Breaking News
Home / inmudalgi (page 272)

inmudalgi

ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್,ಮಾಸ್ಕ,ಸ್ಯಾನಿಟೈಜರ ವಿತರಿಸಿದ ಶೃದ್ಧಾ ಅಂಗಡಿ

ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್,ಮಾಸ್ಕ,ಸ್ಯಾನಿಟೈಜರ ವಿತರಿಸಿದ ಶೃದ್ಧಾ ಅಂಗಡಿ ಮೂಡಲಗಿ: .ಪಟ್ಟಣದ ಬಸವೇಶ್ವರ ಸೊಸೈಟಿ ಆವರಣದಲ್ಲಿ ಸಂಸದೆ ಮಂಗಲಾ ಅಂಗಡಿ ಅವರ ಪುತ್ರಿ ಶೃದ್ಧಾ ಅಂಗಡಿ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ಹಾಗೂ ಮಾಸ್ಕ್, ಸ್ಯಾನಿಟೈಜರ್ ವಿತರಿಸಿದರು. ಈ ವೇಳೆಯಲ್ಲಿ ಮಾತನಾಡಿದ ಅವರು, ಕೊರೋನಾ ವಾರಿಯರ್ಸ ಆಶಾ ಕಾರ್ಯಕರ್ತೆಯರು ಕೋವಿಡ್ ಮೊದಲ ಹಾಗೂ ಎರಡನೆ ಅಲೆಯಲ್ಲಿ ತಮ್ಮ ಜೀವದ ಹಂಗು ತೊರೆದು ಸಾಕಷ್ಟು ಜನ ಜಾಗೃತಿ ಮೂಡಿಸುವ ಮೂಲಕ ಸಾಕಷ್ಟು …

Read More »

ಮೂಡಲಗಿ-ಧರ್ಮಟ್ಟಿ-ಮಸಗುಪ್ಪಿ ರಸ್ತೆ ಸುಧಾರಣೆಗೆ 7.86 ಕೋಟಿ ರೂ, ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ ಲೋಳಸೂರ-ಬಳೋಬಾಳ ರಸ್ತೆ ಕಾಮಗಾರಿ ತಿಂಗಳೊಳಗೆ ಪೂರ್ಣ ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ

ಮೂಡಲಗಿ-ಧರ್ಮಟ್ಟಿ-ಮಸಗುಪ್ಪಿ ರಸ್ತೆ ಸುಧಾರಣೆಗೆ 7.86 ಕೋಟಿ ರೂ, ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ ಲೋಳಸೂರ-ಬಳೋಬಾಳ ರಸ್ತೆ ಕಾಮಗಾರಿ ತಿಂಗಳೊಳಗೆ ಪೂರ್ಣ ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ಮೂಡಲಗಿ: ಸುಗಮ ಸಂಚಾರಕ್ಕಾಗಿ ಮೂಡಲಗಿಯಿಂದ ಧರ್ಮಟ್ಟಿ ಮಾರ್ಗವಾಗಿ ಮಸಗುಪ್ಪಿ ರಸ್ತೆ ಸುಧಾರಣೆಗೆ ಪಿ.ಎಂ.ಜಿ.ಎಸ್.ವಾಯ್ ಯೋಜನೆಯಡಿ 7.86 ಕೋಟಿ ರೂಪಾಯಿ ಮೊತ್ತ ಬಿಡುಗಡೆಯಾಗಿದ್ದು, ಎರಡು ತಿಂಗಳೊಳಗೆ ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿಯನ್ನು ಕೈಗೊಳ್ಳುವಂತೆ ಶಾಸಕ ಹಾಗೂ …

Read More »

ಶ್ರೀ ದುರ್ಗಾದೇವಿ ಪೂರ್ವ ದೇವಾಲಯದ ನೂತನ ಗರ್ಭಗುಡಿ ಕಟ್ಟಡ ನಿರ್ಮಾಣ

ಬೆಟಗೇರಿ:ನಮ್ಮ ದೇಶದ ಸಂಸ್ಕøತಿ, ಸಂಪ್ರದಾಯ ಅತ್ಯಂತ ಶ್ರೇಷ್ಠವಾಗಿದೆ. ನಮ್ಮ ಜನರು ದೇವರ ಮೇಲೆ ಅಪಾರ ನಂಬಿಯುಳ್ಳವರಾಗಿದ್ದಾರೆ. ದುರ್ಗಾಮಾತೆ ದೇವರು ಇಷ್ಟಾರ್ಥಗಳನ್ನು ಪೂರೈಸುವ ಆರಾಧ್ಯ ದೇವತೆಯಾಗಿದ್ದಾಳೆ ಎಂದು ಸುಣಧೋಳಿ ಜಡಿಸಿದ್ದೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ಹೇಳಿದರು. ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ಪೂರ್ವ ದೇವಾಲಯದ ನೂತನ ಗರ್ಭಗುಡಿ ಕಟ್ಟಡ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮ ಮಂಗಳವಾರ ಜೂ.15ರಂದು ನೆರವೇರಿಸಿ ಮಾತನಾಡಿ, ಧಾರ್ಮಿಕ ಕಾರ್ಯಗಳಿಗೆ ಸ್ಥಳೀಯರು ನೀಡುವ ಸಹಾಯ, ಸಹಕಾರ ಶ್ಲಾಘನೀಯವಾಗಿದೆ …

Read More »

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ ಕೋವಿಡ್ ವಾರಿಯರ್ಸ್‍ಗಳಿಗೆ ಕೃತಜ್ಞತೆ ಸಲ್ಲಿಸಿದ ಬಾಲಚಂದ್ರ ಜಾರಕಿಹೊಳಿ ಮೂಡಲಗಿಯಲ್ಲಿಂದು ಜರುಗಿದ ಟಾಸ್ಕ್‍ಪೋರ್ಸ ಸಭೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಭಾಗಿಯಾದ ಸಂಸದ ಕಡಾಡಿ ಹಾಗೂ ಎಮ್‍ಎಲ್‍ಸಿ ಕವಟಗಿಮಠ

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ ಕೋವಿಡ್ ವಾರಿಯರ್ಸ್‍ಗಳಿಗೆ ಕೃತಜ್ಞತೆ ಸಲ್ಲಿಸಿದ ಬಾಲಚಂದ್ರ ಜಾರಕಿಹೊಳಿ ಮೂಡಲಗಿಯಲ್ಲಿಂದು ಜರುಗಿದ ಟಾಸ್ಕ್‍ಪೋರ್ಸ ಸಭೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಭಾಗಿಯಾದ ಸಂಸದ ಕಡಾಡಿ ಹಾಗೂ ಎಮ್‍ಎಲ್‍ಸಿ ಕವಟಗಿಮಠ. ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‍ಗಳ ಕಾರ್ಯ …

Read More »

ಬೆಟಗೇರಿ ಸುತ್ತಮುತ್ತ ಸುರಿದ ಮಳೆ : ರೈತರಲ್ಲಿ ಹರ್ಷ

ಬೆಟಗೇರಿ ಸುತ್ತಮುತ್ತ ಸುರಿದ ಮಳೆ : ರೈತರಲ್ಲಿ ಹರ್ಷ ಬೆಟಗೇರಿ: ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಸೋಮವಾರ ಜೂನ್.14 ರಂದು ಮಧ್ಯಾಹ್ನ 2 ಗಂಟೆಗೆ ಸುಮಾರು ಎರಡು ಗಂಟೆಗಳ ಕಾಲ ಮಳೆ ಸುರಿದು ಭೂಮಿ ತಂಪಾಗಿಸಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಪ್ರಸಕ್ತ ವರ್ಷ ಮುಂಗಾರು ಮಳೆ ಸಂಪೂರ್ಣ ಆಗದೇ ಇದ್ದುದರಿಂದ ಬೆಟಗೇರಿ ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ದಿನ ಬೆಳಗಾದರೆ ಮಳೆಯ ನಿರೀಕ್ಷೆಯಲ್ಲಿ ಹಗಲಿರುಳು ಕಾಲ ಕಳೆಯುತ್ತಿದ್ದ ರೈತರು …

Read More »

ಪತ್ರಕರ್ತರಿಗೆ ಆಹಾರ ಕಿಟ್, ಸ್ಯಾನಿಟೈಜರ, ಮಾಸ್ಕ್ ವಿತರಣೆ ಜಾಗೃತಿ ಮೂಡಿಸುವಂತ ಕಾರ್ಯದಲ್ಲಿ ಪತ್ರಕರ್ತರು ಸದಾ ಸಿದ್ದ | ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಕಾರ್ಯ ಶ್ಲಾಘನೀಯ

ಪತ್ರಕರ್ತರಿಗೆ ಆಹಾರ ಕಿಟ್, ಸ್ಯಾನಿಟೈಜರ, ಮಾಸ್ಕ್ ವಿತರಣೆ ಜಾಗೃತಿ ಮೂಡಿಸುವಂತ ಕಾರ್ಯದಲ್ಲಿ ಪತ್ರಕರ್ತರು ಸದಾ ಸಿದ್ದ | ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಕಾರ್ಯ ಶ್ಲಾಘನೀಯ ಮೂಡಲಗಿ : ಕೊರೋನಾ ಮಾಹಾಮಾರಿಯ ಎಫೆಕ್ಟ್ ಎಲ್ಲೆಡೆ ತಟ್ಟಿದ್ದು, ಈ ಬಗ್ಗೆ ಸಮಾಜಕ್ಕೆ ಜನಜಾಗೃತಿ ಮೂಡಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ತಮ್ಮ ಬಿಡುವಿಲ್ಲದ ಕೆಲಸದಲ್ಲಿರುವ ಪತ್ರಕರ್ತರಿಗೆ ನೆರವಾಗುವ ದೃಷ್ಟಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಆಹಾರ ಕಿಟ್, ಸ್ಯಾನಿಟೈಜರ, ಮಾಸ್ಕ್ ಗಳನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ …

Read More »

ಯಾದವಾಡ ಗ್ರಾಮದಲ್ಲಿ ಪೆಟ್ರೋಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

  ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದಲ್ಲಿ ಪೆಟ್ರೋಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಮುಖಂಡ ವೀರಣ್ಣ ಮೋಡಿ ಮಾತನಾಡಿ, ಇತಿಹಾಸದಲ್ಲೇ ಪ್ರಥಮ ಬಾರಿಗೆ 1 ಒಂದು ಲೀಟರ್ ಪೆಟ್ರೋಲ್ ದರ 100 ರೂಪಾಯಿ ಆದ ಕಾರಣ ಜನಸಾಮಾನ್ಯರ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದ್ದು ನರೇಂದ್ರ ಮೋದಿಯವರು ಸ್ವಯಂಪ್ರೇರಿತವಾಗಿ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು. ಹಣಮಂತ ಚೆಕ್ಕೆಗೌಡರ ಮಾತನಾಡಿ, ದಿನಬಳಕೆ …

Read More »

ಜೂ.12 ರಿಂದ ಜೂ.14ರ ಬೆಳಗ್ಗೆ 6 ಗಂಟೆ ತನಕ ಬೆಟಗೇರಿ ಗ್ರಾಮ ಸಂಪೂರ್ಣ ಲಾಕ್

ಜೂ.12 ರಿಂದ ಜೂ.14ರ ಬೆಳಗ್ಗೆ 6 ಗಂಟೆ ತನಕ ಬೆಟಗೇರಿ ಗ್ರಾಮ ಸಂಪೂರ್ಣ ಲಾಕ್ ಬೆಟಗೇರಿ:ಕರೊನಾ ಎರಡನೇ ಅಲೆ ಮಟ್ಟಹಾಕುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳ ಆದೇಶದ ಮಾರ್ಗಸೂಚಿಯಂತೆ ಶನಿವಾರ ಜೂ.12 ಮತ್ತು ಜೂ.13 ಹಾಗೂ ಜೂ.14ರ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಅಗತ್ಯ ಸೇವೆ ಹೊರತುಪಡಿಸಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸಂಪೂರ್ಣ ವಿಕೆಂಡ್ ಲಾಕ್‍ಡೌನ್ ಜಾರಿಗೊಳಿಸಲಾಗಿದೆ ಎಂದು ಕುಲಗೋಡ ಪೊಲೀಸ್ ಠಾಣೆಯ ಸ್ಥಳೀಯ ಬೀಟ್ …

Read More »

ಬೆಳಗಾವಿ ನಗರದ ತರಕಾರಿ ಮಾರುಕಟ್ಟೆಗಳಿಗೆ ಭೇಟಿ ಮಾಡಿದ ಈರಣ್ಣ ಕಡಾಡಿ

ಬೆಳಗಾವಿ: ಕೋವಿಡ್ 19 ಹಿನ್ನಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವ ಕಾರಣದಿಂದ ಎ.ಪಿ.ಎಂ.ಸಿ ಮಾರ್ಕೆಡ್‍ನಲ್ಲಿದ್ದ ತರಕಾರಿ ಮಾರುಕಟ್ಟೆಯನ್ನು ಬೆಳಗಾವಿ ನಗರದ ಸಿ.ಪಿ.ಎಡ್ ಮೈದಾನ ಮತ್ತು ಆರ್.ಟಿ.ಒ ಮೈದಾನಗಳಿಗೆ ಸ್ಥಳಾಂತರಿಸಿರುವದು, ಅವೈಜ್ಞಾನಿಕ ಕ್ರಮವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಶುಕ್ರವಾರ ಜೂನ್ 11 ರಂದು ನಗರದ ತರಕಾರಿ ಮಾರುಕಟ್ಟೆಗಳಿಗೆ ಭೇಟಿ ಮಾಡಿ ಮಾತನಾಡಿದ ಈರಣ್ಣ ಕಡಾಡಿ ಅವರು ಎ.ಪಿ.ಎಂ.ಸಿ ಆವರಣದಲ್ಲಿ ಸುಮಾರು 13 ಎಕರೆಗಳ ವಿಶಾಲ ಪ್ರದೇಶದಲ್ಲಿ ಸುಸಜ್ಜಿತ ತರಕಾರಿ …

Read More »

, ಕೋವಿಡ್ ವಾರ್‍ರೂಮ್ ಸಿಬ್ಬಂದಿಗೆ ಊಟದ ವ್ಯವಸ್ಥೆ

ಮಾನವೀಯತೆ ಮೆರೆದ ಪತ್ರಕರ್ತ, ಕೋವಿಡ್ ವಾರ್‍ರೂಮ್ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಊಟದ ವ್ಯವಸ್ಥೆ ಮೂಡಲಗಿ: ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಎಡಬಿಡದೆ ಕಾರ್ಯ ನಿರ್ವಹಿಸುತ್ತಿರುವ ತಹಶೀಲದಾರ ಕಚೇರಿ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಇಲ್ಲಿಯ ಯುವ ಪತ್ರಕರ್ತ ಭಗವಂತ ಉಪ್ಪಾರ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು. ಬುಧವಾರ ಮಧ್ಯಾಹ್ನ ಕಚೇರಿ ಆವರಣದಲ್ಲಿ ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಅಹಾರ ವಿತರಿಸಿ ಮಾತನಾಡಿದ ಅವರು, ಈ ಲಾಕ್‍ಡೌನ ಸಮಯದಲ್ಲಿ ನಿತ್ಯ ಕಚೇರಿಗೆ ಬಂದು ಸಾರ್ವಜನಿಕ …

Read More »