ಮೂಡಲಗಿ : ಮಂಜುನಾಥ ಸೈನಿಕ ತರಬೇತಿ ಕೇಂದ್ರ ಶಿಬಿರಾರ್ಥಿ ಎಚ್. ಬಸವರಾಜ ಕಾಶ್ಮೀರದ ಪರ್ವತ ಶ್ರೇಣಿಗಳಲ್ಲಿ ಅತಿ ದುಸ್ಧರವಾಗಿರುವ 15,568 ಅಡಿ ಎತ್ತರದ ತಟಕೋಟಿ ಶಿಖರವನ್ನು ಏರಿ ಸಾಧನೆ ಮಾಡಿದ ಶಿಬಿರಾರ್ಥಿಗೆ ಬಿ.ಬಿ. ಹಂದಿಗುಂದ ಸತ್ಕಾರ ಮಾಡಿದರು.
ಅವರು ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ತಟಕೋಟಿ ಶಿಖರವನ್ನು ರಾಷ್ಟ್ರದಲ್ಲೆ ಪ್ರಥಮ ಬಾರಿಗೆ ಏರಿದ ಹಿರಿಮೆ ಕರ್ನಾಟಕ ತಂಡಕ್ಕೆ ಸಿಕ್ಕದೆ ಎಂದರು.
ರಾಜ್ಯದ ಜನರಲ್ ತಿಮ್ಮಯ್ಯ ಅಕಾಡೆಮಿ ಯುವ ಸಬಲೀಕರನ ಯೋಜನೆಯನ್ವಯ ರಾಜ್ಯದ 22 ಪರ್ವತಾರೋಹಿಗಳ ತಂಡವನ್ನು ಕಾಶ್ಮೀರದ ತಟಕೋಟಿ ಶಿಖರ ಏರಲು ಅ.18 ರಂದು ಕಳುಹಿಸಿತ್ತು ರಾಜ್ಯದ ತಂಡ ಸುಮಾರು 22 ತಾಸುಗಳಲ್ಲಿ ಈ ಶಿಖರವನ್ನು ಏರಿ ಇಳಿದಿದ್ದು ಈ ತಂಡದಲ್ಲಿ ಮಂಜುನಾಥ ಸೈನಿಕ ತರಬೇತಿ ಕೇಂದ್ರ ಶಿಬಿರಾರ್ಥಿ ಎಚ್. ಬಸವರಾಜ ಇದ್ದರು.
ಕೆಲ ವರ್ಷಗಳ ಹಿಂದೆ ಯೂರೊಪ ತಂಡ ಮಾತ್ರ ಈ ಶಿಖರವನ್ನು ಏರಿತ್ತು.
ಪರ್ವತಾರೋಹಣ ಮೈಗೋಡಿಸಿಕೊಂಡಿರುವ ಎಚ್. ಬಸವರಾಜ್ ಎತ್ತರದ ಶಿಖರಗಳನ್ನು ಏರುವ ಆಶಯ ಇರಿಸಿಕೊಂಡು ಜನರಲ್ ತಿಮ್ಮಯ್ಯ ಅಕಾಡೆಮಿಯ ಸದಸ್ಯತ್ವ ಪಡೆದುಕೊಂಡು ಸಾಕಷ್ಟು ಪೂರ್ವಭಾವಿ ತಯಾರಿಯನ್ನು ನಡೆಸಿದ್ದರು ಇವರಿಗೆ ಮಂಜುನಾಥ ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ವಾಯ್. ಅಡಿಹುಡಿ ಪ್ರೋತ್ಸಾಹ ನೀಡಿದರು.
ಅ. 18 ರಂದು ಬೆಳಿಗ್ಗೆ 5 ಗಂಟೆಗೆ ಪರ್ವತಾರೋಹಣ ಶುರುಮಾಡಿ ಸುಮಾರು 22 ತಾಸುಗಳಲ್ಲಿ ಶಿಖರವನ್ನು ಏರಿಳಿದದ್ದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಎಚ್. ಬಸವರಾಜ್ ಸತ್ಕಾರವನ್ನು ಸ್ವಿಕರಿಸಿ ತಮ್ಮ ಅನುಭವ ಹಂಚಿಕೊಂಡರು ರಾಜೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಕೆ.ಎಮ್.ಎಪ್. ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೋಳಿ ಶಿಬಿರಾರ್ಥಿಗೆ ಮೆಚ್ಚಿಗೆ ವ್ಯಕ್ತಪಡಸಿದರು.
