Breaking News
Home / Recent Posts / ಶ್ರೀ ಶಿವಲಿಂಗೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ

ಶ್ರೀ ಶಿವಲಿಂಗೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ

Spread the love

ಬೆಟಗೇರಿ:ಗ್ರಾಮೀಣ ವಲಯದಲ್ಲಿರುವ ಸಹಕಾರಿ ಸಂಘ, ಸಂಸ್ಥೆಗಳು ಸಮಗ್ರ ಪ್ರಗತಿ ಸಾಧಿಸಬೇಕಾದರೆ ಸ್ಥಳೀಯರ ಸಹಕಾರ ಅವಶ್ಯಕವಾಗಿದೆ ಎಂದು ಇಂಚಲದ ಡಾ.ಶಿವಾನಂದ ಭಾರತಿ ಮಹಾಸ್ವಾಮಿಜಿ ಹೇಳಿದರು.


ಸಮೀಪದ ಬಿಲಕುಂದಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ ಹಾಗೂ ಪೂಜಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ನ.5ರಂದು ಕಟ್ಟಡ ಉದ್ಘಾಟನೆ ನೆರವೇರಿಸಿ, ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರ ಜೀವನಾಡಿಯಾಗಿವೆ ಎಂದರು.
ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ ಸಮ್ಮಖ ವಹಿಸಿ ಮಾತನಾಡಿ, ಸ್ಥಳೀಯ ಎಸ್‍ಪಿಕೆಪಿಎಸ್ ಪ್ರಗತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯ ಎಸ್‍ಪಿಕೆಪಿಎಸ್ ಆಡಳಿತ ಮಂಡಳಿಯವರು ಶ್ರೀಗಳು, ಗಣ್ಯರನ್ನು ಸತ್ಕರಿಸಿದರು.
ಸ್ಥಳೀಯ ಎಸ್‍ಪಿಕೆಪಿಎಸ್ ಆಡಳಿತ ಮಂಡಳಿ ಅಧ್ಯಕ್ಷ ಶಿವಲಿಂಗ ಬಳಿಗಾರ, ಮಾಜಿ ಅಧ್ಯಕ್ಷ ಮಹಾದೇವ ಹೊಸತೋಟ, ಗೋವಿಂದಪ್ಪ ಜೋತೆನ್ನವರ, ಪ್ರಭು ಇಟ್ನಾಳ, ಪ್ರಭು ಸಿದ್ದಪ್ಪ ಇಟ್ನಾಳ, ಮಹಾದೇವ ಕಳ್ಳಿಗುದ್ದಿ, ಯಲ್ಲಪ್ಪ ಭಂಗಿ, ಶಿವಪ್ಪ ಇಟ್ನಾಳ, ಬಸಪ್ಪ ಸವದತ್ತಿ, ಲಕ್ಷ್ಮಣ ತಳವಾರ, ಸುಜಾತಾ ಜೋತೆನ್ನವರ, ಲಕ್ಷ್ಮೀ ಹಿರೇಮಠ, ಮುಖ್ಯಕಾರ್ಯನಿರ್ವಾಹಕ ಆನಂದ ಬಳಿಗಾರ, ನೀಲಪ್ಪ ಇಟ್ನಾಳ, ಶಿವಯ್ಯ ಹಿರೇಮಠ, ಗಣ್ಯರು, ಗ್ರಾಮಸ್ಥರು ಇದ್ದರು.


Spread the love

About inmudalgi

Check Also

ಕನಕದಾಸರು ಕೇವಲ ವ್ಯಕ್ತಿಯಲ್ಲ, ಶೋಷಿತರ ಅತಿ ದೊಡ್ಡ ಧ್ವನಿ:ಬಸವಂತ ಕೋಣಿ

Spread the loveಬೆಟಗೇರಿ:ಕನಕದಾಸರು ಒಬ್ಬ ಕವಿಯಾಗಿ ಬೆಳೆದು, ಸಮಾಜ ಸುಧಾರಕನಾಗಿ, ಸಂತನಾಗಿ ಶಾಶ್ವತವಾಗಿ ಉಳಿದವರು ಎಂದು ಗೋಕಾಕ ತಾಲೂಕಿನ ಬೆಟಗೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ