Breaking News
Home / inmudalgi (page 136)

inmudalgi

ಆಪ್ತ ಸ್ನೇಹಿತನ ಅಗಲಿಕೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ

ಗೋಕಾಕ್- ರಾಜ್ಯದ ಹಿರಿಯ ಶಾಸಕ, ಆಹಾರ ಮತ್ತು ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಅಕಾಲಿಕ ನಿಧನಕ್ಕೆ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಕತ್ತಿ ಅವರ ನಿಧನದಿಂದ ಮುತ್ಸದ್ದಿ, ಕ್ರಿಯಾಶೀಲ ವ್ಯಕ್ತಿತ್ವದ ಆಪ್ತ ಸ್ನೇಹಿತನೊಬ್ಬನನ್ನು ಕಳೆದುಕೊಂಡಿದ್ದೇನೆ. ನನ್ನ ಮತ್ತು ಕತ್ತಿ ಅವರ ಮಧ್ಯೆ ಸುಮಾರು ೨ ದಶಕದ ಒಡನಾಟವೂ ಎಂದೂ ಮರೆಯದ ಘಟನೆ ಎಂದೂ ಅವರು ತಿಳಿಸಿದ್ದಾರೆ. ಉತ್ತಮ ಹೃದಯವಂತಿಕೆಯ ವ್ಯಕ್ತಿತ್ವ. …

Read More »

ಸೆ. 18 ರಂದು ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ, ಉಪ್ಪಾರ ಯುವ ಸಮಾವೇಶ

  ಮೂಡಲಗಿ: ರಾಜ್ಯದಲ್ಲಿ 70 ರಿಂದ 80 ಲಕ್ಷ ಜನಸಂಖ್ಯೆ ಹೊಂದಿದ್ದರೂ 40 ವರ್ಷದಿಂದ ಉಪ್ಪಾರ ಸಮಾಜವನ್ನು ಗುರುತಿಸಿ ಗೌರವ ಸ್ಥಾನಮಾನ ಅಥವಾ ರಾಜಕೀಯ ಸ್ಥಾನಮಾನ ನೀಡುವಂತಹ ಕೆಲಸ ನಮ್ಮ ರಾಜ್ಯದಲ್ಲಿ ಯಾವುದೇ ಪಕ್ಷದಿಂದ ಅಥವಾ ಸರ್ಕಾರದಿಂದ ಆಗಿಲ್ಲ ಎಂದು ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ ವಿಷ್ಣು ಲಾತೂರ ಹೇಳಿದರು. ಅವರು ಮಂಗಳವಾರ ಪ್ರೆಸ್ ಕ್ಲಬ್ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾವು ಸರ್ಕಾರದ ಗಮನ …

Read More »

ಅಕ್ಟೋಬರ್ ತಿಂಗಳಾಂತ್ಯಕ್ಕೆ ಸಬ್ ರಜಿಸ್ಟ್ರಾರ್ ಕಛೇರಿ ಕಾರ್ಯಾರಂಭ : ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ

ಮೂಡಲಗಿ : ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಸಬ್ ರಜಿಸ್ಟ್ರಾರ್ ಕಛೇರಿಯು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಮೂಡಲಗಿಯಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಹೇಳಿದರು. ಮಂಗಳವಾರದಂದು ಸಬ್ ರಜಿಸ್ಟ್ರಾರ್ ಕಛೇರಿಗೆ ಮೂಡಲಗಿ ತಹಶೀಲ್ದಾರ ಡಿ.ಜಿ. ಮಹಾತ್ ಮತ್ತು ಮೂಡಲಗಿ ಸಬ್ ರಜಿಸ್ಟ್ರಾರ್ ಹರಿಯಪ್ಪ ನಾಯಿಕ ಅವರೊಂದಿಗೆ ಭೇಟಿ ನೀಡಿದ ಅವರು, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ …

Read More »

ಮಹಾಲಕ್ಷ್ಮಿ ಸೊಸಾಯಿಟಿಗೆ 3.6 ಕೋಟಿ ಲಾಭ – ಅದ್ಯಕ್ಷ ಗಾಣಿಗೇರ

ಮಹಾಲಕ್ಷ್ಮಿ ಸೊಸಾಯಿಟಿಗೆ 3.6 ಕೋಟಿ ಲಾಭ – ಅದ್ಯಕ್ಷ ಗಾಣಿಗೇರ ಮೂಡಲಗಿ – ಆರ್ಥಿಕವಾಗಿ ಸಹಕಾರಿ ರಂಗದಲ್ಲಿ ಮಹಾಲಕ್ಷ್ಮಿ ಅರ್ಬನ್ ಸೊಸಾಯಿಟಿಯು ಗ್ರಾಹಕರಿಗೆ ವಿಷೇಶ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ ಎಂದು ಅಧ್ಯಕ್ಷ ಮಲ್ಲಪ್ಪಾ ಗಾಣಿಗೇರ ಹೇಳಿದರು. ಅವರು ಶನಿವಾರ ಜರುಗಿದ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ೩೦ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯ ಶೇರುದಾರರ ಠೇವಣಿದಾರರ ಕಾಳಜಿಯ ಪರಿಣಾಮ ಇಷ್ಟು …

Read More »

ಶ್ರೀ ಸಿದ್ಧಾರೂಢ ಮಠದ 50ನೇ ವೇದಾಂತ ಪರಿಷತ್ತಿನ ಸುವರ್ಣ ಮಹೋತ್ಸವ ಸಮಾರಂಭ

ಗುರುವಿನ ಕೃಪೆಗಾಗಿ ಅಂತರಂಗ ಶುದ್ಧಿ ಇರಬೇಕು ಮೂಡಲಗಿ: ‘ಅಂತರಂಗವನ್ನು ಶುದ್ದವಾಗಿರಿಸಿಕೊಂಡು ಗುರುವಿನ ಜ್ಞಾನದ ಮಾರ್ಗದಲ್ಲಿ ಸಾಗಿದರೆ ಮಾತ್ರ ದೈವಿ ಕೃಪೆಯಾಗುವುದು’ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಕಲ್ಲೋಳಿಯ ಶ್ರೀ ಸಿದ್ಧಾರೂಢ ಮಠದ 50ನೇ ವೇದಾಂತ ಪರಿಷತ್ತಿನ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು ಮನಸ್ಸು ಸ್ವಚ್ಛವಾಗಿರಬೇಕು ಎಂದರು. ಜಗತ್ತಿನಲ್ಲಿ ಹೊರ ಕಾಣುವ ಲೌಕಿಕ ಸಂಗತಿಗಳನ್ನು ಪ್ರಾಪ್ತಗೊಳಿಸಿಕೊಳ್ಳುವುದು ಸುಲಭವಾಗಿದೆ. ಆದರೆ …

Read More »

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸ್ವಂತ ದುಡ್ಡಿನಲ್ಲಿ ಒಂದು ಕಿ.ಮೀ. ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ *ಒಳ್ಳೆಯ ಸತ್ಕಾರ್ಯ ಮಾಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಎಲ್ಲರೂ ಗೌರವಿಸೋಣ : ಹನಮಂತ ಗುಡ್ಲಮನಿ

ಮೂಡಲಗಿ : ಕಳೆದೊಂದು ವಾರದಿಂದ ಸಾರ್ವಜನಿಕರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ, ಮೂಡಲಗಿ ಪಟ್ಟಣದ ರಸ್ತೆ ಸುಧಾರಣಾ ಕಾಮಗಾರಿಗೆ ಸೋಮವಾರದಂದು ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಪಟ್ಟಣದ ಅಂಬೇಡ್ಕರ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತದವರೆಗಿನ 1 ಕಿ.ಮೀ ರಸ್ತೆ ಸುಧಾರಣಾ ಕಾಮಗಾರಿ ಮಾಡುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕೊನೆಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು …

Read More »

ಜಾರಕಿಹೊಳಿ ಕುಟುಂಬ ಅರಭಾವಿ ಕ್ಷೇತ್ರದ ಜನರ ರಕ್ಷಣೆ ಮಾಡುತ್ತಿದ್ದಾರೆ : ವಿನಯ ಗುರೂಜಿ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಅರಭಾವಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು : ಲಖನ್ ಜಾರಕಿಹೊಳಿ

ಮೂಡಲಗಿ: ಜಾರಕಿಹೊಳಿ ಕುಟುಂಬ ಪಂಚಪಾoಡವರು ಇದ್ದಂತೆ ಅರಭಾವಿ ಕ್ಷೇತ್ರದ ಜನರ ರಕ್ಷಣೆ ಮಾಡುತ್ತಿದ್ದು, ಜನರು ಸಹ ಜಾರಕಿಹೊಳಿ ಕುಟಂಬದ ಮೇಲೆ ಅಪಾರವಾದ ಗೌರವ ಪ್ರೀತಿ ಇಟ್ಟುಕೊಂಡಿದ್ದಾರೆ ಎಂದು ಸ್ವರ್ಣಪೀಠಾಪುರ ದತ್ತಾಶ್ರಮದ ಅವಧೂತ ಶ್ರೀ ವಿನಯ ಗುರೂಜಿ ಹೇಳಿದರು. ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ರವಿವಾರದಂದು ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಮಠದ 40ನೇ ವರ್ಷದ ಶ್ರಾವಣ ಮಾಸದ ಪುರಾಣ ಮಹಾಮಂಗಲೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ …

Read More »

ಆ.29 ರಂದು ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೂತನ ಕಟ್ಟಡ ಉದ್ಘಾಟನೆ

  ಆ.29 ರಂದು ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೂತನ ಕಟ್ಟಡ ಉದ್ಘಾಟನೆ ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ 109 ವರ್ಷಗಳ ಪೂರೈಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಆ.29 ರಂದು ಸೋಮವಾರದಂದು ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಜರುಗಲಿದೆ ಎಂದು ಸಂಘದ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಬಸವರಾಜ ಕಪ್ಪಲಗುದ್ದಿ ಹೇಳಿದರು. ಅವರು ಶನಿವಾರದಂದು ಕಲ್ಲೋಳಿ ಪಟ್ಟಣದ ಸಂಘದ …

Read More »

ಬೆಟಗೇರಿಯಲ್ಲಿ ಆ.29ರಿಂದ 38ನೇ ಸತ್ಸಂಗ ಸಮ್ಮೇಳನ

  ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ 38ನೇ ಸತ್ಸಂಗ ಸಮ್ಮೇಳನ ಇದೇ ಸೋಮವಾರ ಆ.29 ರಿಂದ ಸೆ.2 ತನಕÀ ನಡೆಯಲಿದ್ದು, ಇಲ್ಲಿಯ ಈಶ್ವರ ದೇವರ ದೇವಸ್ಥಾನದಲ್ಲಿರುವ ಈಶ್ವರ ದೇವರ ಗದ್ದುಗೆ ಐದು ದಿನ ಮುಂಜಾನೆ 6 ಗಂಟೆಗೆ ಮಹಾಪೂಜೆ, ನೈವೇದ್ಯ ಸಮರ್ಪನೆ ಜರುಗಲಿದೆ. ಆ.29ರಂದು ಸ್ಥಳೀಯ ಶ್ರೀ ಗಜಾನನ ವೇದಿಕೆ ಮೇಲೆ ಸಾಯಂಕಾಲ 7:30ಗಂಟೆಗೆ ಚಿಕ್ಕಮುನವಳ್ಳಿ ಶಿವಪುತ್ರ ಸ್ವಾಮಿಜಿ, ತುಂಗಳದ ಮಾತೋಶ್ರೀ ಅನುಸೂಯಾ ತಾಯಿಯವರು, …

Read More »

ಶ್ರೀ ಮಹಾಲಕ್ಷ್ಮೀ ಸೊಸಾಯಿಟಿ ಮೂಡಲಗಿ ವಾರ್ಷಿಕ ಮಹಾಸಭೆ

  ಮೂಡಲಗಿ:   ಶ್ರೀ ಮಹಾಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೇ ಸೊಸಾಯಿಟಿ ಲಿ.,ಮೂಡಲಗಿ ಇದರ 30 ನೇ ವಾರ್ಷಿಕ ಮಹಾಸಭೆಯು ದಿನಾಂಕ 03/09/2022 ರಂದು ಪ್ರಧಾನ ಕಛೇರಿ ಮೂಡಲಗಿ ಸಭಾಭವನದಲ್ಲಿ ಶನಿವಾರ  ಮುಂಜಾನೆ 10-00 ಕ್ಕೆ ಮಲಪ್ಪ. ಗು.ಗಾಣಿಗೇರ ಇವರ ಅಧ್ಯಕ್ಷತೆಯಲ್ಲಿ ಜರುಗಲಿದ್ದು ಸಂಘದ ಎಲ್ಲ ಸದಸ್ಯರು ಸದರೀ ಸಭೆಗೆ ಹಾಜರಾಗಿ ಸಭೆಯನ್ನು ಯಶಸ್ವಿಗೊಳಿಸಲು ಸಂಘದ ಪ್ರಧಾನಕಾರ್ಯದರ್ಶಿ ಸಿ.ಎಸ್.ಬಗನಾಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More »