Breaking News
Home / inmudalgi (page 207)

inmudalgi

1.65 ಲಕ್ಷ ರೂಪಾಯಿಗಳ ಅನುದಾನದಡಿಯಲ್ಲಿ ಡಾ.ಅಂಬೇಡ್ಕರ್ ವೃತ್ತದಲ್ಲಿ ಹೈ ಮಾಸ್ಕ್ ದೀಪ ಅಳವಡಿಕೆ

ಬೆಟಗೇರಿ:ಗ್ರಾಮದ ಗ್ರಾಮ ಪಂಚಾಯತಿ ವತಿಯಿಂದ 2020-21ನೇ ಸಾಲಿನ 15 ನೇ ಹಣಕಾಸಿನ ಯೋಜನೆಯ ಸುಮಾರು 1.65 ಲಕ್ಷ ರೂಪಾಯಿಗಳ ಅನುದಾನದಡಿಯಲ್ಲಿ ಸ್ಥಳೀಯ ಡಾ.ಅಂಬೇಡ್ಕರ್ ವೃತ್ತದಲ್ಲಿ ಹೈ ಮಾಸ್ಕ್ ದೀಪ ಅಳವಡಿಕೆ ಕಾಮಗಾರಿ ಇಚೆಗೆ ನಡೆಯಿತು. ಗ್ರಾಪಂ ಪಿಡಿಒ ಎಚ್.ಎನ್.ಭಾವಿಕಟ್ಟಿ ಮಾತನಾಡಿ, ಗ್ರಾಮದ ಸಮಗ್ರ ಅಭಿವೃದ್ಧಿಗೆ ಗ್ರಾಪಂ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಹಿರಿಯ ನಾಗರಿಕರು ಹಾಗೂ ಸ್ಥಳೀಯರು ನೀಡುತ್ತಿರುವ ಸಹಕಾರ ಶ್ಲಾಘನೀಯವಾಗಿದೆ. ಇಲ್ಲಿಯ ಗ್ರಾಪಂ ಸಹಯೋಗದಲ್ಲಿ ಸ್ಥಳೀಯರಿಗೆ ಅವಶ್ಯಕವಾದ ಮೂಲಭೂತ ಸಹಾಯ, …

Read More »

ಪ್ರಭಾಶುಗರ್‍ಗೆ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ ಕಬ್ಬಿಗೆ 2700 ರೂ. : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಣೆ. ಒಂದೇ ಕಂತಿನಲ್ಲಿ ರೈತರ ಖಾತೆಗಳಿಗೆ ಬಿಲ್ ಪಾವತಿ, ರೈತರ ಸಹಕಾರವೇ ಕಾರ್ಖಾನೆಗೆ ಜೀವಾಳವೆಂದ ಬಾಲಚಂದ್ರ ಜಾರಕಿಹೊಳಿ

ಪ್ರಭಾಶುಗರ್‍ಗೆ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ ಕಬ್ಬಿಗೆ 2700 ರೂ. : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಷಣೆ. ಒಂದೇ ಕಂತಿನಲ್ಲಿ ರೈತರ ಖಾತೆಗಳಿಗೆ ಬಿಲ್ ಪಾವತಿ, ರೈತರ ಸಹಕಾರವೇ ಕಾರ್ಖಾನೆಗೆ ಜೀವಾಳವೆಂದ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಪ್ರಸಕ್ತ ಹಂಗಾಮಿನಲ್ಲಿ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುತ್ತಿರುವ ರೈತರಿಗೆ ಪ್ರತಿ ಟನ್ ಕಬ್ಬಿಗೆ 2700 ರೂ.ಗಳನ್ನು ನೀಡುವುದಾಗಿ ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಕೆಎಂಎಫ್ ಅಧ್ಯಕ್ಷ, ಶಾಸಕ …

Read More »

ಹುಟ್ಟು ಹಬ್ಬದ ಪ್ರಯುಕ್ತವಾಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ .

ಮೂಡಲಗಿ : ತಾಲೂಕಿನ ಹಳ್ಳೂರ ಗ್ರಾಮದ ಬಿಜೆಪಿ ಮುಖಂಡ ಹಾಗೂ ಪಿಕೆಪಿಎಸ್ ಸದಸ್ಯ ಹಣಮಂತ ತೇರದಾಳ ಅವರ 48ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತವಾಗಿ ಮೂಡಲಗಿ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಹಿರಿಯ ಮುಖಂಡ ಬಸಪ್ಪ ಸಂತಿ, ಮಾಜಿ ಗ್ರಾಪಂ ಅಧ್ಯಕ್ಷ ಬಸಪ್ಪ ಹಡಪದ, ಪುರಸಭೆ ಸದಸ್ಯ ಶಿವು ಚಂಡಕಿ, ಗ್ರಾಪಂ ಸದಸ್ಯ ಮಲ್ಲಪ್ಪ ಛಬ್ಬಿ, ಬಾಳೇಶ ನೇಸೂರ, …

Read More »

ಚನ್ನಮ್ಮಳು ಕನ್ನಡ ನಾಡಿನ ಹೆಮ್ಮೆ- ಮಂಜುಳಾ ಹಿರೇಮಠ

ಚನ್ನಮ್ಮಳು ಕನ್ನಡ ನಾಡಿನ ಹೆಮ್ಮೆ ಮೂಡಲಗಿ: ಕಿತ್ತೂರ ಚನ್ನಮ್ಮಳ ಶೌರ್ಯ, ಸಾಹಸ ಹಾಗೂ ದೇಶಾಭಿಮಾನವು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ’ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ ಹಿರೇಮಠ ಹೇಳಿದರು. ತಾಲ್ಲೂಕಿನ ಕಲ್ಲೋಳಿಯ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಶನಿವಾರ ಆಚರಿಸಿದ ರಾಣಿ ಕಿತ್ತೂರ ಚನ್ನಮ್ಮಳ ಜಯಂತ್ಯುತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚನ್ನಮ್ಮಳು ಕನ್ನಡ ನಾಡಿನ ಹೆಮ್ಮೆ ಎಂದರು. ರಾಣಿ ಚನ್ನಮ್ಮಳ ತ್ಯಾಗ, ಬಲಿದಾನ ಮತ್ತು ದೇಶಭಕ್ತಿಯು ಅನನ್ಯವಾಗಿದೆ. ಚನ್ನಮ್ಮಳ ಜಯಂತಿಯನ್ನು ಆಚರಿಸುವ …

Read More »

ಹೆಣ್ಣು ಮತ್ತು ಗಂಡು ತಾರತಮ್ಯ ಮಾಡದೇ ತಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸಿ- ಶ್ರೀಮತಿ ಉಮಾ ಬಳ್ಳೋಳ್ಳಿ

ಬೆಟಗೇರಿ:ಪ್ರತಿಯೊಬ್ಬ ತಂದೆ-ತಾಯಿಂದಿರು ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಬೇಕು. ಹೆಣ್ಣು ಮತ್ತು ಗಂಡು ತಾರತಮ್ಯ ಮಾಡದೇ ತಮ್ಮ ಮಕ್ಕಳಿಗೆ ಹೆಚ್ಚಿನ ವ್ಯಾಸಂಗದ ಶಿಕ್ಷಣ ಕೊಡಿಸಲು ಪಾಲಕರು ಮುಂದಾಗಬೇಕು. ಯಾರೂ ಕಾನೂನು ಬಾಹಿರ ಚಟುವಟಿಕೆಗಳನ್ನು ಕೈಗೊಳ್ಳಬಾರದು ಎಂದು ಗೋಕಾಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಸಿಡಿಪಿಒ ಶ್ರೀಮತಿ ಉಮಾ ಬಳ್ಳೋಳ್ಳಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಅ.21ರಂದು ನಡೆದ ಗೋಕಾಕ ತಾಲೂಕಾ ಕಾನೂನು ಸೇವೆಗಳ …

Read More »

ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಥಮ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿದ ಕೀರ್ತಿ ವೀರ ರಾಣಿ ಕಿತ್ತೂರ ಚನ್ನಮ್ಮಗೆ ಸಲ್ಲುತ್ತದೆ : ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಮೂಡಲಗಿ: ಸೂರ್ಯ ಮುಳುಗದ ಬ್ರೀಟಿಷ್ ಸಾಮ್ರಾಜ್ಯಕ್ಕೆ ಸವಾಲು ಹಾಕಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಥಮ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿದ ಕೀರ್ತಿ ವೀರ ರಾಣಿ ಕಿತ್ತೂರ ಚನ್ನಮ್ಮಗೆ ಸಲ್ಲುತ್ತದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಶನಿವಾರ ಅ. 23 ರಂದು ಕಲ್ಲೋಳಿ ಪಟ್ಟಣದ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ವೀರ ಸೇನಾನಿ ರಾಣಿ ಕಿತ್ತೂರ ಚನ್ನಮ್ಮ ಅವರ 243ನೇ ಜಯಂತಿ ನಿಮಿತ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದ ಅವರು …

Read More »

ಕೆ.ಎಚ್.ಎಸ್ ಸರಕಾರಿ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆ ಚಾಲನೆ

ಕೆ.ಎಚ್.ಎಸ್ ಸರಕಾರಿ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆ ಚಾಲನೆ ಮೂಡಲಗಿ: ಪ್ರತಿಯೊಂದು ಜೀವಿಗೆ ಸಹಿತ ಬದುಕುವು ಮತ್ತು ಬದುಕಿಗೆ ಆಧಾರವಾಗಿರುವುದೆ ಆಹಾರ, ದೇಶ ಮಕ್ಕಳ ಆರೋಗ್ಯ ಮತ್ತು ಬಧುಕಿನ ಭವಿಷ್ಯನಲ್ಲಿ ನಿಜವಾದ ನಗೆ ಬರುವುದಕ್ಕೆ ಚೇತನ್ಯ ವಸ್ತು ಆಹಾರ, ಬಿಸಿ ಊಟದ ಮಹತ್ವಕಾಂಕ್ಷೆಯ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಚಿಕ್ಕೋಡಿ ಡಯಟ ಪ್ರಾಚಾರ್ಯ ಮೋಹನ ಜೀರಗಾಳ ಹೇಳಿದರು. ಅವರು ಪಟ್ಟಣದ ಕೆ.ಎಚ್.ಸೋನವಾಲ್ಕರ ಸರಕಾರಿ ಪ್ರೌಢ ಶಾಲೆಯಲ್ಲಿ ಸರಕಾರದ ಜಾರಿಗೆ ತಂದಿರುವ ಪ್ರಸಕ್ತ …

Read More »

ಮೋಹ, ಮಮಕಾರಗಳನ್ನು ಕಳೆದುಕೊಂಡ ವ್ಯಕ್ತಿ ನಿಜವಾದ ಜೀವನ ಮುಕ್ತಿ- ಫಕೀರಸಿದ್ಧರಾಮ ಮಹಾಸ್ವಾಮಿಜಿ

ಬೆಟಗೇರಿ:ದೇವಿಯ ಪುರಾಣವೆಂದರೆ ದೇಹದ ಪುರಾಣವಿದ್ದಂತೆ ದೇಹದಲ್ಲಿರುವ ಅವಗುಣಗಳನ್ನು ಕಳೆದುಕೊಳ್ಳುವುದೇ ರಾಕ್ಷಸರ ಸಂವಹಾರವಿದ್ದಂತೆ, ಮೋಹ, ಮಮಕಾರಗಳನ್ನು ಕಳೆದುಕೊಂಡ ವ್ಯಕ್ತಿ ನಿಜವಾದ ಜೀವನ ಮುಕ್ತ ಎಂದು ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ಹೇಳಿದರು. ಸಮೀಪದ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ನವರಾತ್ರಿಯ ಅಂಗವಾಗಿ ಅ.20ರಂದು ನಡೆದ ಶ್ರೀ ದೇವಿ ಪುರಾಣ ಪ್ರವಚನ ಮಂಗಲೋತ್ಸವ, ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮಿಜಿಗಳ ಅನುಷ್ಠಾನ ಮಂಗಲೋತ್ಸವ ಹಾಗೂ ಫಕೀರೇಶ್ವರ ಜಗದ್ಗುರುಗಳ …

Read More »

100 ಕೋಟಿ ಡೋಸ್‌ ಕೋವಿಡ್‌ ಲಸಿಕೆ ನೀಡಿ ದಾಖಲೆ ಬರೆದ ಭಾರತ

100 ಕೋಟಿ ಡೋಸ್‌ ಕೋವಿಡ್‌ ಲಸಿಕೆ ನೀಡಿ ದಾಖಲೆ ಬರೆದ ಭಾರತ. ಮೂಡಲಗಿ:  ಜನ ಮೆಚ್ಚಿದ ಪ್ರದಾನ ಮಂತ್ರಿಗಳು  ನರೇಂದ್ರ ಮೋದಿಯವರಿಗೆ ಧನ್ಯವಾದಗನ್ನು ಬಿಜೆಪಿ ಅರಬಾಂವಿ ಮಂಡಲ ಯುವ ಮೋರ್ಚಾ ವತಿಯಿಂದ ಮೂಡಲಗಿ ಕರುನಾಡು ಸೈನಿಕ ಕೇಂದ್ರದಲ್ಲಿ ಒಂದು ನೂರು ಯುವಕರು ನೂರು ಸಂಖ್ಯೆಯ ಆಕಾರದಲ್ಲಿ ಒಂದೇ ತರದ ಟಿ ಶರ್ಟ್ ಹಾಕಿಕೊಂಡು ವಿಶೇಷವಾಗಿ ಧನ್ಯವಾದ ತಿಳಿಸಿದರು. ಅರಬಾಂವಿ ಮಂಡಲ ಅಧ್ಯಕ್ಷ ಮಹಾದೇವ ಶಕ್ಕಿ ಮಾತನಾಡಿ ಬಿಜೆಪಿ ಯುರ್ವಮೊರ್ಚಾ ಪದಾಧಿಕಾರಿಗಳ …

Read More »

ಅಕ್ಷರ ದಾಸೋಹ ಯೋಜನೆ : ಬಡಮಕ್ಕಳಿಗೆ ವರದಾನ -ಅಶೋಕ ಮಲಬಣ್ಣವರ

ಅಕ್ಷರ ದಾಸೋಹ ಯೋಜನೆ : ಬಡಮಕ್ಕಳಿಗೆ ವರದಾನ -ಅಶೋಕ ಮಲಬಣ್ಣವರ ಮೂಡಲಗಿ: ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಬಾಗಿತ್ವದಲ್ಲಿ ಜಾರಿಗೆ ತಂದಿರುವ ಅಕ್ಷರದಾಸೋಹ ಮತ್ತು ಕ್ಷೀರ ಭಾಗ್ಯ ಯೋಜನೆಗಳು ಬಡಮಕ್ಕಳಿಗೆ ವರದಾನವಾಗಿವೆ ಎಂದು ಗೋಕಾಕ ತಾಲೂಕಾ ಅಕ್ಷರದಾಸೋಹ ಯೋಜನೆ ನಿದೇರ್Àಶಕರಾದ ಅಶೋಕ ಮಲಬಣ್ಣವರ ಹೇಳಿದರು. ಅವರು ತಾಲೂಕಿನ ತುಕ್ಕಾನಟ್ಟಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ವಿತರಸಿ ಮಾತನಾಡಿ. ಕೋವಿಡ್-19ರ ಹಿನ್ನೆಲೆಯಲ್ಲಿ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಅಕ್ಷರದಾಸೋಹ …

Read More »