Breaking News
Home / Recent Posts / ಅಮೃತ್ ಯೋಜನೆಯಡಿ 39,010 ಕೋಟಿ ರೂ.ಗಳನ್ನು ನೀರು ಸರಬರಾಜು ಕ್ಷೇತ್ರಕ್ಕೆ ಮೀಸಲಿಡಲಾಗಿದೆ

ಅಮೃತ್ ಯೋಜನೆಯಡಿ 39,010 ಕೋಟಿ ರೂ.ಗಳನ್ನು ನೀರು ಸರಬರಾಜು ಕ್ಷೇತ್ರಕ್ಕೆ ಮೀಸಲಿಡಲಾಗಿದೆ

Spread the love

ಮೂಡಲಗಿ: ದೇಶದ ನಗರಗಳ ಪ್ರತಿ ಮನೆ ಮನೆಗೂ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸುವದು ಉದ್ದೇಶದಿಂದ 500 ನಗರ ಮತ್ತು ಪಟ್ಟಣಗಳಲ್ಲಿ ಅಮೃತ್ ಯೋಜನೆಯಡಿ 39,010 ಕೋಟಿ ರೂ.ಗಳನ್ನು ನೀರು ಸರಬರಾಜು ಕ್ಷೇತ್ರಕ್ಕೆ ಮೀಸಲಿಡಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಹೇಳಿದರು.
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರಿನ ಪೂರೈಕೆಗಾಗಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಸಂಸದ ಈರಣ್ಣ ಕಡಾಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 42,400 ಕೋಟಿ ರೂ. ಮೌಲ್ಯದ 1,351 ನೀರು ಸರಬರಾಜು ಯೋಜನೆಗಳಲ್ಲಿ 14,049 ಕೋಟಿ ರೂ ಮೌಲ್ಯದ 834 ಯೋಜನೆಗಳು ಪೂರ್ಣಗೊಂಡಿದ್ದು,. ಇವುಗಳಲ್ಲಿ ಒಟ್ಟಾರೆಯಾಗಿ 31,863 ಕೋಟಿ ರೂ ಮೌಲ್ಯದ ನೀರು ಸರಬರಾಜು ಯೋಜನೆಗಳು ಕಾರ್ಯಗತವಾಗಿ ಪೂರ್ಣಗೊಂಡಿವೆ. ದೇಶದ 500 ನಗರಗಳಲ್ಲಿ 139 ಲಕ್ಷ ಟ್ಯಾಪ್ ಸಂಪರ್ಕವನ್ನು ಒದಗಿಸುವ ಗುರಿಯನ್ನು ಸಾಧಿಸುವದಕ್ಕಾಗಿ ಇಲ್ಲಿಯವರೆಗೆ ಅಮೃತ್ ಯೋಜನೆ ಮತ್ತು ಇತರ ಪ್ರಮುಖ ಯೋಜನೆಗಳೊಂದಿಗೆ ಸಾರ್ವತ್ರಿಕ ನೀರು ಸರಬರಾಜು ಸಾಧಿಸಲು 126 ಲಕ್ಷ ಹೊಸ ನೀರಿನ ನಲ್ಲಿ ಸಂಪರ್ಕಗಳನ್ನು ಇಲ್ಲಿಯವರೆಗೂ ಒದಗಿಸಲಾಗಿದೆ.
ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯು 2024ರ ವೇಳೆಗೆ ಪ್ರತಿ ಗ್ರಾಮೀಣ ಕುಟುಂಬಕ್ಕೆ ಗುಣಮಟ್ಟದ ಹಾಗೂ ನಿಗದಿತ ಪ್ರಮಾಣದಲ್ಲಿ ಕುಡಿಯಲು ಯೋಗ್ಯವಾದ ನೀರನ್ನು ಪೂರೈಸುವದಾಗಿದೆ. ಇಲ್ಲಿಯವರೆಗೆ ಅಂದರೆ ಮಾರ್ಚ್ 10, 2022 ರವರೆಗೆ 19.31 ಕೋಟಿ ವೆಚ್ಚದಲ್ಲಿ ಗ್ರಾಮೀಣ ಪ್ರದೇಶದ 9.16 ಕೋಟಿ ಮನೆಗಳಿಗೆ ಟ್ಯಾಪ್ ನೀರು ಸರಬರಾಜು ವ್ಯವಸ್ಥೆ ಈ ಯೋಜನೆಯ ಮೂಲಕ ನೀಡಲಾಗಿದೆ ಎಂದು ಮಾನ್ಯ ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಹೇಳಿದರು.

 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ