Breaking News
Home / Recent Posts / ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ಮುಕ್ತವಾಗಿರಿ ಪಿ.ಎಸ್.ಐ – ಎಚ್. ವಾಯ್. ಬಾಲದಂಡಿ.

ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ಮುಕ್ತವಾಗಿರಿ ಪಿ.ಎಸ್.ಐ – ಎಚ್. ವಾಯ್. ಬಾಲದಂಡಿ.

Spread the love

ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ಮುಕ್ತವಾಗಿರಿ ಪಿ.ಎಸ್.ಐ – ಎಚ್. ವಾಯ್. ಬಾಲದಂಡಿ.

ಮೂಡಲಗಿ : ವಿದ್ಯಾರ್ಥಿಗಳು ಮಾದಕ ವಸ್ತುಗಳಾದ ತಂಬಾಕು, ಗುಟಕಾ, ಡ್ರಗ್ಸ್ ಹಾಗೂ ಇನ್ನಿತರ ಮಾದಕ ವಸ್ತುಗಳ ಬಳಿಕೆಯಿಂದ ದೂರವಿದ್ದು ತಮ್ಮ ಆರೋಗ್ಯದ ಕಡೆಗೆ ಗಮನ ನೀಡಬೇಕು. ನಮ್ಮ ಗ್ರಾಮೀಣ ಭಾಗದ ರೈತರ ತಪ್ಪು ತಿಳಿವಳಿಕೆಯಿಂದ ಗಾಂಜಾ, ಕಸಕಸಿ ಮಾದಕ ಸಸ್ಯಗಳನ್ನು ಬೆಳಸಿ ಅವುಗಳನ್ನು ಕಾನೂನು ಬಾಹಿರವಾಗಿ ಉಪಯೋಗಿಸಿತಿರುವುದು ಸಮಾಜದ ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದು ಅಂತಹ ಬೆಳೆಗಳನ್ನು ರೈತರು ಬೆಳೆಯುತ್ತಿದ್ದರೆ ಕೂಡಲೇ ಠಾಣೆಗೆ ಮಾಹಿತಿ ನೀಡಬೇಕು ಮತ್ತು ಅಂತಹ ಸಸ್ಯಗಳನ್ನು ಬೆಳೆಯದಂತೆ ರೈತರಿಗೆ ತಿಳಿವಳಿಕೆ ನೀಡಬೇಕು ಮತ್ತು ವಿದ್ಯಾರ್ಥಿಗಳು ವಾಹನ ಚಲಾವಣೆಗೆ ಕಡ್ಡಾಯವಾಗಿ ಲೈಸನ್ಸ್ ಮಾಡಿಸಿಕೊಂಡಿರಬೇಕು ವಾಹನ ಚಲಿಸುವಾಗ ಹೆಲ್ಮೆಟ್ ಸೀಟ್ ಬೆಲ್ಟ್ ಬಳಸಿಕೊಳ್ಳಬೇಕು ಹಾಗೂ ತಮ್ಮ ಅಮೂಲ್ಯವಾದ ಜೀವನ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕೆಂದು ಮೂಡಲಗಿ ಪೋಲಿಸ ಠಾಣೆಯ ಪಿಎಸ್‍ಐ ಎಚ್.ವಾಯ್. ಬಾಲದಂಡಿ ಹೇಳಿದರು

ಅವರು ಮೂಡಲಗಿಯ ಪೋಲಿಸ್ ಠಾಣೆ ಹಾಗೂ ಆರ್.ಡಿ.ಎಸ್. ಪಿಯು ಕಾಲೇಜು ಸಯೋಗದಲ್ಲಿ ಆಯೋಜಿಸದ ಮಾದಕ ವಸ್ತುಗಳ ವಿರೋದಿ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿಗಳಲ್ಲರೂ ಭಾರತ ಸರಕಾರದ ಮಾದಕ ವಸ್ತು ಶಪಥದ ಲಿಂಕ್ ಬಳಿಸಿ ತಮ್ಮ ಮಾಹಿತಿ ದಾಖಲಿಸಿ ಪ್ರತಿಜ್ಞೆ ಸ್ವೀಕರಿಸಿದ ಪ್ರಮಾಣ ಪತ್ರ ಪಡೆದು ಆರೋಗ್ಯಯುತ ಸಮಾಜಕ್ಕೆ ಮಹತ್ವ ನೀಡಬೇಕೆಂದರು.

ಪೋಲಿಸ್ ಠಾಣೆಯ ಪೇದೆಯಾದ ಎಂ. ಎಸ್ ಒಡೆಯರ ಮಾತನಾಡಿ ವಿದ್ಯಾರ್ಥಿಗಳು ಆನ್ ಲೈನ್ ಶಾಪಿಂಗ್ ಮತ್ತು ಆನ್ ಲೈನ್ ಚಾಟಿಂಗ, ಆನ್ ಲೈನ್ ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸುವಾಗ ಬಹಳ ಎಚ್ಚರಿಕೆ ವಹಿಸುವುದು ಅವಶ್ಯವಿದೆ ಇಂದು ಅತೀ ಹೆಚ್ಚಾಗಿ ಸೈಬರ ಕ್ರೈಮ್ ನಡೆಯುತ್ತಿರುವುದು ಅನ್ ಲೈನ್ ವ್ಯವಹಾರಗಳಲ್ಲಿ ಆದಷ್ಟು ಅಪರಾಧ ಕೃತ್ಯಗಳಿಂದ ವಿದ್ಯಾರ್ಥಿಗಳು ದೂರವಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಸಂಜೀವ ವಾಲಿ ವಹಿಸಿಕೊಂಡಿದ್ದರು ಪೋಲಿಸ್ ಪೇದೆ ಪರಗೊಂಡ ಪಾಟೀಲ, ಪದವಿ ಕಾಲೇಜಿನ ಪ್ರಾಚಾರ್ಯ ಸತ್ಯೇಪ್ಪ ಗೋಟೂರ, ಉಪನ್ಯಾಸಕರಾದ ಸಂತೋಷ ಲಟ್ಟಿ, ಹಣಮಂತ ಚಿಕ್ಕೋಡಿ, ಸಲ್ಮಾ ಮುಲ್ಲಾ, ಉಮಾ ಮೇಚನ್ನವರ, ರವಿ ಕಟಗೇರಿ, ಲಕ್ಷ್ಮೀ ಹಂದಿಗುಂದ, ಬಾಳು ಪುರವಂತ ಮತ್ತಿತರರು ಹಾಜರಿದ್ದರು.


Spread the love

About inmudalgi

Check Also

ಯೋಜನೆಗಳ ಸದುಪಯೋಗವಾಗಲಿ’ ಕಾರ್ಮಿಕರಿಗೆ ಕಿಟ್ ವಿತರಣೆ | ಗುರುತಿನ ಚೀಟಿ ಮಾಡಿಸಿಕೊಳ್ಳಿ: ಬಾಲಚಂದ್ರ ಜಾರಕಿಹೊಳಿ

Spread the loveಮೂಡಲಗಿ ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅಂತಹ ಯೋಜನೆಗಳ ಸದುಪಯೋಗಕ್ಕೆ ಶಾಸಕ ಮತ್ತು ಬೆವೆಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ