ಮೂಡಲಗಿ: ಕೋವಿಡ್-19 ಸಾಂಕ್ರಾಮಿಕ ಸೋಂಕಿನಿಂದ ಸುಣಧೋಳಿಯ ಸರಕಾರಿ ಪ್ರೌಢ ಶಾಲೆಯ 9 ವಿದ್ಯಾರ್ಥಿಗಳಿಗೆ ದೃಢಪಟ್ಟಿದ್ದು, ಅಗತ್ಯ ಮುಂಜಾಗೃತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ಶಾಲೆಗೆ ರಜೆ ನೀಡಿಲಾಗಿದೆ ಎಂದು ಮೂಡಲಗಿ ಬಿಇಒ ಅಜಿತ ಮನ್ನಿಕೇರಿ ಹೇಳಿದರು.
ಅವರು ಬುಧವಾರ ಸೋಂಕಿತ ವಿದ್ಯಾರ್ಥಿಗಳನ್ನು ಹಾಗೂ ಪ್ರೌಢ ಶಾಲೆಗೆ ಭೇಟಿ ನೀಡಿ, ಸ್ಥಳೀಯ ಗ್ರಾಮ ಪಂಚಾಯತ, ಆರೋಗ್ಯ ಇಲಾಖೆ, ಸ್ಥಳೀಯ ಎಸ್.ಡಿ.ಎಮ್.ಸಿಯವರ ಸಹಕಾರದಿಂದ ಸ್ಯಾನಿಟೈಸ್ ಮಾಡಿದ್ದಾರೆ. ಸೋಂಕಿಗೆ ಸೂಕ್ತ ವೈದ್ಯಕೀಯ ಔಷಧೋಪಚಾರ ನೀಡಲಾಗಿದೆ. ಶಿಕ್ಷಕ ಸಿಬ್ಬಂದಿ ಹಾಗೂ ಇನ್ನುಳಿದ ವಿದ್ಯಾರ್ಥಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ವಿದ್ಯಾರ್ಥಿಗಳ ಮನೆ ಭೇಟಿ ಹಾಗೂ ದೊರವಾಣಿ ಮೂಲಕ ಸಂಪರ್ಕಿಸಿ ಆರೋಗ್ಯದ ಕುರಿತು ವಿಚಾರಿಸಲಾಗಿದೆ ಎಂದರು.
ವಿದ್ಯಾರ್ಥಿಗಳ  ಮನೆಗೆ ಭೇಟಿ ಹಾಗೂ ಶಾಲೆಗೆ ಖುದ್ದಾಗಿ ಭೇಟಿ ನೀಡಿ ಎಸ್.ಒ.ಪಿ ನಿಯಮಾವಳಿನುಸಾರ ಕ್ರಮ ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಪಿಡಿಒ ಗಂಗಾಧರ ಮಲ್ಹಾರಿ, ಗ್ರಾ.ಪಂ ಸದಸ್ಯ ಸಹದೇವ ಕಮತಿ, ಮುಖ್ಯೋಪಾಧ್ಯಯ ಸುಭಾಸ ಭಾಗೋಜಿ ಶಾಲಾ ಸಿಬ್ಬಂದಿ ಹಾಜರಿದ್ದರು.
 
		 IN MUDALGI Latest Kannada News
IN MUDALGI Latest Kannada News
				 
			 
			 
						
					 
						
					 
						
					 
					
				