ಮೂಡಲಗಿ: ತಾಲೂಕಿನ ಅರಳಿಮಟ್ಟಿ ಗ್ರಾಮದ ಚಕ್ರವರ್ತಿ ಶ್ರೀ ಸದಾಶಿವ ಮುತ್ಯಾನ ಭಜನಾ ಕಾರ್ಯಕ್ರಮ ಹಾಗೂ ಸಮುದಾಯ ಭವನ ಉದ್ಘಾಟನಾ ಸಮಾರಂಭ ಸೆ.18 ಮತ್ತು 19 ರಂದು ಜರುಗಲಿದೆ.
ಸ.18 ರಂದು ರಾತ್ರಿ 8ಕ್ಕೆ ಭಜನಾ ಕಾರ್ಯಕ್ರಮ ಜರುಗುವುದು, ಸೆ.19 ರಂದು ಬೆಳಿಗ್ಗೆ ಸದಾಶಿವ ಮುತ್ಯಾನ ಕರ್ತೃಗದ್ದುಗೆಗೆ ಮತ್ತು ಚಂದ್ರಗಿರಿದೇವಿ ಅಭಿಷೇಕ ಮತ್ತು ಗ್ರಾಮಸ್ಥರಿಂದ ಉಡಿ ತುಂಬುವ ಕಾರ್ಯಕ್ರಮ ಜರುಗುವುದು. ಅಂದು ಮುಂ.11 ಗಂಟೆಗೆ ಪ್ರವಚ, ಮಧ್ಯಾಹ್ನ 12 ಗಂಟೆಗೆ ನೂತನ ಸಮುದಾಯ ಭವನ ಉದ್ಘಾಟನೆ ಮತ್ತು 12-30 ರಿಂದ ಅನ್ನ ಪ್ರಸಾದ ಜರುಗುವುದು.
ಸಮಾರಂಭದಲ್ಲಿ ಕೊಲೂರು ಬಬಲಾದಿ ಮಠದ ಶ್ರೀ ವೇದಮೂರ್ತಿ ಚಿಕ್ಕಯ್ಯ ಮಹಾಸ್ವಾಮಿಜಿ, ನಾಗನೂರಿನ ಕಾವ್ಯಾಶ್ರೀ ಅಮ್ಮನವರು, ಶಾಸಕ ಬಾಂಲಚಂದ್ರ ಜಾರಕಿಹೊಳಿ, ಸಂಸದರಾದ ಜಗದೀಶ ಶೆಟ್ಟರ, ಈರಣ್ಣ ಕಡಾಡಿ, ಮಾಜಿ ಸಂಸದೆ ಮಂಗಳಾ ಅಂಗಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ ಮತ್ತಿತರರು ಭಾಗವಹಿಸುವರು.
Check Also
ಸ್ಥಳೀಯರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು : ಎಮ್.ಎಲ್.ಯಡ್ರಾಂವಿ
Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸ್ವಚ್ಛತೆಗೆ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ. ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ …