ಮೂಡಲಗಿ : ಕನಕದಾಸರನ್ನು ಕೇವಲ ಒಂದು ವರ್ಗಕ್ಕೆ ಸೀಮಿತ ಮಾಡುವುದರಲ್ಲಿ ಅರ್ಥವಿಲ್ಲ. ಕನಕ ಎಂಬುದು ಆಗಾಧಶಕ್ತಿ ಅದಮ್ಮ ಚೇತನ ಅವರು ಭಗವಂತನಿಗೆ ಹತ್ತಿರವಾಗಿದ್ದವರು ಭಕ್ತಿಯ ಶಕ್ತಿಯನ್ನು ತೋರಿಸಿಕೊಟ್ಟರು. ಜಾತಿವ್ಯವಸ್ಥೆಯ ವಿರುದ್ಧ ಹೋರಾಡಿ ಸಮಾನತೆಯ ತತ್ತ್ವವನ್ನು ಸಾರಿದರು ಎಂದು ಹಿರಿಯ ನ್ಯಾಯವಾದಿಗಳಾದ ಎಮ್.ಐ. ಬಡಿಗೇರ ಹೇಳಿದರು.
ಅವರು ದಿವಾಣಿ ಹಾಗೂ ಜೆ.ಎಮ್.ಎಪ್.ಸಿ ನ್ಯಾಯಾಲಯದ ಆವರಣದಲ್ಲಿ ಕನಕದಾಸರ ಜಯಂತಿಯಲ್ಲಿ ಮಾತನಾಡುತ್ತಾ ಕವಿಗಳಾಗಿ ಜನಿಸುವುದು ವಿರಳ ದಾರ್ಶನಿಕನಾಗಿ ಜನಿಸುವುದು ಇನ್ನೂ ವಿರಳ ಒಬ್ಬನೇ ಏಕಕಾಲದಲ್ಲಿ ಕವಿಯೂ ದಾರ್ಶನಿಕನೂ ಆಗಿ ಜನಿಸುವುದು ಅತ್ಯಂತ ವಿರಳ ಎಂದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಎ.ಎಸ್.ಆನಿಖಿಂಡಿ ಮಾತನಾಡಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಾ ಕನಕದಾಸರ ಪ್ರತಿ ಮಾತುಗಳು ಉಪದೇಶಾಮೃತವಾಗಿ ಪರಿಣಮಿಸಿವೆ. ‘ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು ಸಿರಿ ಬಂದ ಕಾಲಕ್ಕೆ ಬಲುಮೆರೆಯಬೇಡ ಅಜ್ಞಾನಿಗಳ ಕೂಡ ಸ್ನೇಹಕಿಂತ ಸುಜ್ಞಾನಿಗಳ ಕೂಡ ಜಗಳ ಲೇಸು ಒಕ್ಕಲಿಲ್ಲದ ಊರು ಕೊಳೆತು ನಾರುವ ನೀರು ಮುಂತಾದ ವಾಕ್ಯಗಳು ಸುಭಾಷಿತಗಳಂತಿವೆ. ಭಕ್ತಿಯಿಂದ ಭವ ಮುಕ್ತರಾಗಿ, ಸಂಸಾರದ ಬಂಧನದಿಂದ ಬಿಡುಗಡೆಯಾಗಿ ವೈರಾಗ್ಯ ಭಾವದಿಂದ ವಿರಕ್ತರಾಗಿ ದೈವ ಭಕ್ತರಾಗಿ ಸಾಹಿತ್ಯದ ಸ್ತರವನ್ನು ಜನಾಕರ್ಷಣೆಗೊಳಿಸಿದರು ಎಂದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಎಲ್.ವಾಯ್. ಅಡಿಹುಡಿ ವಿ.ಕೆ.ಪಾಟೀಲ್ ಕೆ.ಎಲ್.ಹುಣಶ್ಯಾಳ ಎ.ಬಿ.ಬಾಗೋಜಿ ಐ.ಎಮ್.ಹಿರೇಮಠ ಎಲ್.ಬಿ. ವಡೇಯರ ಬಿ.ವಾಯ್.ಹೆಬ್ಬಾಳ ಪಿ.ಎಸ್.ಮಲ್ಲಾಪೂರ ಎನ್.ಬಿ. ನೇಮಗೌಡರ ಆರ್.ಎಮ್.ಐಹೋಳೆ ಆರ್.ಎಸ್.ತೋಳಮರಡ್ಡಿ ಆರ್.ವಾಯ್.ಶ್ಯಾಬನ್ನವರ ವಾಯ್.ಎಸ್.ಖಾನಟ್ಟಿ ಉಪಸ್ಥಿತರಿದರು.
