ಮೂಡಲಗಿ: ವಿಧಾನಸಭಾ ಸ್ಪೀಕರ್ ಅವರು ಬಿಜೆಪಿ ಶಾಸಕರನ್ನು ಅಮಾನತು ಮಾಡಿ ರಾಜ್ಯ ಸರಕಾರದ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ. 18 ಬಿಜೆಪಿಯ ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸುವ ಕುರಿತು ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿದ್ದಾರೆ ಇದು ಸರ್ವಾಧಿಕಾರಿ ಧೋರಣೆ ತೋರುತ್ತದೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಸಭಾಧ್ಯಕ್ಷರ ನಡೆಯನ್ನು ವಿರೋಧಿಸಿದರು. ರವಿವಾರ ಮಾ-23 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ …
Read More »ಬಯಲಾಟ ಕಲಾ ಪ್ರದರ್ಶನಕ್ಕೆ ಸಾಮಾಜಿಕ ಆದ್ಯತೆ ದೊರೆಯಬೇಕು ಬಯಲಾಟಗಳು ನಾಡಿನ ಶ್ರೀಮಂತ ಕಲೆಗಳಾಗಿವೆ -ಪ್ರೊ. ಕೆ.ಆರ್.ದುರ್ಗಾದಾಸ್
ಮೂಡಲಗಿ ತಾಲೂಕಿನ ಅರಭಾವಿ ಗ್ರಾಮದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿಯ ವತಿಯಿಂದ ಜರುಗಿದ ದೊಡ್ಡಾಟ-ಸಣ್ಣಾಟ ಸಂಭ್ರಮ ಸಮಾರಂಭವನ್ನು ಜಾನಪದ ಚಿಂತಕ ಡಾ. ಗುರುಪಾದ ಮರೆಗುದ್ದಿ ಉದ್ಘಾಟಿಸಿದರು. ಬಯಲಾಟ ಕಲಾ ಪ್ರದರ್ಶನಕ್ಕೆ ಸಾಮಾಜಿಕ ಆದ್ಯತೆ ದೊರೆಯಬೇಕು ಬಯಲಾಟಗಳು ನಾಡಿನ ಶ್ರೀಮಂತ ಕಲೆಗಳಾಗಿವೆ -ಪ್ರೊ. ಕೆ.ಆರ್.ದುರ್ಗಾದಾಸ್ ಮೂಡಲಗಿ: ಬಯಲಾಟವು ಮನರಂಜನೆಯೊಂದಿಗೆ ಬದುಕಿನ ವಿವೇಕ, ನೈತಿಕತೆ, ಸೌಹಾರ್ದ ಮನೋಭಾವ, ಕೂಡುಬಾಳ್ವೆ ಮುಂತಾದ ಮೌಲ್ಯಗಳನ್ನು ಪ್ರಸಾರ ಮಾಡುತ್ತ ಬಂದಿದ್ದು, ಗ್ರಾಮೀಣ ಪ್ರದೇಶದ ಎಲ್ಲಾ ಜಾತಿ-ಧರ್ಮಗಳ ಜನ …
Read More »ಮಕ್ಕಳನ್ನು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಮಾಡುವುದು ಮಹಿಳೆಯರ ಪಾತ್ರ ಮುಖ್ಯ – ನ್ಯಾಯಾಧೀಶೆ ಜ್ಯೋತಿ ಪಾಟೀಲ
*ಮಹಿಳಾ ದಿನಾಚರಣೆ ಮತ್ತು ಕಿತ್ತೂರ ರಾಣಿ ಚನ್ನಮ್ಮ ಜಿಲ್ಲಾ ಯುವ ಪ್ರಶಸ್ತಿ ಪ್ರಧಾನ* *ಮಕ್ಕಳನ್ನು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಮಾಡುವುದು ಮಹಿಳೆಯರ ಪಾತ್ರ ಮುಖ್ಯ – ನ್ಯಾಯಾಧೀಶೆ ಜ್ಯೋತಿ ಪಾಟೀಲ* ಮೂಡಲಗಿ: ಇಂದಿನ ತಂತ್ರಜ್ಞಾನ ಯುಗದಲ್ಲಿ ಮಹಿಳೆಯು ಎಲ್ಲ ರಂಗದಲ್ಲಿ ತಮ್ಮ ತಾವು ಗುರುತಿಸಿಕೊಂಡಿದ್ದು, ಪ್ರತಿಯೋಬ್ಬರು ಕನಿಷ್ಠ ಕಾನೂನಿನ ಜ್ಞಾನವನ್ನು ತಿಳಿದುಕೊಂಡು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಮಾಡುವುದು ತಮ್ಮೆಲ್ಲರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಮೂಡಲಗಿ …
Read More »ಧಾರವಾಡವರೆಗಿನ ವಂದೇ ಭಾರತ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸುವ ದಿನಾಂಕ ಆದಷ್ಟು ಬೇಗ ಘೋಷಿಸಿ- ಸಂಸದ ಈರಣ್ಣ ಕಡಾಡಿ
ಬೆಳಗಾವಿ: ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಭೇಟಿಯಾಗಿ ಧಾರವಾಡವರೆಗಿನ ವಂದೇ ಭಾರತ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸುವ ದಿನಾಂಕವನ್ನು ಆದಷ್ಟು ಬೇಗ ಘೋಷಿಸುವುದು ಮತ್ತು ಬೆಳಗಾವಿ ಮಿರಜ್ ನಡುವೆ ಮೆಮೊ ರೈಲು ಸಂಚಾರ ಪ್ರಾರಂಭಿಸುವುದು ಹಾಗೂ ಮುಂಬೈ-ಹೊಸಪೇಟೆ (ರೈಲು ಸಂಖ್ಯೆ 111139/40) ಮತ್ತು ಸೊಲ್ಹಾಪುರ-ಹೊಸಪೇಟೆ (ರೈಲು ನಂ .11415/16) ವರೆಗೆ ಇರುವ ಈ ರೈಲುಗಳನ್ನು ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ವಿಸ್ತರಿಸುವಂತೆ …
Read More »ಹೆಚ್ಚುತ್ತಿರುವ ನಕಲಿ ಚಿಕಿತ್ಸಾ ಪ್ರಕರಣಗಳ ಕುರಿತು ಸರ್ಕಾರದ ಗಮನ ಸೆಳೆದ- ರಾಜ್ಯಸಭಾ ಸಂಸದ ಈರಣ್ಣ ಕಡಾಡಿ
ಮೂಡಲಗಿ: ನಕಲಿ ವೈದ್ಯರು ಮತ್ತು ತರಬೇತಿ ಪಡೆಯದ ವೈದ್ಯಕೀಯ ವೃತ್ತಿಪರರು ಯಾವುದೇ ಅರ್ಹತೆ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಕಾರಣ ಅವರ ಜೀವಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತಿದ್ದಾರೆ. ಸಮಸ್ಯೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಅನಧಿಕೃತ ವೈದ್ಯರು ಮತ್ತು ಚಿಕಿತ್ಸಾಲಯಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು, ನಕಲಿ ಶಸ್ತ್ರಚಿಕಿತ್ಸೆಗಳನ್ನು ತಡೆಗಟ್ಟಲು ಆಸ್ಪತ್ರೆಗೆ ನಿಯಮಿತ ಲೆಕ್ಕಪರಿಶೋಧನೆಯನ್ನು ಕಡ್ಡಾಯಗೊಳಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಆಗ್ರಹಿಸಿದರು. ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದ ಶೂನ್ಯ …
Read More »ಶಾಲಾ ಆಸ್ತಿಯನ್ನು ಹಾಳು ಮಾಡಿದರೆ ಕಠಿಣ ಕ್ರಮ : ಪಿಎಸ್.ಐ. ಮುರನಾಳ
ಶಾಲಾ ಆಸ್ತಿಯನ್ನು ಹಾಳು ಮಾಡಿದರೆ ಕಠಿಣ ಕ್ರಮ : ಪಿಎಸ್.ಐ. ಮುರನಾಳ ಮೂಡಲಗಿ 17: ಸಾರ್ವಜನಿಕ ಆಸ್ತ ಪಾಸ್ತಿಗಳನ್ನು ಅದರಲ್ಲೂ ಶಾಲಾ ಕಾಲೇಜುಗಳ ಆಸ್ತಿಯನ್ನು ಹಾಳು ಮಾಡಿದರೆ ಅಂತವರ ಮೇಲೆ ಕಾನೂನು ಕ್ರಮ ಕೈಕೊಳ್ಳಲಾಗುವದು ಎಂದು ಘಟಪ್ರಭಾ ಪೋಲಿಸ್ ಸ್ಟೇಷನ್ ಸಬ್‍ಇನ್ಸಪೆಕ್ಟರ್ ಎಮ್.ವಿ. ಮುರನಾಳ ಹೇಳಿದರು. ಅವರು ತುಕ್ಕಾನಟ್ಟಿಯ ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆÉದ ವಾರದ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಶಾಲಾ ಅವಧಿಯಲ್ಲಿ ಹಾಗೂ …
Read More »ಬೆಟಗೇರಿಯಲ್ಲಿ ಸಂಭ್ರಮದಿಂದ ನಡೆದ ಬಣ್ಣದಾಟ
ಬೆಟಗೇರಿಯಲ್ಲಿ ಸಂಭ್ರಮದಿಂದ ನಡೆದ ಬಣ್ಣದಾಟ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಕಾಮಣ್ಣನ ದಹನ ಹಾಗೂ ಬಣ್ಣದಾಟ ದಿನವಾದ ಮಾರ್ಚ.15ರಂದು ರಂಗು ರಂಗಿನ ಬಣ್ಣದೊಕುಳಿ ಸಡಗರ, ಸಂಭ್ರಮದಿಂದ ನಡೆಯಿತು. ಬೆಳಗ್ಗೆ 6 ಗಂಟೆಗೆ ಸಂಪ್ರದಾಯದಂತೆ ಗ್ರಾಮದ ಹಿರಿಯರು ಗ್ರಾಮದ ದಲಿತ ಕೇರಿಯ ಕಾಮಣ್ಣನ ದಹನಕ್ಕೆ ಚಾಲನೆ ನೀಡಿದ ಬಳಿಕ ಸ್ಥಳೀಯ ಮಾರುಕಟ್ಟೆ ಆವರಣದಲ್ಲಿ ಬೆರಣಿ, ಕಟ್ಟಿಗೆ ಸಂಗ್ರಹಿಸಿದನ್ನು ಒಟ್ಟಿಗೆ ಸೇರಿಸಿ ಕಾಮ ದಹನಕ್ಕೆ ಪ್ರತಿಷ್ಠಾಪಿಸಲ್ಪಟ್ಟ ಕಾಮಣ್ಣನ ದಹನ …
Read More »ಅರಳಿಮಟ್ಟಿ ಸರಕಾರಿ ಪ್ರಾಥಮಿಕ ಶಾಲೆ ಈಗ ಪಿಎಂ ಶ್ರೀ ಯೋಜನೆಗೆ- ಶಾಸಕ ಬಾಲಚಂದ್ರ ಜಾರಕಿಹೊಳಿ
ಅರಳಿಮಟ್ಟಿ ಸರಕಾರಿ ಪ್ರಾಥಮಿಕ ಶಾಲೆ ಈಗ ಪಿಎಂ ಶ್ರೀ ಯೋಜನೆಗೆ- ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ- ಮೂಡಲಗಿ ಶೈಕ್ಷಣಿಕ ವಲಯಕ್ಕೆ ಮತ್ತೊಂದು ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಶಾಲೆಯು ಆಯ್ಕೆಯಾಗಿದ್ದು, ತಾಲ್ಲೂಕಿನ ಅರಳಿಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೇಂದ್ರ ಪುರಸ್ಕೃತ ಪಿಎಂಶ್ರೀ ಶಾಲೆಯನ್ನಾಗಿ ಪರಿವರ್ತನೆಗೊಳ್ಳಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. ದೇಶದಲ್ಲಿನ ಗ್ರಾಮೀಣ ಪ್ರದೇಶದ ಶಾಲೆಗಳನ್ನು ಕೇಂದ್ರೀಯ ಶಾಲೆಗಳ ರೀತಿಯಲ್ಲಿ ಸ್ಥಾಪಿಸಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ …
Read More »ಹೆಲ್ಮೆಟ್ ಧರಿಸದೆ ಬೈಕ್ ಮುಟ್ಟಬೇಡಿ ಪಿ.ಎಸ್ ಐ ಆನಂದ ಬಿ.
ಹೆಲ್ಮೆಟ್ ಧರಿಸದೆ ಬೈಕ್ ಮುಟ್ಟಬೇಡಿ ಪಿ.ಎಸ್ ಐ ಆನಂದ ಬಿ. ಕುಲಗೋಡ: ಜೀವ ಅಮುಲ್ಯ ನಿರ್ಲಕ್ಷತನಕ್ಕೆ ಜೀವ ಬಲಿಕೊಡಬೇಡಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸದೆ ಬೈಕ್ ಮುಟ್ಟಬೇಡಿ.. ಮನೆಯಿಂದಲೇ ಹೆಲ್ಮೆಟ್ ಹಾಕಿಕೊಳ್ಳು ಪರಿಪಾಠ ಇಟ್ಟುಕೊಳ್ಳಿ ಎಂದು ಕುಲಗೋಡ ಪಿ.ಎಸ್.ಐ ಆನಂದ ಬಿ ಹೇಳಿದರು. ಇವರು ಮೂಡಲಗಿ ತಾಲೂಕಿನ ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ರಸ್ತೆ ಸಂಚಾರ ಸುರಕ್ಷತೆ ಹಾಗೂ ಹೆಲ್ಮೆಟ್ ಜಾಗೃತಿ ಅಭಿಯಾನ ಚಾಲನೆ ನೀಡಿ ಮಾತನಾಡಿ ಕಳೆದ ವರ್ಷ …
Read More »ಕ್ರೀಡೆಯಲ್ಲಿ ಗೆಲ್ಲಬೇಕಾರೆ ನಿರಂತರ ಪ್ರಯತ್ನ ಮಾಡಬೇಕು- ಸಿಪಿಐ ಶ್ರೀಶೈಲ ಬ್ಯಾಕೂಡ
ತಾಲೂಕಾ ಮಟ್ಟದ ಕ್ರೀಡಾಕೂಟ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ ಕ್ರೀಡೆಯಲ್ಲಿ ಗೆಲ್ಲಬೇಕಾರೆ ನಿರಂತರ ಪ್ರಯತ್ನ ಮಾಡಬೇಕು- ಸಿಪಿಐ ಶ್ರೀಶೈಲ ಬ್ಯಾಕೂಡ ಮೂಡಲಗಿ : ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಗೆಲ್ಲಬೇಕಾದರೆ ನಿರಂತರ ಪ್ರಯತ್ನ ಹಾಗೂ ಪರಿಶ್ರಮ ಬಹಳ ಮುಖ್ಯವಾಗಿದೆ ಎಂದು ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ ಹೇಳಿದರು. ಅವರು ಇತ್ತೀಚೆಗೆ ಶ್ರೀ ಎಲ್ ವಾಯ್ ಆಡಿಹೂಡಿ ಶಾಲಾ ಮೈದಾನದಲ್ಲಿ ಭಾರತ ಸರ್ಕಾರದ ನೆಹರು ಯುವ …
Read More »