ಫೆ. 19ರಂದು ಅರಭಾವಿ ಆಂಜನೇಯ ಶಾಲೆಯ ವಾರ್ಷಿಕೋತ್ಸವ
ಮೂಡಲಗಿ: ತಾಲ್ಲೂಕಿನ ಅರಭಾವಿಯ ಆಂಜನೇಯ ಗ್ರಾಮೀಣ ಶಿಕ್ಷಣ ಸಂಸ್ಥೆಯ ಶ್ರೀ ಆಂಜನೇಯ ಅನುದಾನಿತ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 33ನೇ ವರ್ಷದ ವಾರ್ಷಿಕೋತ್ಸವ ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವು ಫೆ. 19ರಂದು ಸಂಜೆ 4ಕ್ಕೆ ಶಾಲೆಯ ಆವರಣದಲ್ಲಿ ಜರುಗಲಿದೆ.
ಸಮಾರಂಭದ ಸಾನ್ನಿಧ್ಯವನ್ನು ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಮತ್ತು ಶಿವಯ್ಯ ಸ್ವಾಮಿಗಳು ವಹಿಸುವರು.
ಉದ್ಘಾಟನೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ನೆರವೇರಿಸುವರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಶಂಕರಣ್ಣಾ ಬಿಲಕುಂದಿ ವಹಿಸುವರು.
ಶಾಸಕ ರಮೇಶ ಜಾರಕಿಹೊಳಿ, ಸಚಿವ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಸಂಸದೆ ಪ್ರೀಯಾಂಕ ಜಾರಕಿಹೊಳಿ ಭಾಗಹಿಸುವರು.
ಅತಿಥಿ ಉಪನ್ಯಾಸಕರಾಗಿ ಮೂಡಲಗಿಯ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಭಾಗವಹಿಸುವರು ಎಂದು ಮುಖ್ಯ ಶಿಕ್ಷಕ ಎಂ.ಬಿ. ಜೈನ ತಿಳಿಸಿದ್ದಾರೆ.