ಮೂಡಲಗಿ: ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಹರಿಕಾರಿ ಡಾ. ಪ್ರಭಾಕರ ಕೋರೆ ಅವರ 75ನೇ ಅಮೃತ ಮಹೋತ್ಸವ ಸಮಾರಂಭದದಲ್ಲಿ ಅರಭಾವಿ ಮತ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಬೇಕೆಂದು ಕಾಂಗ್ರೇಸ್ ಮುಖಂಡ ಕಲ್ಲೋಳಿಯ ಲಕ್ಕಣ್ಣ ಸವಸುದ್ದಿ ಹೇಳಿದರು.
ಬುಧವಾರದಂದು ಮೂಡಲಗಿ ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ನೆಹರು ನಗರದ ಜಿಲ್ಲಾ ಕ್ರೀಡಾಂಗಣ, ಜೆಎಮ್‍ಸಿ ಆವರಣದಲ್ಲಿ ಅ.15ರಂದು ಮಧ್ಯಾಹ್ನ ಡಾ. ಪ್ರಭಾಕರ ಕೋರೆ ಅವರು ಅಮೃತ ಮಹೋತ್ಸವ ಸಮಾರಂಭ ಪಕ್ಷಾತಿತವಾಗಿ ಜರುಗಲಿದೆ. ಕೇಂದ್ರ ಸರ್ಕಾರದ ಶಿಕ್ಷಣ,ಕೌಶಲ್ಯ ಅಭಿವೃದ್ದಿ ಹಾಗೂ ಉದ್ಯಮಶೀಲತೆ ಸಚಿವರಾದ ಧರ್ಮೆಂದ್ರ ಪ್ರಧಾನಜಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಚಿವರು, ಶಾಸಕರು ಆಗಮಿಸಲಿದ್ದು, ನಾವೂ ಕೂಡ ಡಾ. ಪ್ರಭಾಕರ ಕೋರೆ ಬೆಂಬಲಿಸಿ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಈಗಾಗಲೆ ಕ್ಷೇತ್ರದಲ್ಲಿ ಅಮೃತ ಮಹೋತ್ಸವ ಭಾಗವಹಿಸುವಂತೆ ಮನವಿ ಮಾಡಿಕೊಳ್ಳುತ್ತಿದೆವೆ ಎಂದರು.
ಬೆಳಗಾವಿ ಜಿಲ್ಲೆಗೆ ಡಾ.ಪ್ರಭಾಕರ ಕೋರೆ ಅವರ ಕೊಡುಗೆ ಅಪಾರವಾಗಿದ್ದು ಪಕ್ಷಾತೀತವಾಗಿ ನಡೆಯುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಯುವ ಮುಖಂಡ ಗುರು ಗಂಗನ್ನವರ ಮತ್ತಿತರು ಇದ್ದರು.
