯ್ಕೆಯಾದರು.
ಪೋಟೊ: 29 ಬಿಟಿಜಿ-1-1
ಬೆಟಗೇರಿ: ಸಮೀಪದ ಕಳ್ಳಿಗುದ್ದಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷ ಬಾಳಪ್ಪ ಗೌಡರ ಭಾವ ಚಿತ್ರ.


Spread the love

About inmudalgi

Check Also

ಮನುಷ್ಯ ಪುಣ್ಯ ಮತ್ತು ಧರ್ಮದ ಕೆಲಸ ಮಾಡಬೇಕು: ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಸ್ವಾಮಿಜಿ

Spread the love ವರದಿ: ಅಡಿವೇಶ ಮುಧೋಳ. ಬೆಟಗೇರಿ: ಬಸವಣ್ಣನವರು ಶತ ಶತಮಾನದ ಹಿಂದೆ ಕಲ್ಯಾಣದಲ್ಲಿ ಮಂತ್ರಿಯಾಗಿದ್ದರು. ಬಿಜ್ಜಳ ಆಸ್ಥಾನದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ