Breaking News
Home / inmudalgi (page 28)

inmudalgi

*ಮಾನವನ ಮನುಕುಲದ ಉಳುವಿಗಾಗಿ ಗಿಡ ಮರಗಳನ್ನು ಬೆಳಿಸಿ : ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ*

ಮೂಡಲಗಿ : ಪ್ರಕೃತಿಯನ್ನು ಉಳಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ, ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಅಧ್ಯಕ್ಷರು ಹಾಗೂ ಸಾಲು ಮರದ ಸಿದ್ದಣ್ಣ ಖ್ಯಾತಿಯ ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಹೇಳಿದರು. ಅವರು ಸಮೀಪದ ಖಾನಟ್ಟಿಯ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡವನ್ನು ನೆಟ್ಟು ನೀರು ಉಣಿಸಿ ಮಾನವನ ಮನುಕುಲದ ಉಳುವಿಗಾಗಿ ಸಸಿಗಳನ್ನು ನೆಟ್ಟು ಅವುಗನ್ನು …

Read More »

*ಚೊಚ್ಚಲ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್.*

ಬೆಳಗಾವಿ – ೧೮ ವರ್ಷಗಳ ಕಾಯುವಿಕೆ, ಕೋಟ್ಯಾಂತರ ಅಭಿಮಾನಿಗಳ ಹರಕೆ, ಆಶೀರ್ವಾದ.. ಕೊನೆಗೂ ನನಸಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ೧೮ ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಆಗಿ ಮೂಡಿ ಬಂದಿರುವುದು ಸಕಲ ಕನ್ನಡಿಗರಿಗೆ ಹೆಮ್ಮೆ, ಹರ್ಷ ತಂದಿದೆ. ಈ ಗೆಲುವನ್ನು ಕಿಂಗ್ ಕೊಹ್ಲಿ ಅವರಿಗೆ ಅರ್ಪಿಸಿ ಕನ್ನಡಿಗರು ಹೃದಯ ವೈಶಾಲ್ಯತೆ ಮೆರೆಯೋಣ. ಈ ಸಲ ಕಪ್ ನಮ್ಮದೇ ಎನ್ನುತ್ತಿದ್ದ ನಮ್ಮ ಅಭಿಮಾನಿಗಳು ಈಗ ಕಾಲ ಕೂಡಿ ಬಂತು. ನಾವು …

Read More »

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಧರಣಿ

ಮೂಡಲಗಿ : ಸಮೀಪದ ಕೌಜಲಗಿಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಿವಿಧ ಬೇಡಿಕೆಗಲಿಗಾಗಿ ನಡೆಯುತ್ತಿರುವ ಧರಣಿಗೆ ಬೆಂಬಲವಾಗಿ ಮೂರಾರ್ಜಿ ವಸತಿ ಶಾಲೆಯಲ್ಲಿ ಸಂವಿಧಾನಾತ್ಮಕ ಸತ್ಯಾಗ್ರಹ ಸರ್ವಸಿಬ್ಬಂದಿ ಬಳಗ ಕಪ್ಪು ಪಟ್ಟಿ ಕಟ್ಟಿಕೊಂಡು ಸಾಂಕೇತಿಕ ಧರಣಿ ಸತ್ಯಾಗ್ರಹ ಕೈಗೊಂಡರು, ನಮ್ಮ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಾವಿರಾರು ನೌಕರರು ಸಣ್ಣ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂವಿಧಾನತ್ಮಕ ಹೋರಾಟಕ್ಕೆ ಕರೆ ಕೊಟ್ಟು ಗಾಳಿ, ಮಳೆ, ಚಳಿಯನ್ನು ಲೆಕ್ಕಿಸಸದೆ ಸರ್ವರ ಒಳತಿಗಾಗಿ …

Read More »

*ಮೂಡಲಗಿ:ಕೋರ್ಟ್ ರೋಡ್ ಅಗಲೀಕರಣಕ್ಕೆ ಆಗ್ರಹ.

ಮೂಡಲಗಿ : ನೂತನ ನ್ಯಾಯಾಲಯದ ಮುಂದಿನ ಪ್ರಮುಖ ರಸ್ತೆ ಅತೀ ಚಿಕ್ಕದಾಗಿದ್ದು ವಾಹನ ಸವಾರರು ಹಾಗೂ ಪಾದಾಚಾರಿಗಳು ನಿತ್ಯ ಪರದಾಡುವಂತಾಗಿದೆ ಆದ್ದರಿಂದ ರಸ್ತೆಯನ್ನು ಅಗಲೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುಕೂಲು ಮಾಡಿಕೊಡಬೇಕೆಂದು ಆಗ್ರಹಿಸಿ ಪಟ್ಟಣದ ಹೋರಾಟಗಾರರು ಹಾಗೂ ನ್ಯಾಯವಾದಿಗಳ ಪರವಾಗಿ ಸಮಾಜ ಸೇವಕ ಮಹಾಲಿಂಗಯ್ಯ ನಂದಗಾಂವಮಠ ಅವರು ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಮನವಿ ಸಲ್ಲಿಸಿದರು. ಈ ಕುರಿತು ಮಂಗಳವಾರದಂದು ಸಲ್ಲಿಸಿದ ಮನವಿಯಲ್ಲಿ ಪಟ್ಟಣದ ಚನ್ನಮ್ಮ ವೃತ್ತದಿಂದ ಗುರ್ಲಾಪೂರ …

Read More »

ಶತಮಾನ ಪೂರೈಸಿದ ಸರ್ಕಾರಿ ಕನ್ನಡ ಬಾಲಕರ ಮಾದರಿ ಶಾಲೆಯಲ್ಲಿ ಪ್ರಾರಂಭೋತ್ಸವದ ಕಾರ್ಯಕ್ರಮ

ಮೂಡಲಗಿ: ಸರ್ಕಾರ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಾಲಕ-ಪೋಷಕರು ಸದುಪಯೋಗ ಪಡಿಸಿಕೊಂಡು ಮಕ್ಕಳಗೆ ಉತ್ತಮ ಶಿಕ್ಷಣ ಕೊಡಿಸಬೇಕು’ ಎಂದು ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ ಹೇಳಿದರು. ಶುಕ್ರವಾರದಂದು ಪಟ್ಟಣದ ಶತಮಾನ ಪೂರೈಸಿದ ಸರ್ಕಾರಿ ಕನ್ನಡ ಬಾಲಕರ ಮಾದರಿ ಶಾಲೆಯಲ್ಲಿ ಪ್ರಾರಂಭೋತ್ಸವದ ಕಾರ್ಯಕ್ರಮದ ಸರಸ್ವತಿ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿದ ಅವರು, ಸರಕಾರ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ ಎಂದರು . ಸಿಡಿಪಿಒ …

Read More »

ತುಕ್ಕಾನಟ್ಟಿ ಸರ್ಕಾರಿ ಶಾಲೆಯಲ್ಲಿ ಪ್ರಾರಂಭ ದಿನದಂದೇ ಮಕ್ಕಳ ಕಲರವ

ಮೂಡಲಗಿ: ಬೇಸಿಗೆ ರಜೆ ಮುಗಿಸಿ ಶೈಕ್ಷಣಿಕ ಚಟುವಟಿಕೆ ಆರಂಭವಾಗುತ್ತಿರುವ ಪ್ರಾರಂಭೋತ್ಸವ ಕಾರ್ಯಕ್ರಮ ದಿನದಂದೇ ವಿದ್ಯಾರ್ಥಿಗಳು ತುಕ್ಕಾನಟ್ಟಿ ಸರಕಾರಿ ಮಾದರಿ ಶಾಲೆಯಲ್ಲಿ ಉತ್ಸಾಹದಿಂದ ಹಾಜರಾಗಿದ್ದಾರೆ. ಜನಪ್ರತಿನಿಧಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಪುಷ್ಪ ಹಾಗೂ ಸಿಹಿ ನೀಡಿ ಸ್ವಾಗತಿಸಿದರು. ಮಕ್ಕಳು ಖುಷಿಯಿಂದ ಶಾಲೆಗೆ ಹಾಜರಾಗಿದ್ದಾರೆ ಎಂದು ಪ್ರಧಾನ ಗುರುಗಳಾದ ಎ.ವ್ಹಿ.ಗಿರೆಣ್ಣವರ ಹೇಳಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಉಚಿತವಾಗಿ ಬಂದ ಸಮವಸ್ತ್ರ, ಪಠ್ಯ ಪುಸ್ತಕ ವಿತರಿಸಲಾಯಿತು. ಈ ಸರ್ಕಾರಿ ಶಾಲೆಯಲ್ಲಿ 1 ರಿಂದ …

Read More »

ಸಾಲ ಬಾಧೆಯಿಂದ ಬೇಸತ್ತು ನೇಕಾರ ನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮೂಡಲಗಿ : ಸಾಲ ಬಾಧೆಯಿಂದ ಬೇಸತ್ತು ನೇಕಾರ ನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಾಗನೂರ ಪಟ್ಟಣದಲ್ಲಿ ಗುರುವಾರ ನಡೆದಿದೆ. ನಾಗನೂರ ಪಟ್ಟಣದ ರಮೇಶ ಮರಿಜಾಡರ (37) ಎಂಬ ನೇಕಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಮೇಶ ನೇಕಾರಿಕೆ ಉದ್ಯೋಗಕ್ಕಾಗಿ ಸಾಲ ಮಾಡಿದ್ದರು. ಉದ್ಯೋಗ ಸರಿಯಾಗಿ ನಡೆಯದೇ ನಷ್ಟ ಅನುಭವಿಸಿದ್ದರು. ಸಾಲಬಾಧೆಯಿಂದ ಬೇಸತ್ತಿದ್ದರು ಎನ್ನಲಾಗುತ್ತಿದೆ. ಗುರುವಾರ ಮುಂಜಾನೆ ನೇಕಾರಿಕೆ ಮಾಡುವ ಶೇಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮೂಡಲಗಿ ಪೆÇಲೀಸ್ …

Read More »

ಪೌರ ನೌಕರರು ಮುಷ್ಕರ ರೈತ ಸಂಘಟನೆಗಳಿಂದ ಬೆಂಬಲ

ಮೂಡಲಗಿ: ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೌರ ನೌಕರರು ಪಟ್ಟಣದ ಪುರಸಭೆ ಅವರಣದಲ್ಲಿ ಮಂಗಳವಾರದಿಂದ ನಡೆಸುತ್ತಿರುವ ಅನಿರ್ಧಿμÁ್ಟವಧಿ ಮುಷ್ಕರ ಗುರುವಾರ ಮೂರು ದಿನ ಪೂರೈಸಿ ನಾಲ್ಕೆನೇ ದಿನಕ್ಕೆ ಮುಂದುವರಿದಿದೆ. ಮುಷ್ಕರಕ್ಕೆ ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಬೆಂಬಲ ಸೂಚಿಸಿ ಮುಷ್ಕರದಲ್ಲಿ ಭಾಗವಹಿಸಿದರು. ಈ ಸಮಯದಲ್ಲಿ ರೈತ ಮುಂಖಡ ಮಾರುತಿ ಕರಿಶೆಟ್ಟಿ ಮಾತನಾಡಿ, ಪೌರ ನೌಕರ ವಿವಿಧ ಬೇಡಿಕೆಗಳಿಗೆ ಸರಕಾರ ಕೂಡಲೇ ಸ್ಪಂದಿಸದಿದ್ದರೆ …

Read More »

ಚಂಡು ತರಲು ಹೋಗಿದ್ದ ಬಾಲಕ ಕಾಲು ಜಾರಿ ಬಾವಿಗೆ ಬಿದ್ದಿರುವ ಘಟನೆ

ಮೂಡಲಗಿ: ಪಟ್ಟಣದ ಲಕ್ಷ್ಮಿ ನಗರದಲ್ಲಿ ಇರುವ ಬಾವಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಬುಧುವಾರ ಪಟ್ಟಣದಲ್ಲಿ ನಡೆದಿದೆ. ಲಕ್ಷ್ಮಿ ನಗರದ ನಿವಾಸಿ ರಿಯಾಜ್ ಝಾರೆ ಎಂಬುವವರ ಪುತ್ರ ಕ್ರೀಕೇಟ್ ಆಟವಾಡಲು ಹೋದ ವೇಳೆ ಬಾವಿಗೆ ಬಿದ್ದ ಚಂಡು ತರಲು ಹೋಗಿದ್ದ ಬಾಲಕ ಕಾಲು ಜಾರಿ ಬಾವಿಗೆ ಬಿದ್ದಿರುವ ಘಟನೆ ಮೂಡಲಗಿ   ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಸ್ಥಳಕ್ಕೆ ಧಾವಿಸಿದ  ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ …

Read More »

‘ಸಿದ್ದರಾಮ ಶಿವಯೋಗಿಗಳು ಕಾಯಕದ ಮಹತ್ವ ಸಾರಿದ್ದರು’: ಸಾಹಿತಿ ಬಸವರಾಜ ಕುಪ್ಪಸಗೌಡ್ರ

ಮೂಡಲಗಿ ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದಲ್ಲಿ ಜರುಗಿದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಚನ್ನಮ್ಮನ್ನ ಕಿತ್ತೂರಿನ ಕಸಾಪ ಮಾಜಿ ಅಧ್ಯಕ್ಷ ಬಸವರಾಜ ಕುಪ್ಪಸಗೌಡ್ರ ಮಾತನಾಡಿದರು. ಶ್ರೀಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಚಿತ್ರದಲ್ಲಿರುವರು. ———————– ಮೂಡಲಗಿ: ‘12ನೇ ಶತಮಾನದಲ್ಲಿ ಸಿದ್ದರಾಮ ಶಿವಯೋಗಿಯವರು ಸಾಮಾಜಿಕ ಚಿಂತನೆಗಳ ಮೂಲಕ ಕಾಯಕದ ಮಹತ್ವವನ್ನು ಸಾರಿದ್ದರು’ ಎಂದು ಚನ್ನಮ್ಮನ್ನ ಕಿತ್ತೂರಿನ ಕನ್ನಡ ಸಾಹಿತ್ಯ ಪರಿಷತ್ತ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಬಸವರಾಜ ಕುಪ್ಪಸಗೌಡ್ರ ಅವರು ಹೇಳಿದರು. ತಾಲ್ಲೂಕಿನ …

Read More »