ಬೆಟಗೇರಿ: ಗ್ರಾಮದ ಕಲ್ಲೋಳಿಯ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಶಾಖೆಯ ವಾರ್ಷಿಕೋತ್ಸವ ಹಾಗೂ ಮಹಾಲಕ್ಷ್ಮೀ ಪೂಜೆ ಕಾರ್ಯಕ್ರಮ ಶುಕ್ರವಾರ ನ.5 ರಂದು ನಡೆಯಿತು.
ಸ್ಥಳೀಯ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಈರಪ್ಪ ದೇಯಣ್ಣವರ ಅವರು ಶ್ರೀ ಮಹಾಲಕ್ಷ್ಮೀ ಭಾವ ಚಿತ್ರಕ್ಕೆ ಪೂಜೆ ನೆರವೇರಿಸಿದ ಬಳಿಕ ಶಾಖೆಯ ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ ಸಹಕಾರಿಯ ಪ್ರಗತಿ ಹಾಗೂ ಶಾಖೆಯ ವಾರ್ಷಿಕೋತ್ಸವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಬಳಿಕ ಸಿಹಿ ವಿತರಣೆ ಕಾರ್ಯಕ್ರಮ ಜರುಗಿತು.
ಶ್ರೀಕಾಂತ ಕರೆಪ್ಪಗೋಳ, ಮಾಯಪ್ಪ ಬಾಣಸಿ, ರಾಮಪ್ಪ ಮುಧೋಳ, ನಿಂಗಪ್ಪ ನೀಲಣ್ಣವರ, ರಮೇಶ ಬ್ಯಾಗಿ, ವಿಠಲ ಕೋಣಿ, ಈಶ್ವರ ಮುಧೋಳ, ಹನುಮಂತ ಸವತಿಕಾಯಿ, ಬಸಪ್ಪ ಗೌಡರ, ಮಹಾದೇವ ಇಟ್ನಾಳ, ಗಂಗಯ್ಯ ಹಿರೇಮಠ, ಶಾಖೆಯ ಸಲಹಾ ಸಮಿತಿ ಸದಸ್ಯರು, ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಗ್ರಾಹಕರು, ಗ್ರಾಮಸ್ಥರು, ಇತರರು ಇದ್ದರು.
ನೋಟಿಸ್:
ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ನಿ.,ಕಲ್ಲೋಳಿ ಇದರ ಸನ್ 2020-21 ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ ಶನಿವಾರ ದಿನಾಂಕ:27-11-2021 ರಂದು ಬೆಳಿಗ್ಗೆ 10-30 ಗಂಟೆಗೆ ಸ್ಥಳ:ಸಂಘದ ಮುಖ್ಯಕಾರ್ಯಾಲಯದಲ್ಲಿ ಜರುಗಲಿದ್ದು ಇದೆ ನೋಟಿಸ್ ತಿಳಿದು ಸಹಕಾರಿಗಳು ಆಗಮಿಸಬೇಕೆಂದು ವಿನಂತಿ. ಹಣಮಂತ ಕಲಕುಟ್ರಿ ಪ್ರಧಾನ ವ್ಯವಸ್ಥಾಪಕರು ಪೋನ ನಂ:9008660401
IN MUDALGI Latest Kannada News