Breaking News
Home / Recent Posts / ಶ್ರೀಶೈಲ್ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮ ಸಭೆ ಮುನ್ಯಾಳ ಸದಾಶಿವಮಠದಲ್ಲಿ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ

ಶ್ರೀಶೈಲ್ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮ ಸಭೆ ಮುನ್ಯಾಳ ಸದಾಶಿವಮಠದಲ್ಲಿ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ

Spread the love

ಶ್ರೀಶೈಲ್ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮ ಸಭೆ
ಮುನ್ಯಾಳ ಸದಾಶಿವಮಠದಲ್ಲಿ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ

ಮೂಡಲಗಿ: ತಾಲ್ಲೂಕಿನ ಮುನ್ಯಾಳ-ರಂಗಾಪೂರದ ಶ್ರೀ ಸದಾಶಿವಯೋಗೀಶ್ವರಮಠದಲ್ಲಿ ಹಣಮಂತದೇವರ ಮಂದಿರ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಮತ್ತು ಅಶ್ವಾರೂಢ ಶ್ರೀ ಗುರು ಬಸವರಾಜ ಅಜ್ಜನವರ ಸರ್ಕಲ್ ಉದ್ಘಾನೆಯು ನಾಳೆ ನ. 7ರಂದು ಸಂಜೆ 4ಕ್ಕೆ ಜರುಗಲಿದೆ.
ಶ್ರೀಶೈಲ್ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಸಾನ್ನಿಧ್ಯವಹಿಸುವರು. ಸದಾಶಿವಯೋಗಿಶ್ವರಮಠದ ಪೀಠಾಧಿಪತಿ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆವಹಿಸುವರು. ಗೋಕಾಕದ ಶೂನ್ಯಸಂಪಾದನಮಠದ ಮುರಘರಾಜೇಂದ್ರ ಸ್ವಾಮೀಜಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು, ಸುಣಧೋಳಿಯ ಶಿವಾನಂದ ಸ್ವಾಮೀಜಿ, ಚಿಕ್ಕೊಪ್ಪದ ವೀರಭದ್ರ ಸ್ವಾಮೀಜಿ, ಬಬಲಾದಿ ಹಿರೇಮಠದ ಓಂಕಾರೇಶ್ವರ ಸ್ವಾಮೀಜಿ, ಅರಕೇರಿಯ ಅವದೂತ ಸಿದ್ದಮಹಾರಾಜ, ಜೋಡಕುರಳಿಯ ಚಿದಾನಂದ ಭಾರತಿ, ಇಟನಾಳದ ಸಿದ್ಧೇಶ್ವರ ಶರಣರು, ಮುನ್ಯಾಳದ ಲಕ್ಷ್ಮಣದೇವರು ಭಾಗವಹಿಸುವರು.


ಅರಭಾವಿ ಶಾಶಕರು ಮತ್ತು ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮ: ನ. 6ರಂದು ಬೆಳಿಗ್ಗೆ ಗದ್ದುಗೆಗೆ ಮಹಾ ರುದ್ರಾಭೀಷಕ, ಬಿಲ್ವಾರ್ಚನೆ ಇರುವುದು.
ಸಂಜೆ ನಡೆಯುವ ಧರ್ಮಸಭೆಯ ಮುಂಚೆ ಜಗದ್ಗುರುಗಳು ಮತ್ತು ಆಗಮಿಸುವ ಎಲ್ಲ ಪೂಜ್ಯರನ್ನು ಕುಂಭ, ಆರತಿ ಮತ್ತು ಸಕಲ ವಾದ್ಯ ವೈಭವದೊಂದಿಗೆ ಶ್ರೀಮಠಕ್ಕೆ ಬರಮಾಡಿಕೊಳ್ಳುವರು. ರಾತ್ರಿ 9ಕ್ಕೆ ಸಾಮಾಜಿಕ ನಾಟಕ ಪ್ರದರ್ಶನ ಇರುವುದು.


Spread the love

About inmudalgi

Check Also

ಶರಣ ಜೀವಿ, ಆಧ್ಯಾತ್ಮದ ಚಿಂತಕರು, ದೇವಿ ಆರಾಧಕರು ಆದ ಕವಿ ಚಿದಾನಂದ ಮ ಹೂಗಾರ ಇವರ *ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ

Spread the love ಮೂಡಲಗಿ -ಶಿವಾಪೂರ ಹ ಗ್ರಾಮದ ಶರಣ ಜೀವಿ, ಆಧ್ಯಾತ್ಮದ ಚಿಂತಕರು, ದೇವಿ ಆರಾಧಕರು ಆದ ಕವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ