Breaking News
Home / Recent Posts / ದಿ.ಚೇತನ ಕೊಣ್ಣೂರ ಅವರ 33ನೇ ಜನ್ಮ ದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮ

ದಿ.ಚೇತನ ಕೊಣ್ಣೂರ ಅವರ 33ನೇ ಜನ್ಮ ದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮ

Spread the love

ಬೆಟಗೇರಿ:ಸಮೀಪದ ಮಮದಾಪೂರ ಗ್ರಾಮದ ಶ್ರೀ ಚೇತನ ಈರಪ್ಪ ಕೊಣ್ಣೂರ ಮೆಮೊರೀಯಲ್ ಚಾರಿಟೇಬಲ್ ಟ್ರಸ್ಟ್‍ನ ದ್ವಿತೀಯ ವಾರ್ಷಿಕೋತ್ಸವ, ದಿ.ಚೇತನ ಕೊಣ್ಣೂರ ಅವರ 33ನೇ ಜನ್ಮ ದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಮಾ.12ರಂದು ಜರುಗಿದವು.
ಮಮದಾಪೂರ ಚರಮೂರ್ತೇಶ್ವರ ಮಹಾಸ್ವಾಮಿಜಿ, ಶಾಂತಾರೂಢ ಸ್ವಾಮಿಜಿ ಸಾನಿಧ್ಯ, ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ಚಂದ್ರಶೇಖರ ಕೊಣ್ಣೂರ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಸಾ.ಶಿ.ಇಲಾಖೆ ಸಹ ನಿರ್ದೇಶಕ ಗಜಾನನ ಮನ್ನಿಕೇರಿ ಜ್ಯೋತಿ ಬೆಳಗಿಸಿದರು.

ಶ್ರೀಚೇಈಕೊಮೆಚಾ ಟ್ರಸ್ಟ್ ಅಧ್ಯಕ್ಷ ಈರಪ್ಪ ಕೊಣ್ಣೂರ ಮಾತನಾಡಿದರು.
ಶ್ರೀಚೇಈಕೊಮೆಚಾ ಟ್ರಸ್ಟ್ ವತಿಯಿಂದ 5ನೇ ತರಗತಿ ಮಕ್ಕಳಿಗೆ ಚೇತನ ಪ್ರೇರಣಾ ಸ್ಪರ್ಧೆ, ರಾಜ್ಯಮಟ್ಟದ ಕಬಡ್ಡಿ, ವಿವಿಧ ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಬಹುಮಾನ ಮತ್ತು ವಿವಿಧ ವಲಯ ಸಾಧಕರಿಗೆ, ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಪೀಠೊಪಕರಣ, ಸಹಾಯಧನ ವಿತರಣೆ, ಗಣ್ಯರು, ಅತಿಥಿಗಳಿಗೆ, ಶ್ರೀಗಳಿಗೆ ಸತ್ಕಾರ ಜರುಗಿತು.
ಸ್ಥಳೀಯ ಶ್ರೀ ಚೇತನ ಈರಪ್ಪ ಕೊಣ್ಣೂರ ಮೆಮೊರೀಯಲ್ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ವಿದ್ಯಾರ್ಥಿಗಳು, ವಿವಿಧ ವಲಯ ಸಾಧಕರು, ದಿ.ಚೇತನ ಕೊಣ್ಣೂರ ಕುಟುಂಬದವರು, ಗೆಳೆಯರ ಬಳಗದ ಸದಸ್ಯರು, ಗಣ್ಯರು. ಗ್ರಾಮಸ್ಥರು, ಇತರರು ಇದ್ದರು.


Spread the love

About inmudalgi

Check Also

‘ಸಮಾಜ ಸೇವೆಯಲ್ಲಿ ನಿಸ್ವಾರ್ಥತೆ ಇರಲಿ’- ರಾಜಶೇಖರ ಹಿರೇಮಠ

Spread the loveಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 2025-26ನೇ ಸಾಲಿನ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ವಿಶಾಲ ಶೀಲವಂತ ಅವರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ