ಶ್ರೀ ಶಿವಬೋಧರಂಗ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ., ಮೂಡಲಗಿ
ಇದರ 26ನೇಯ ವಾರ್ಷಿಕ ಸರ್ವ ಸಾಧಾರಣ ಸಭೆ
ಸಹಕಾರ ಸಂಘಗಳ ಬೆಳವಣಿಗೆಯಲ್ಲಿ ಗ್ರಾಹಕರ ಪಾತ್ರ ಮುಖ್ಯ
ಮೂಡಲಗಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಹಕರು ಸಹಕಾರಿ ಸಂಘಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು. ಕಾರಣ ಗ್ರಾಹಕರು ಸಂಸ್ಥೆಯಿಂದ ಪಡೆದುಕೊಂಡ ಸಾಲವನ್ನು ಸರಿಯಾದ ವೇಳೆಗೆ ಮರುಪಾವತಿಸಿ ಇನ್ನು ಹೆಚ್ಚಿನ ಪ್ರಗತಿಗೆ ಸಹಕಾರ ನೀಡಬೇಕೆನ್ನುತ್ತಾ ಮಾರ್ಚ ಅಂತ್ಯಕ್ಕೆ 3.55 ಕೋಟಿ ಲಾಭ ಗಳಿಸಿ ಪ್ರಗತಿ ಪತದತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಅಂತಾ ಸಂಘದ ಅಧ್ಯಕ್ಷರಾದ ರೇವಪ್ಪಾ ಕೆ ಕುರಬಗಟ್ಟಿ ಹೇಳಿದರು.
ಅವರು ಶ್ರೀ ಶಿವಬೊಧರಂಗ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಲಿ., ಮೂಡಲಗಿ ಇದರ 26ನೇಯ ವಾರ್ಷಿಕ ಸರ್ವಸಾಧಾರಣ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡುತ್ತಾ ಸಾಲಗಾರನಷ್ಟೇ ಜಾಮೀನುದಾರರು ಕೂಡಾ ಜವಾಬ್ದಾರರು ಅಂತಾ ಶೇರುದಾರರಿಗೆ ಹೇಳಿದರು.
ಸಂಸ್ಥೆಯ ನಿದೇರ್ಶಕರಾದ ರವೀಂದ್ರ ಪಾ ಸೋನವಾಲ್ಕರ, ಸಂಸ್ಥೆಯಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂಧಿ ವರ್ಗ ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ. ಆಡಳಿತ ಮಂಡಳಿ ನಿಸ್ವಾರ್ಥ ಸೇವೆ ಸಲ್ಲಿಸಬೇಕು. ಸಿಬ್ಬಂಧಿ ವರ್ಗ ಠೇವಣಿದಾರರಿಗೆ ವಿಸ್ವಾಸಾರ್ಯ ಸೇವೆ ಸಲ್ಲಿಸುವದರ ಜೊತೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಮತ್ತು ನಮ್ಮ ಸಂಸ್ಥೆ 12 ಶಾಖೆಗಳನ್ನು ಹೊಂದಿ ಕಳೇದ 5 ವರ್ಷದಿಂದ ಪ್ರತಿ ವರ್ಷ ಶೇರುದಾರರಿಗೆ 16% ರಷ್ಟು ಲಾಭಾಂಶ ವಿತರಿಸುತ್ತಿರುವದು ಪ್ರಗತಿಯ ಧೊತಕವಾಗಿದೆ ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಪುಲಕೇಶಿ ರಾ ಸೋನವಾಲ್ಕರ, 1995 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಕಳೇದ ಮಾರ್ಚ 2021 ರ ಅಂತ್ಯಕ್ಕೆ ರೂ 4.38 ಶೇರು ಬಂಡವಾಳ ಹೊಂದಿ, ರೂ 205 ಕೋಟಿ ಸಾರ್ವಜನಿಕ ವಲಯದಿಂದ ಠೇವು ಸಂಗ್ರಹಿಸಿ, ರೂ 113 ಕೋಟಿ ವಿವಿಧ ರಿತಿಯ ಸಾಲ ವಿತರಿಸಿದೆ, ರೂ 17.49 ನಿಧಿಗಳನ್ನು ಹೊಂದಿ, ರೂ 80 ಕೋಟಿ ಠೇವಣಿದಾರರ ಭದ್ರತೆಗಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿ ಮಾಡಿದ್ದು, ರೂ 238 ಕೋಟಿ ದುಡಿಯುವ ಬಂಡವಾಳ ಹೊಂದಿದೆ, ತನ್ನ ಆರ್ಥಿಕ ವರ್ಷದ ಅವಧಿಯಲ್ಲಿ ರೂ 764 ಕೋಟಿ ವಾರ್ಷಿಕ ವಹಿವಾಟು ಮಾಡಿರುವದು ನಮ್ಮ ಸಂಸ್ಥೆಯ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪ್ರಧಾನ ವ್ಯವಸ್ಥಾಪಕರಾದ ಸುರೇಶ ಬಿ ನಾಶಿ ಅಢಾವೆ ಪತ್ರಿಕೆ, ಮಾರಾಟಾಧಿಕಾರಿ ವೆಂಕಪ್ಪಾ ಎಚ್ ಬಾಲರಡ್ಡಿ ಲಾಭ ಹಾನಿ ಪತ್ರಿಕೆ, ಗುರ್ಲಾಪೂರ ಶಾಖಾ ವ್ಯವಸ್ಥಾಪಕ ಕೆ ಜಿ ಕುದರಿ ಅಂದಾಜು ಲಾಭ ಹಾನಿ ಪತ್ರಿಕೆ, ಸುರೇಬಾನ ಶಾಖಾ ವ್ಯವಸ್ಥಾಪಕ ಎಚ್ ಎಸ್ ಕುಂಬಾರ ಲಾಭ ವಿಂಗಡಣೆ ಪತ್ರಿಕೆ ಓದಿ ಅನುಮೋದನೆ ಪಡೆದರು.
ಖ್ಯಾತ ಚಿತ್ರ ಕಲಾವಿದ ಪುನೀತ್ ರಾಜಕುಮಾರ ಇವರ ನಿಧನದ ನಿಮಿತ್ಯ ಸಭೆಯಲ್ಲಿ ಮೌನಾಚರಣೆ ಆಚರಿಸಿಲಾಯಿತು.
ನಿರ್ದೇಶಕರಾದ ಬಸವರಾಜ ವ್ಹಿ ಗುಲಗಾಜಂಬಗಿ, ಡಾ|| ಶಂಕರ ಎಸ್ ದಂಡಪ್ಪನವರ, ಸುಭಾಸ ಆರ್ ಸೋನವಾಲ್ಕರ, ಅಶೋಕ ಎಮ್ ಹೊಸೂರ, ಶಿವಬಸು ಎಮ್ ಬೂದಿಹಾಳ, ಗಂಗವ್ವಾ ಕೆ ಸಣ್ಣಪ್ಪನವರ, ಶಾರದಾ ಬಿ ಗುಲಗಾಜಂಬಗಿ, ವಿದ್ಯಾವತಿ ಆರ್ ಸೋನವಾಲ್ಕರ, ಮಂಜುಳಾ ಎಸ್ ಬಳಿಗಾರ, ಹಣಮಂತ ಎಸ್ ಸಣ್ಣಕ್ಕಿ ಉಪಸ್ಥಿತರಿದ್ದರು.
ರಾಮದುರ್ಗ ಶಾಖಾ ವ್ಯವಸ್ಥಾಪಕ ಮಹೇಶ ಬಿ ಮಾಲಗಾರ ಕಾರ್ಯಕ್ರಮ ನಿರುಪಿಸಿದರು. ಕುಲಗೋಡ ಶಾಖಾ ವ್ಯವಸ್ಥಾಪಕ ಹೊಳೆಪ್ಪಾ ವಾಯ್ ಬಾಡದ ಸ್ವಾಗತಿಸಿದರು. ಸಾಲಹಳ್ಳಿ ಶಾಖಾ ವ್ಯವಸ್ಥಾಪಕ ಸುರೇಶ ಕೆ ಸುಣಧೋಳಿ ಮಾಲಾರ್ಪಣೆ ನೆರೆವೆರಿಸಿದರು, ಮುಧೋಳ ಶಾಖಾ ವ್ಯವಸ್ಥಾಪಕ ವೆಂಕಟೇಶ ಎ ಜಂಬಗಿ ವಂದಿಸಿದರು.