Breaking News
Home / inmudalgi

inmudalgi

*ಕವಿ ಮನೆಯೊಳ್ ಕಾವ್ಯಾವಲೋಕನ*

ಮೂಡಲಗಿ: ಚುಟುಕು ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮೂಡಲಗಿ ವತಿಯಿಂದ “ಕವಿ ಮನೆಯೊಳ್ ಕಾವ್ಯಾವಲೋಕನ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಶನಿವಾರ ದಿವಸ ಸಾಯಂಕಾಲ 6 ಗಂಟೆಗೆ ಡಾ. ಮಹದೇವ ಜಿಡ್ಡಿಮನಿ ಇವರ ಸ್ನೇಹ ಸಂಕುಲ ನಿಲಯ ಲಕ್ಷ್ಮಿ ನಗರ ಮೂಡಲಗಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಸುರೇಶ ಲಂಕೆಪ್ಪನವರ ವಹಿಸಿಕೊಳ್ಳಲಿದ್ದಾರೆ. ದುರ್ಗಪ್ಪ ದಾಸನ್ನವರ ಮಿತ್ರ ಸಂಮಿತ ಪುಸ್ತಕದ ಕಾವ್ಯಾವಲೋಕನ ಮಾಡಲಿದ್ದಾರೆ. ಹಾಗೂ  ಮಹಾವೀರ ಸಲ್ಲಾಗೋಳ ಕವಿ ಪರಿಚಯವನ್ನು ಮಾಡಲಿದ್ದು ಕವಿಗಳಾದ …

Read More »

ರಾಜ್ಯದ 31 ಜಿಲ್ಲೆಯ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಸಸ್ತಿ ಪ್ರಧಾನ

ಮೂಡಲಗಿ : ಕರ್ನಾಟಕ ರಾಜ್ಯದ 31 ಜಿಲ್ಲೆಯ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಸಸ್ತಿ ಪ್ರಧಾನ ಕಾರ್ಯಕ್ರಮ ಯುವ ಜನತೆಗೆ ಸ್ಪೂರ್ತಿದಾಯಕವಾಗಿದೆ. ಜಾನಪದ ಸಾಹಿತ್ಯದಲ್ಲಿ ಮನುಷ್ಯನ ಬದುಕಿನ ಪಾಠ ಅಡಗಿದೆ ಎಂದು ಹುಲಜಂತಿ ಪಟ್ಟದ ಪೂಜ್ಯರಾದ ಮಾಳಿಂಗರಾಯ ಮಹಾರಾಜರು ಅಭಿಪ್ರಾಯ ಪಟ್ಟರು. ಅವರು ಇತ್ತೀಚೆಗೆ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರ ‌.ಜಿಲ್ಲಾ ಘಟಕ ಬೆಳಗಾವಿ ಹಾಗೂ ಶ್ರೀ …

Read More »

‘ಭಾರತ ದೇಶವು ಅನಂತ ಕೋಟಿ ದೇವಸ್ಥಾನಗಳ ನೆಲೆಸಿದ್ದ ಪುಣ್ಯ ಭೂಮಿಯಾಗಿದೆ- ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು

ಮೂಡಲಗಿ: ‘ಭಾರತ ದೇಶವು ಅನಂತ ಕೋಟಿ ದೇವಸ್ಥಾನಗಳು, ಮಠಮಾನ್ಯಗಳು, ಸಾಧು, ಸತ್ಪುರುಷರು ನೆಲೆಸಿದ್ದ ಪುಣ್ಯ ಭೂಮಿಯಾಗಿದೆ’ ಎಂದು ಶ್ರೀಶೈಲ್ ಮಹಾಪೀಠದ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು. ಇಲ್ಲಿಯ ಬಸವ ರಂಗಮಂಟಪದಲ್ಲಿ ಮಂಗಳವಾರ ಜರುಗಿದ ಭದ್ರಕಾಳಿ ಸಮೇತ ವೀರಭದ್ರೇಶ್ವರ ನೂತನ ಪಲ್ಲಕ್ಕಿ ಆಗಮನ ಹಾಗೂ 32ನೇ ಜಾತ್ರಾ ಮಹೋತ್ಸವದ ಧರ್ಮ ಸಭೆಯ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಭಾರತೀಯರ ದೈವ ಭಕ್ತಿಯೂ ಅನನ್ಯವಾಗಿದೆ. ಧಾರ್ಮಿಕ ಆಚರಣೆಗಳ ಮೂಲಕ ಧರ್ಮವನ್ನು ಉಳಿಸಬೇಕು …

Read More »

ಹಿರೇಮಠರಿಗೆ ಪಿಎಚ್‌ಡಿ ಪದವಿ

ಹಿರೇಮಠರಿಗೆ ಪಿಎಚ್‌ಡಿ ಪದವಿ ಮೂಡಲಗಿ: ಇಲ್ಲಿನ ಶ್ರೀನಿವಾಸ ಸಿಬಿಎಸ್‌ಸಿ ಶಾಲೆಯ ಹಿಂದಿ ಶಿಕ್ಷಕ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥ ಶಿದ್ರಾಮಯ್ಯ ಹಿರೇಮಠ ಅವರಿಗೆ ಮದ್ರಾಸ್‌ನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿ ವಿಷಯದಲ್ಲಿ ಪಿಎಚ್‌ಡಿ (ಡಾಕ್ಟರೇಟ್) ಪದವಿ ಲಭಿಸಿದೆ. ‘ರಂಗೇಯ ರಾಘವ ಅವರ ಕಾದಂಬರಿಗಳಲ್ಲಿ ನಾರಿ’ ಎಂಬ ವಿಷಯದ ಕುರಿತು ನಡೆಸಿದ ಸಂಶೋಧನಾ ಪ್ರಬಂಧಕ್ಕೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯು …

Read More »

ಸರಕಾರಿ ಶಾಲೆಗೆ 51ಸಾವಿರ ಸೌಂಡ ಸಿಸ್ಟಮ್ ಕಾಣಿಕೆ

ಸರಕಾರಿ ಶಾಲೆಗೆ 51ಸಾವಿರ ಸೌಂಡ ಸಿಸ್ಟಮ್ ಕಾಣಿಕೆ ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಗೆ ರೂ.51,000/ ಬೆಲೆಯ ಸೌಂಡ್ ಸಿಸ್ಟಮ್, ಮೈಕ್, ಸೌಂಡ ಬಾಕ್ಸನ್ನು ಗ್ರಾಮದ ಗುತ್ತಿಗೆದಾರ ಮಂಜುನಾಥ ಯಲ್ಲಪ್ಪ ಗಂಗರಡ್ಡಿ  ಬಸವರಾಜ ಗಂಗರಡ್ಡಿ ಇವರು ಕಾಣಿಕೆಯಾಗಿ ನೀಡಿದ್ದಾರೆ. ಮುಖ್ಯೋಪಾಧ್ಯಯ ಬಿ.ಬಿ.ತಟ್ಟಿ, ಎಸ್‍ಡಿಎಮ್‍ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಶಾಲೆಯ ಶಿಕ್ಷಕರು ಇದ್ದರು.

Read More »

ಬೆಟಗೇರಿ ಕೃಷ್ಣಶರ್ಮ ಚೈತನ್ಯ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

ಬೆಟಗೇರಿ ಕೃಷ್ಣಶರ್ಮ ಚೈತನ್ಯ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ ಬೆಟಗೇರಿ:ಪ್ರತಿಯೊಬ್ಬ ಭಾರತಿಯ ನಾಗರಿಕ ಸಂವಿಧಾನದ ಆಶಯದಂತೆ ನಡೆದುಕೊಂಡರೆ ಸಮಸಮಾಜ ನಿರ್ಮಾಣಗೊಂಡು ಸುಂದರ ಬದುಕು ಸಾಗಿಸಲು ಸಾಧ್ಯ ಎಂದು ಎಸ್.ವೈ.ಪಾಟೀಲ ಹೇಳಿದರು. ಮೂಡಲಗಿ ಚೈತನ್ಯ ಗ್ರುಪ್‍ನ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬೆಟಗೇರಿ ಕೃಷ್ಣಶವರ್i ಚೈತನ್ಯ ಶಾಲೆ ಹಾಗೂ ಚೈತನ್ಯಮಯಿ ಸತ್ಯೇವ್ವ ದೇಯನ್ನವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜ.26ರಂದು ನಡೆದ 77ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ ರಚಿಸಿದ ಸಂವಿಧಾನ …

Read More »

ಬೆಟಗೇರಿ ವಿವಿಧೆಡೆ ಸಡಗರದಿಂದ ನಡೆದ 77 ನೇ ಗಣರಾಜ್ಯೋತ್ಸವ ದಿನಾಚರಣೆ

ಬೆಟಗೇರಿ ವಿವಿಧೆಡೆ ಸಡಗರದಿಂದ ನಡೆದ 77 ನೇ ಗಣರಾಜ್ಯೋತ್ಸವ ದಿನಾಚರಣೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವೇಶ್ವರ ಸೌಹಾರ್ದ ಸಹಕಾರಿಯಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಸಹಕಾರಿಯ ಅಧ್ಯಕ್ಷ ಬಸವರಾಜ ಮಾಳೇದ ಧ್ವಜಾರೋಹಣ ನೆರವೇರಿಸಿದರು. ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಸಮರ್ಪಿಸಿದ ಬಳಿಕ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಲಕ್ಷ್ಮಣ ನೀಲಣ್ಣವರ, ಸಂಗಯ್ಯ ಹಿರೇಮಠ, ಈರಯ್ಯ ಹಿರೇಮಠ, ತಮ್ಮಣ್ಣ ಗಾಣಗಿ, ರಮೇಶ ನಾಯ್ಕ, ರಾಮಣ್ಣ …

Read More »

ಬೃಹತ್ ಹಿಂದೂ ಸಮ್ಮೇಳನ

  ಮೂಡಲಗಿ: ‘ಪ್ರತಿ ಭಾರತೀಯರಲ್ಲಿ ಹಿಂದೂತ್ವವನ್ನು ಜಾಗೃತಿಗೊಳಿಸಿ ಎಲ್ಲ ಹಿಂದೂಗಳನ್ನು ಒಗ್ಗಟ್ಟಿಸುವುದು ಹಿಂದೂ ಸಮಾವೇಶದ ಮುಖ್ಯ ಉದ್ದೇಶವಾಗಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಂಜಯ ನಾಯಕ ಹೇಳಿದರು. ಪಟ್ಟಣದ ಬಸವ ರಂಗಮಂಟಪದ ಬಳಿಯಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಆಯೋಜಿಸಿದ್ದ ಬೃಹತ್ ಹಿಂದೂ ಸಮ್ಮೇಳನದಲ್ಲಿ ದಿಕ್ಕೂಚಿ ಭಾಷಣ ಮಾಡಿದ ಅವರು ಯಾರನ್ನೋ ತೆಗಳುವುದಾಗಲಿ, ರಾಜಕೀಯ ಪಕ್ಷಕ್ಕಾಗಲಿ, ಜಾತಿ, ಮತ, ಪಂಥಕ್ಕೆ ಸಂಘಟನೆಯು ಸೀಮಿತವಾಗಿರುವುದಿಲ್ಲ. ಪ್ರತಿಯೊಬ್ಬರಲ್ಲಿಯೂ ದೇಶಭಕ್ತಿಯನ್ನು ಜಾಗೃತಿಗೊಳಿಸಿ ಹಿಂದೂ …

Read More »

‘ಬಸ್ ಚಾಲಕರು ಪ್ರಯಾಣಿಕರ ಜೀವ ರಕ್ಷಕರು’- ಸಾಹಿತಿ ಬಾಲಶೇಖರ ಬಂದಿ

ಮೂಡಲಗಿ: ಮೂಡಲಗಿ ಬಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆಯ ನಿಲ್ದಾಣ ಅಧಿಕಾರಿಗಳು, ಮೂಡಲಗಿಯ ನಿಸರ್ಗ ಫೌಂಡೇಶನ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಬಸ್ ಚಾಲಕರನ್ನು ಶಾಲು ಹೊದಿಸಿ, ಸಿಹಿ ವಿತರಿಸಿ ಅವರನ್ನು ಗೌರವಿಸುವ ಮೂಲಕ ಬಸ್ ಚಾಲಕರ ದಿನಾಚರಣೆಯನ್ನು ಆಚರಿಸಿದರು. ಚಾಲಕರಾದ ಎನ್.ಎಲ್. ನದಾಫ, ಬಾಬಾಸಾಹೇಬ ಕಾಂಬಳೆ, ಟಿ.ಎಸ್. ಬಿರಾದಾರ, ಎಂ.ಡಿ. ಹಿಪ್ಪರಗಿ, ಎ.ಎಂ. ಬಿಳೂಂಡಗಿ, ಎಸ್.ಎನ್. ಪಿರಜಾದೆ, ಎಸ್.ಎಸ್. ಟೊನಪೆ ಅವರನ್ನು ಸನ್ಮಾನಿಸಿದರು. ಅತಿಥಿ ಸಾಹಿತಿ, …

Read More »

ಜ.27,28ರಂದು ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಜ.27,28ರಂದು ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮೂಡಲಗಿ: ಪಟ್ಟಣದ ಬಳಿಗಾರ ಓಣಿಯ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ನೂತನ ಪಲ್ಲಕ್ಕಿ ಆಗಮನ ಹಾಗೂ 32ನೇ ಜಾತ್ರಾ ಮಹೋತ್ಸವವು ಜ.27 ಹಾಗೂ 28 ರಂದು ಶ್ರೀ ಬಸವ ರಂಗ ಮಂಟಪದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಧರ್ಮಾದಿಕಾರಿ ಈರಯ್ಯಾ ಹಿರೇಮಠ ಹೇಳಿದರು. ಅವರು ಶನಿವಾರ ಪಟ್ಟಣದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾಹಿತಿ ನೀಡುತ್ತಾ, ಶ್ರೀಶೈಲ ಮಹಾಪೀಠದ ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ …

Read More »