ಮಾಡೆಲಿಂಗ್ ಕ್ಷೇತ್ರಕ್ಕೆ ಮೂಡಲಗಿ ಯುವಕ

ಮೂಡಲಗಿ: ಹೌದು ಮೈಸೂರಿನ ಖ್ಯಾತ ಫ್ಯಾಷನ್ ಮಾಡೆಲ್ ,ಮಿ ಏಷ್ಯಾ 2020 ಇಂಟರ್ನ್ಯಾಷನಲ್ ಮೇಲ್ ಮಾಡೆಲ್ ಇಂಡಿಯನ್ ಆಗಿರುವ ಶ್ರೀಯುತ ನಾಗೇಶ್ ಡಿ ಸಿ ರವರ ತಿಬ್ಬಾಸ್ ಗ್ರುಪ್ ನ ತಿಬ್ಬಾಸ್ ಫ್ಯೂಚರ್ ಮಾಡೆಲ್ ಆಫ್ ಇಂಡಿಯಾ 2022 ಸೀಸನ್ 2 ರ ಫ್ಯಾಷನ್ ಮೇಳ ಬರುವ ಜನವರಿಯಲ್ಲಿ ನಡೆಯಲಿರುವ ಫ್ಯಾಷನ್ ಮೇಳದಲ್ಲಿ ನಮ್ಮ ಮೂಡಲಗಿಯ ಯುವ ನಟ ಮಂಜುನಾಥ ರೇಳೆಕರ ಹೆಜ್ಜೆ ಹಾಕಲು ಹೊರಟಿದ್ದಾರೆ. ತಿಬ್ಬಾಸ್ ಗ್ರುಪ್ ಇದೇ ಮೊದಲ ಬಾರಿಗೆ ಮಕ್ಕಳು ವಯಸ್ಕರು ವಯೋ ವೃದ್ಧರ ವರೆಗೆ ಎಲ್ಲಾ ಮಾದರಿಯ ಜನತೆಗೆ ಅವಕಾಶ ಕಲ್ಪಿಸಿಕೊಡುತ್ತಿರುವ ಸಂಸ್ಥೆ ಇದಾಗಿದೆ. ಈಗಾಗಲೇ ಮಂಜುನಾಥ ನಟನೆಯಿಂದ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ಇದರ ಜೊತೆಯಲ್ಲಿ ಈಗ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಊರಿನ ಜನರಿಗೆ ಸಂತಸ ತಂದಿದೆ. ಮಂಜುನಾಥ ಹೀಗೆಯೇ ಮೂಡಲಗಿಯ ಕೀರ್ತಿ ಹೆಚ್ಚಿಸಲೆಂದು ನಾಗರೀಕರು ಶುಭ ಹಾರೈಸಿದ್ದಾರೆ.
IN MUDALGI Latest Kannada News