ಬೆಟಗೇರಿ:ಗ್ರಾಮೀಣ ಪ್ರದೇಶದ ಜನರಿಗೆ ಗೋವುಗಳು ಜೀವನಾಧಾರವಾಗಿವೆ. ಪ್ರತಿಯೊಬ್ಬರೂ ದೇಶಿಯ ಗೋವು ತಳಿಗಳನ್ನು ಉಳಿಸಿ ಬೆಳಸಲು ಮುಂದಾಗಬೇಕಿದೆ ಎಂದು ಬೆಟಗೇರಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗೌಡಪ್ಪ ಮಾಳೇದ ಹೇಳಿದರು.
ಬೆಟಗೇರಿ ಗ್ರಾಮ ಪಂಚಾಯತಿ, ಗ್ರಾಮಲೆಕ್ಕಾಧಿಕಾರಿ ಕಾರ್ಯಾಲಯ ಹಾಗೂ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಸಹಯೋಗದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ ಸ್ಥಳಿಯ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ನ.5ರಂದು ನಡೆದ ಗೋವು ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ನಮ್ಮ ಧಾರ್ಮಿಕ ಮತ್ತು ಸಾಂಸ್ಕøತಿಕ ಪರಂಪರೆಯಲ್ಲಿ ಗೋವುಗಳಿಗೆ ವಿಶಿಷ್ಟವಾದ ಸ್ಥಾನವಿದೆ ಎಂದರು.
ಸ್ಥಳೀಯ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ವೈದ್ಯಾಧಿಕಾರಿ ಧರೆಪ್ಪ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಗೋವುಗಳ ಮಹತ್ವ ಮತ್ತು ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ಧೇಶಕ್ಕಾಗಿ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಗೋವು ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮುಜರಾಯಿ ಇಲಾಖೆ ವ್ಯಾಪ್ತಿಯ ಇಲ್ಲಿಯ ಶ್ರೀ ಲಕ್ಷ್ಮೀದೇವಿ, ಮಾರುತಿ ದೇವರ ಹಾಗೂ ಬ್ರಹ್ಮದೇವರ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಸುಮಂಗಲೆಯರಿಂದ ಗೋವು ಪೂಜಾ ಕಾರ್ಯಕ್ರಮ ನಡೆಯಿತು.
ಸುರೇಶ ಬಾಣಸಿ, ಶಂಭು ಹಿರೇಮಠ, ಭರಮಪ್ಪ ಪೂಜೇರ, ಮಂಜು ಹಳಬರ, ನಾಗೇಶ ಬೆಳಗಲಿ, ಈರಣ್ಣ ದಂಡಿನ, ಮಂಜುನಾಥ ಕಂಬಿ, ಪರಸಪ್ಪ ಮಡಿವಾಳರ, ಗ್ರಾಪಂ ಸದಸ್ಯರು, ಸಿಬ್ಬಂದಿ, ಗ್ರಾಮಲೆಕ್ಕಾಧಿಕಾರಿ ಹಾಗೂ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಸಿಬ್ಬಂದಿ, ಗಣ್ಯರು, ಮಹಿಳೆಯರು ಗ್ರಾಮಸ್ಥರು ಇದ್ದರು.