ಕಣಗಲಾ(ತಾ.ಹುಕ್ಕೇರಿ): ಎಲ್ಲ ಸಮಾಜಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ಸೆ.28 ರಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಚುನಾವಣೆ ನಡೆಯಲಿರುವ ನಿಮಿತ್ತ ಹುಕ್ಕೇರಿ ತಾಲೂಕಿನ ಕಣಗಲಾ ಜಿ.ಪಂ. ವ್ಯಾಪ್ತಿಯ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಸರ್ವ ಸಮಾಜಗಳ ಏಳ್ಗೆಯೇ ನಮ್ಮ ಪ್ರಮುಖ ಆದ್ಯತೆ ಆಗಿದೆ ಎಂದು ತಿಳಿಸಿದರು. ಲಿಂಗಾಯತರು, ಹಾಲುಮತ, …
Read More »ದಿ.18ರಂದು ವೇಮನ್ ಕೋ-ಆಪ್.ಸೊಸಾಯಿಟಿಯ 24ನೇ ಸರ್ವಸಾಧಾರಣ ಸಭೆ
ಮೂಡಲಗಿ: ಪಟ್ಟಣದ ಪತಿಷ್ಠಿತ ಶ್ರೀ ವೇಮನ್ ಕೋ-ಆಪ್. ಕ್ರೆಡಿಟ್ ಸೊಸಾಯಿಟಿ ಲಿ. ಮೂಡಲಗಿಯ ಸನ್ 2024-2025ನೇ ಸಾಲಿನ 24ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಗುರುವಾರ ದಿ.18ರಂದು ಮುಂಜಾನೆ 10-00 ಗಂಟೆಗೆ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದು ಸಭೆಯ ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷರಾದ ಸಂತೋಷ ಕೃ. ಸೋನವಾಲಕರ ರವರ ವಹಿಸಲಿದ್ದು ಸಂಘದ ಸರ್ವ ಸದಸ್ಯರು ಸರಿಯಾದ ವೇಳೆಗೆ ಆಗಮಿಸಬೇಕೆಂದು ಸಂಘದ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.
Read More »ವಿಶ್ವಕರ್ಮ ಲೋಕಕ್ಕೆ ಗುರು – ಶ್ರೀಶೈಲ ಗುಡುಮೆ
ಮೂಡಲಗಿ: ವಿಶ್ವಕರ್ಮನು ಜಗತ್ತಿನ ಸೃಷ್ಟಿಕರ್ತನಾಗಿದ್ದು, ಲೋಕದ ಸ್ಥಿತಿ- ಲಯಾಧಿಗಳಿಗೆ ಕಾರಕನಾಗಿ ಲೋಕಕ್ಕೆ ಗುರುವಾಗಿದ್ದಾನೆ ಎಂದು ಮೂಡಲಗಿ ತಹಶೀಲ್ದಾರ ಶ್ರೀಶೈಲ ಗುಡುಮೆ ಹೇಳಿದರು. ಪಟ್ಟಣದಲ್ಲಿ ಬುಧವಾರ ಮೂಡಲಗಿ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಮೂಡಲಗಿ ವಿಶ್ವಕರ್ಮ ಸಮಾಜದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಕರ್ಮನ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಡಾ. ರಾಜು ಕಂಬಾರ …
Read More »ವಿಶ್ವಕರ್ಮ ಒಬ್ಬ ದೇವಶಿಲ್ಪಿಯಾಗಿದ್ದಾನೆ: ಬಸವಂತ ಕೋಣಿ
ಬೆಟಗೇರಿ:ದೇವಶಿಲ್ಪಿ ವಿಶ್ವಕರ್ಮನು ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ. ಬ್ರಹ್ಮಾಂಡ ತುಂಬೆಲ್ಲಾ ವ್ಯಾಪಿಸಿದ್ದಾನೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಸವಂತ ಕೋಣಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿಶ್ವಕರ್ಮ ಸಮುದಾಯದ ವತಿಯಿಂದ ಸ್ಥಳೀಯ ಗ್ರಾಮ ದೇವತೆ ದ್ಯಾಮವ್ವದೇವಿ ದೇವಾಲಯದಲ್ಲಿ ಸೆ.17ರಂದು ನಡೆದ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಮಾತನಾಡಿ, ವಿಶ್ವಕರ್ಮ ಒಬ್ಬ ದೇವಶಿಲ್ಪಿಯಾಗಿದ್ದಾನೆ ಎಂದರು. ಸ್ಥಳೀಯ ವಿಶ್ವಕರ್ಮ ಸಮುದಾಯದ ಯುವ ಮುಖಂಡ …
Read More »*ಯುವ ಸಂಘಟಕ ಸಿದ್ದಣ್ಣ ದುರದುಂಡಿ ಗೆ ಮಾತೃಭೂಮಿ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿದ ಸಚಿವ ಸಂತೋಷ ಲಾಡ್*
ಮೂಡಲಗಿ : ಮಾತೃಭೂಮಿ ಯುವಕರ ಸಂಘ (ರಿ) ಬೆಂಗಳೂರು ಇದರ ವತಿಯಿಂದ ಬೆಂಗಳೂರಿನ ನಾಗಮಂಗಲ ಹರ್ಷ ಇಂಟರನಿಷನಲ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡದ ಮಾತೃಭೂಮಿ 30 ನೇ ವಾರ್ಷಿಕೋತ್ಸವದ ಸಾಧಕರ ಸಂಭ್ರಮ ಸಮಾವೇಶದಲ್ಲಿ ಸಂಘಟನೆಯ ಸರದಾರ ಸಿದ್ದಣ್ಣ ದುರದುಂಡಿ ಅವರಿಗೆ ಮಾತೃಭೂಮಿ ರಾಜ್ಯ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಹಾಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌದರಿ, ಸಂಸ್ಥಾಪಕರಾದ ಡಾ. ಎಸ್ ಬಾಲಾಜಿ, …
Read More »*ನಿಡಸೋಸಿಯಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಪ್ರಚಾರಾರ್ಥ ಸಭೆ*
ಸಂಕೇಶ್ವರ: ದಿ. ಅಪ್ಪಣ್ಣಗೌಡ ಪಾಟೀಲರ ಪೆನೆಲ್ ಬೆಂಬಲಿಸಿ ಆಶೀರ್ವಾದ ಮಾಡಿದರೆ ಮುಂದಿನ ದಿನಗಳಲ್ಲಿ ವಿದ್ಯುತ್ ಸಹಕಾರಿ ಸಂಘವು ಅಭಿವೃದ್ಧಿ ಪಥದತ್ತ ಸಾಗುವುದಲ್ಲದೇ ಗ್ರಾಹಕರಿಗೆ ಉತ್ತಮ ದರ್ಜೆಯ ಸೇವೆಯನ್ನು ನೀಡಲಿಕ್ಕೆ ನಾವೆಲ್ಲರೂ ಬದ್ಧತೆಯಿಂದ ಕಾರ್ಯವನ್ನು ಮಾಡುತ್ತೇವೆ ಎಂದು ಚಿಕ್ಕೋಡಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆಯವರು ಭರವಸೆಯನ್ನು ನೀಡಿದರು. ಇಲ್ಲಿಗೆ ಸಮೀಪದ ನಿಡಸೋಸಿ ಗ್ರಾಮದಲ್ಲಿ ಸೋಮವಾರ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ನಿಮಿತ್ತವಾಗಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, …
Read More »ಓಝೋನ್ ಪದರು ಪ್ರಕೃತಿಯ ಜೀವ ರಕ್ಷಕ ಪ್ರಾಧ್ಯಾಪಕ ಆರ್ ಎಸ್ ಗೌರಿ
ಮೂಡಲಗಿ : ಓಜೋನ್ ಪದರವು ಪ್ರಕೃತಿಯಲ್ಲಿರುವ ಜೀವ ರಕ್ಷಕವಾಗಿದ್ದು ಮಾನವನ ಜೀವನದ ಸಕಲ ಕಾರ್ಯದ ಮೇಲೆ ಓಜೋನ್ ಪದರಿನ ಪಾತ್ರಬಹುಮುಖ್ಯವಾಗಿದ್ದು ಇಂದು ಓಜೋನ್ ಪದರಿನ ನಾಶಕ್ಕೆ ಮಾನವನ ಸ್ವಾರ್ಥ ಕಾರಣವಾಗಿರುತ್ತದೆ ತಂಪು ಪಾನಿಗಳನ್ನು ತಯಾರಿಸಿಕೊಳ್ಳಲು ಬಳಸುವ ಫ್ರಿಡ್ಜ್ ಬೃಹತ್ ಕೈಗಾರಿಕೆಗಳು ಹಾಗೂ ಕಾರುಗಳಲ್ಲಿ ಬಳಸುವ ಎಸಿ ಗಳಲ್ಲಿ ಉತ್ಪತ್ತಿಯಾಗುವ ಹಾನಿಕಾರಕ ಅಂಶಗಳು ಓಝೋನ ನಾಶಕ್ಕೆ ಕಾರಣವಾಗಿದ್ದು ನಾವೆಲ್ಲರೂ ಎಚ್ಚರಿಕೆ ವಹಿಸ ಬೇಕಾಗಿದೆ ಎಂದು ಅಥಣಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ …
Read More »‘ಬಸವೇಶ್ವರ ಕೋ.ಅಪ್ ಕ್ರೆಡಿಟ್ ಸೊಸೈಟಿಗೆ ರೂ.5.05 ಕೋಟಿ ಲಾಭ’- ಮಲ್ಲಿಕಾರ್ಜುನ ಢವಳೇಶ್ವರ
ಮೂಡಲಗಿ: ‘ಮೂಡಲಗಿಯ ಬಸವೇಶ್ವರ ಅರ್ಬನ್ ಕೋ.ಅಪ್ ಕ್ರೆಡಿಟ್ ಸೊಸಾಯಿಟಿಯು 2024-25 ಆರ್ಥಿಕ ವರ್ಷದ ಕೊನೆಯಲ್ಲಿ ರೂ.5.05 ಕೋಟಿ ನಿವ್ವಳ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಸೊಸಾಯಿಟಿ ಅಧ್ಯಕ್ಷ ಮಲ್ಲಿಕಾರ್ಜುನ ಢವಳೇಶ್ವರ ಹೇಳಿದರು. ಇಲ್ಲಿಯ ಬಸವೇಶ್ವರ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸಾಯಿಟಿಯ 30ನೇ ವರ್ಷದ ವಾರ್ಷಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸೊಸೈಟಿಯು ರೂ.6.41 ಕೋಟಿ ಶೇರು ಬಂಡವಾಳ, ರೂ.240.38 ಕೋಟಿ ಠೇವುಗಳು, ರೂ.23.40 ಕೋಟಿ ನಿಧಿಗಳು, ರೂ.71.79 ಕೋಟಿ …
Read More »ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ (ಹುಕ್ಕೇರಿ): ನಾನಾಗಲೀ, ನನ್ನ ಕುಟುಂಬವಾಗಲಿ. ಎಂದಿಗೂ ಜಾತಿ ರಾಜಕೀಯ ಮಾಡಿಲ್ಲ. ಜನರ ಪ್ರೀತಿ, ಆಶೀರ್ವಾದದಿಂದ ನಾವು ಒಂದೇ ಕುಟುಂಬದಲ್ಲಿ ಬೇರೇ ಬೇರೇ ಕ್ಷೇತ್ರಗಳಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಜನರಿಂದ ಆಯ್ಕೆಯಾಗಿದ್ದೇವೆ. ವಿರೋಧಿಗಳ ಆರೋಪದಲ್ಲಿ ಯಾವುದೇ ನಿಜಾಂಶವಿಲ್ಲ ಎಂದು ಅರಭಾವಿ ಶಾಸಕ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು. ಹುಕ್ಕೇರಿ ತಾಲೂಕಿನ ಎಲೆಮುನೋಳಿ ಗ್ರಾಮದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಪ್ರಚಾರ …
Read More »ಸತೀಶ ಶುಗರ್ಸ್ ಕಾರ್ಖಾನೆಯಲ್ಲಿ ಕಾರ್ಮಿಕರ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ
ಮೂಡಲಗಿ: ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯ ವಯೋಮಿತಿಗೆ ಸಂಬಂಧಿಸದೇ ಕಂಡುಬರುತ್ತಿರುವ ಹೆಚ್ಚಿನ ಪ್ರಮಾಣದ ಹೃದಯಾಘಾತಗಳ ಸಂಭವಿಸುತ್ತಿವೆ. ಜನರು ತಮ್ಮ ದೈಹಿಕ ಹಾಗೂ ಹೃದಯಕ್ಕೆ ಸಂಬಂಧಿಸಿದಂತೆ ದೈನಂದಿನ ವ್ಯಾಯಾಮ, ಯೋಗಾಭ್ಯಾಸವನ್ನು ರೂಢಿಸಿಕೊಳ್ಳಲು ಹಾಗೂ ಆರೋಗ್ಯಕರ ಆಹಾರ ಪದ್ದತಿಯನ್ನು ಅನುಸರಿಸಲು ಬೇಕೆಂದು ಸತೀಶ ಶುಗರ್ಸ್ ಕಾರ್ಖಾನೆಯ ಚೇರಮನ್ ಮತ್ತು ಮುಖ್ಯ ಹಣಕಾಸಿನ ಅಧಿಕಾರಿ ಪ್ರದೀಪಕುಮಾರ ಇಂಡಿ ಅವರು ಸಲಹೆ ನೀಡಿದರು ಅವರು ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ್ಸ್ ಕಾರ್ಖಾನೆಯಲ್ಲಿ ಆವರಣದಲ್ಲಿ ಕಾರ್ಖಾಣೆ …
Read More »
IN MUDALGI Latest Kannada News