ಮೂಡಲಗಿ: ಸಾರ್ವಜನಿಕರ ರಕ್ಷಣೆ ಜವಾಬ್ದಾರಿ ಹೊತ್ತು ಕರ್ತವ್ಯ ನಿರ್ವಹಿಸುತ್ತಿರುವ ಆರಕ್ಷಕ ಆರೋಗ್ಯದ ಮನಗಂಡು ವೈದ್ಯರ ತಂಡ ಉಚಿತ ಆರೋಗ್ಯ ತಪಾಸಣೆ ಆಯೋಜಿಸಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಶುಕ್ರವಾರದಂದು ಪೊಲೀಸ್ ಇಲಾಖೆ ಹಾಗೂ ವೈದ್ಯಾಧಿಕಾರಿಗಳ ಸಂಘ ಸಹಯೋಗದೊಂದಿಗೆ ಪೊಲೀಸ್ ಇಲಾಖೆ ಕುಟುಂಬದವರ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯು ಸಮಯವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುವುದರಿಂದ ಕಾಲಕಾಲಕ್ಕೆ ಆರೋಗ್ಯ ತಪಾಸಣೆಮಾಡಿಸಿ, ಆರೋಗ್ಯ ಕಾಳಜಿ ವಹಿಸಬೇಕು ಎಂದರು.
ಚಿಕ್ಕ ಮಕ್ಕಳ ತಜ್ಞ ಡಾ ಜಗದೀಶ ಜಿಂಗಿ ಮಾತನಾಡಿ, ಪೊಲೀಸ್ ಇಲಾಖೆ ಸಿಬ್ಬಂದಿಗಳು ಕರ್ತವ್ಯದ ಜೋತೆಗೆ ತಮ್ಮ ಆರೋಗ್ಯದ ಮತ್ತು ಕುಟುಂಬ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮನುಷ್ಯನಲ್ಲಿ ಆರೋಗ್ಯದ ಬಗ್ಗೆ ಏರುಪೇರಾದರ ನಿರ್ಲಕ್ಷಿಸದೆ ತಕ್ಷಣ ವೈದ್ಯರ ಚಿಕಿತ್ಸೆ ಪಡೆಯಬೇಕು. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಈ ರೀತಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಡಿವೈಎಸ್ಪಿ ದೂದಪೀರ ಮುಲ್ಲಾ ಮಾತನಾಡಿ, ಈ ಹಿಂದೆ ಕೋವಿಡ್-19ರ ಒಂದು ಮತ್ತು ಎರಡನೇ ಅಲೆಯಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಮೂರನೇ ಅಲೆಯು ಹೆಚ್ಚು ಮಕ್ಕಳಿಗೆ ಭಾದಿಸುವು ಸಂಭವಿರುವದರಿಂದ ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕೆಂದರು.
ಶಿಬಿರದಲ್ಲಿ ಸಿಪಿಐ ವೆಂಕಟೇಶ ಮುರನಾಳ, ಪಿ ಎಸ್ ಐ ಎಚ್ ವೈ ಬಾಲದಂಡಿ, ಸಮೂದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾರತಿ ಕೋಣಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೀಣಾ ಕನಕರಡ್ಡಿ, ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಪ್ರಕಾಶ ಬುದ್ನಿ, ಡಾ ಎಸ್.ಎಸ್. ಪಾಟೀಲ, ಡಾ ಅನೀಲ ಪಾಟೀಲ, ಡಾ ಪ್ರಶಾಂತ ನಿಂಡಗುದಿ, ಡಾ ರಾಜೇಂದ್ರ ಗಿರಡ್ಡಿ, ಡಾ ಪ್ರಶಾಂತ ಬಾಬನ್ನವರ, ಡಾ ತೇಜಸ್ವಿ ಹೊಸಮನಿ, ಡಾ ಮಹೇಶ ಮುಳವಾಡ, ಡಾ ಸಚೀನ್ ಟಿ ಹಾಗೂ ಪಟ್ಟಣದ ಎಲ್ಲ ವೈದ್ಯಾಕಾರಿಗಳು ಭಾಗವಹಿಸಿದರು.