Breaking News
Home / Recent Posts / ವಿದ್ಯಾರ್ಥಿಗಳಿಗೆ ಅಕ್ಷರಕ್ಕಿಂತ ಸಂಸ್ಕಾರ ಮುಖ್ಯ – ಅಜಿತ ಮನ್ನಿಕೇರಿ

ವಿದ್ಯಾರ್ಥಿಗಳಿಗೆ ಅಕ್ಷರಕ್ಕಿಂತ ಸಂಸ್ಕಾರ ಮುಖ್ಯ – ಅಜಿತ ಮನ್ನಿಕೇರಿ

Spread the love

ವಿದ್ಯಾರ್ಥಿಗಳಿಗೆ ಅಕ್ಷರಕ್ಕಿಂತ ಸಂಸ್ಕಾರ ಮುಖ್ಯ – ಅಜಿತ ಮನ್ನಿಕೇರಿ

ಮೂಡಲಗಿ : ವಿದ್ಯಾರ್ಥಿಗಳು ನಮ್ಮ ನಾಡಿನ ಹಬ್ಬ-ಹರಿದಿನಗಳು, ಸಂಸ್ಕøತಿ, ಸಂಸ್ಕಾರಗಳನ್ನು ಅರಿತುಕೊಂಡು ಅಕ್ಷರಭ್ಯಾಸ ಮಾಡಿದಲ್ಲಿ ಆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಸ್ಕಾರವಂತ ವ್ಯಕ್ತಿಗಳಾಗಿ ಬಾಳುತ್ತಾರೆ. ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.


ಅವರು ತುಕ್ಕಾನಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚಂದ್ರಮಾನ ಯುಗಾದಿ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಅಕ್ಷರ ದಾಸೋಹದ ವಿಶೇಷ ಭೋಜನಕೂಟದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ಶಾಲೆಯ ಶಿಕ್ಷಕರು ನಮ್ಮ ಹಿಂದೂ ಸಂಸ್ಕøತಿಯಂತೆ ಹೊಸ ವರ್ಷವನ್ನು ಯುಗಾದಿ ಹಬ್ಬದ ದಿನ ಆಚರಿಸಿ ವಿದ್ಯಾರ್ಥಿಗಳಿಗೆ ಬೇವು ಬೆಲ್ಲ ನೀಡಿ ಎಲ್ಲಾ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ತಿಂಡಿ ತಿನಿಸುಗಳೊಂದಿಗೆ ವಿಶೇಷ ಭೋಜನವನ್ನು ಏರ್ಪಡಿಸಿದ್ದು ಶ್ಲಾಘನೀಯ ಎಂದರು.
ಇನ್ನೋರ್ವ ಅತಿಥಿ ಗೋಕಾಕ ತಾಲೂಕಾ ಅಕ್ಷರದಾಸೋಹದ ನಿರ್ದೆಶಕರಾದ ಅಶೋಕ ಮಲಬನ್ನವರ ಮಾತನಾಡಿ ಬೇವು ಬೆಲ್ಲದಂತೆ ಜೀವನದಲ್ಲಿ ಕಷ್ಟ ಸುಖ ಸಮಾನವಾಗಿ ಹಂಚಿಕೊಂಡು ಸೌರ್ಹಾದಯುತವಾಗಿ ಬಾಳಬೆಕೆಂಬ ಪರಂಪರೆಯನ್ನು ಸಾರುವ ಈ ಯುಗಾದಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ವಿಶೇಷ ಭೋಜನವನ್ನು ಏರ್ಪಡಿಸಿರುವದು ಮಾದರಿಯಾಗಿದೆ ಎಂದರು. ಈಗಾಗಲೆ ಅಕ್ಷರದಾಸೋಹದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಭೋಜನ ಏರ್ಪಡಿಸುವದರ ಮೂಲಕ ಸರ್ಕಾರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿ ಈ ಸರ್ಕಾರಿ ಶಾಲೆ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸುಮಾರು 700 ವಿದ್ಯಾರ್ಥಿಗಳಿಗೆ ಬೇವು ಬೆಲ್ಲದೊಂದಿಗೆ, ಕುರ್ಮಾ ಪುರಿ, ಬಟಾಟಿ ಬಾಜಿ, ಗುಲಾಬ ಜಾಮೂನ್, ಲಾಡು, ಮಸಾಲೆ ಅನ್ನ, ಮೊಸರನ್ನ, ರಾಗಿ ಅಂಬಲಿ, ಸಾಂಬಾರ ಹೀಗೆ ವಿವಿಧ ಖಾದ್ಯಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮೂಡಲಗಿ ಕೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ, ಗೋಕಾಕ ತಾಲೂಕ ಅಕ್ಷರದಾಸೋಹದ ನಿರ್ದೆಶಕರಾದ ಅಶೋಕ ಮಲಬನ್ನವರ, ತುಕ್ಕಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಕುಮಾರ ಮರ್ದಿ, ಸದಸ್ಯರಾದ ಸುನಂದಾ ಭಜಂತ್ರಿ, ರೈತ ಮುಖಂಡ ಮಂಜು ಗದಾಡಿ ಹಾಗೂ ಪ್ರಧಾನ ಗುರುಗಳಾದ ಎ.ವ್ಹಿ ಗಿರೆಣ್ಣವರ, ಶಿವಾನಂದ ಸೋಮವ್ವಗೋಳ, ಕಲ್ಲೋಳಿ ಸಂಪನ್ಮೂಲ ವ್ಯಕ್ತಿ ಗಣಪತಿ ಉಪ್ಪಾರ ಶಿಕ್ಷಕರಾದ ವಿಮಲಾಕ್ಷಿ ತೋರಗಲ್ಲ, ಕುಸುಮಾ ಚಿಗರಿ, ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ಸಂಗೀತಾ ತಳವಾರ, ಶೀಲಾ ಕುಲಕರ್ಣಿ, ಖಾತೂನ ನದಾಫ, ಶಿವಲೀಲಾ ಹುಲಕುಂದ, ಹೊಳೆಪ್ಪಾ ಗದಾಡಿ, ಶಂಕರ ಲಮಾಣಿ, ಕಿರಣ ಭಜಂತ್ರಿ, ಮಹಾದೇವ ಗೋಮಾಡಿ, ಮಂಜುನಾಥ ಕಮ್ಮಾರ ಉಪಸ್ಥಿತರಿದ್ದರು.


Spread the love

About inmudalgi

Check Also

ವಿದ್ಯಾರ್ಥಿಗಳು ಜ್ಞಾನ ಮತ್ತು ಬುದ್ಧಿಯನ್ನು ಬೆಳಸಿಕೊಳ್ಳಬೇಕು – ಸದಾಶಿವ ಬೆಳಗಲಿ

Spread the love ಮೂಡಲಗಿ : ವಿದ್ಯಾರ್ಥಿಗಳು ಜ್ಞಾನ ಮತ್ತು ಬುದ್ಧಿಯನ್ನು ಬೆಳಸಿಕೊಳ್ಳಬೇಕು ಇಂದು ಸಾಮಾಜಿಕ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ