ಸುಣಧೋಳಿ ಜಡಿಸಿದ್ದೇಶ್ವರ ಮಠದ ಬಿಕ್ಕಟ್ಟನ್ನು ಬಗೆ ಹರಿಸಿದ ಶೂನ್ಯ ಸಂಪಾದನ ಮಠದ ಶ್ರೀಗಳು ಮತ್ತು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ. ಮಠದ ಉನ್ನತಿಗೆ ಮುರುಘರಾಜೇಂದ್ರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಸಲಹಾ ಸಮಿತಿ ರಚನೆ. ಗೋಕಾಕ: ಕಳೆದ ಆರೇಳು ತಿಂಗಳಿನಿoದ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದ ಜಡಿಸಿದ್ದೇಶ್ವರ ಮಠದಲ್ಲಿ ಎರಡು ಗುಂಪುಗಳ ಮಧ್ಯ ಭಿನ್ನಾಭಿಪ್ರಾಯಗಳು ಮೂಡಿದ್ದರಿಂದ ಅಲ್ಲಿನ ಪೀಠಾಧಿಕಾರಿಗಳಿಗೆ ಸೇವೆಯನ್ನು ನಿರ್ವಹಿಸಲು ತೊಂದರೆಯಾಗುತ್ತಿರುವದನ್ನು ಮನಗಂಡು ಗೋಕಾಕ ಶೂನ್ಯ ಸಂಪಾದನಾಮಠದ ಸ್ವಾಮಿಜೀ ಹಾಗೂ ಶಾಸಕ …
Read More »ಕಲ್ಲು ಎತ್ತುವ ದೇಸಿ ಕ್ರೀಡೆಯಲ್ಲಿ ಮಾಡಿರುವ ಸಾಧನೆಗೆ ಕರ್ನಾಟಕ ರಾಜ್ಯ ಕ್ರೀಡಾ ರತ್ನ ಪ್ರಶಸ್ತಿ
ಮೂಡಲಗಿ: ತಾಲ್ಲೂಕಿನ ಬೀಸನಕೊಪ್ಪ ಗ್ರಾಮದ ಯಮನಪ್ಪ ಮಾಯಪ್ಪ ಕಲ್ಲೋಳಿ ಅವರು ಗುಂಡು ಕಲ್ಲು ಎತ್ತುವ ದೇಸಿ ಕ್ರೀಡೆಯಲ್ಲಿ ಮಾಡಿರುವ ಸಾಧನೆಗೆ ಕರ್ನಾಟಕ ರಾಜ್ಯ ಕ್ರೀಡಾ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂಪ್ಪ ಅವರು ರೂ. 1 ಲಕ್ಷ ಚೆಕ್, ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು. ಯಮನಪ್ಪ ಕಲ್ಲೋಳಿ ಅವರು ಕಳೆದ 12 ವರ್ಷಗಳಿಂದ ಗುಂಡು ಕಲ್ಲುವ …
Read More »ಸಚಿವರು, ಪ್ರಭಾವಿ ರಾಜಕಾರಣಿಗಳ ದಮ್ ಪದ ಬಳಕೆ ವಿಷಾಧನೀಯ ಸಂಗತಿ : ಹೋರಾಟಗಾರ ಭೀಮಶಿ ಗಡಾದ
ಸಚಿವರು, ಪ್ರಭಾವಿ ರಾಜಕಾರಣಿಗಳ ದಮ್ ಪದ ಬಳಕೆ ವಿಷಾಧನೀಯ ಸಂಗತಿ : ಹೋರಾಟಗಾರ ಭೀಮಶಿ ಗಡಾದ ಮೂಡಲಗಿ : ಇತ್ತಿಚಿಗೆ ನಮ್ಮ ಸಚಿವರರುಗಳ ಹಾಗೂ ಪ್ರಭಾವಿ ರಾಜಕಾರಣಿಗಳ ಬಾಯಿಂದ “ದಮ್” ಪದ ಬಳಕೆ ಮಾಡುತ್ತೀರುವದು ವಿಷಾಧನೀಯ ಸಂಗತಿಯಾಗಿದೆ. ಪ್ರತಿ ವರ್ಷ ನ.1ರ ರಾಜ್ಯೋತ್ಸವ ಆಚರಿಸುವ ಸಮಯದಲ್ಲಿ ಮಾತ್ರ ಇವರೆಲ್ಲರೂ ಎಮ್‍ಇಎಸ್‍ದವರ ಕುರಿತು ಮಾತನಾಡುತ್ತಾರೆ. ಆದರೆ ಮರಾಠಿಗಳ ಮತಗಳನ್ನೆ ಅವಲಂಬಿಸಿರುವ ಇವರು ಚುನಾವಣೆ ಸಮಯದಲ್ಲಿ ಇವರನ್ನು ಹಾಡಿ ಹೋಗಳುತ್ತಾರೆ. ಈ ರಾಜಕಾರಣಿಗಳಿಗೆ …
Read More »ಅವಿರೋಧವಾಗಿ ಬಿಡಿಸಿಸಿ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಗೊಂಡ ನೀಲಕಂಠ ಕಪ್ಪಲಗುದ್ದಿ
ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ನೀಲಕಂಠ ಬಸವರಾಜ ಕಪ್ಪಲಗುದ್ದಿ ಇವರು ದಿಬಿಡಿಸಿಸಿ ಬ್ಯಾಂಕಿಗೆ ಎರಡನೇಯ ಬಾರಿಗೆ ನಿರ್ದೇಶಕರಾಗಿ ಅವರೋಧವಾಗಿ ಆಯ್ಕೆಯಾಗಿ ಕಲ್ಲೋಳಿಗೆ ಆಗಮಿಸಿದ ಸಂದರ್ಭದಲ್ಲಿ ಪಟ್ಟಣದ ನಾಗರಿಕರು ಹಾಗೂ ರಾಜಕೀಯ ದುರೀಣರು ಹೂ ಮಾಲೆ ಹಾಕಿ ಬರಮಾಡಿಕೊಂಡರು. ಅವಿರೋಧವಾಗಿ ಬಿಡಿಸಿಸಿ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಗೊಂಡ ನೀಲಕಂಠ ಕಪ್ಪಲಗುದ್ದಿ ಪಟ್ಟಣದ ಜಾಗೃತ ದೇವರಾದ ಹನುಮಾನ ದೇವಸ್ಥಾನಕ್ಕೆ ತೇರಳಿ ಹನುಮಾನ ದರ್ಶನ ಪಡೆದುಕೊಂಡರು. ಈ ಸಂಧರ್ಭದಲ್ಲಿ ಈರಪ್ಪ ಹೆಬ್ಬಾಳ, ಸುಭಾಸ ಕುರಬೇಟ, ಬಸವಂತ …
Read More »ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಪ್ರಥಮಾಧ್ಯತೆ.-ಬಾಲಚಂದ್ರ ಜಾರಕಿಹೊಳಿ ಹೇಳಿಕೆ.
ಎಸ್‍ಎಸ್‍ಎಲ್‍ಸಿ ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್‍ಟ್ಯಾಪ್ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ. ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಪ್ರಥಮಾಧ್ಯತೆ.-ಬಾಲಚಂದ್ರ ಜಾರಕಿಹೊಳಿ ಹೇಳಿಕೆ. ಗೋಕಾಕ: ಅರಭಾಂವಿ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುತ್ತಿದ್ದು, ಶಿಕ್ಷಣದ ಅಮೂಲಾಗ್ರ ಬದಲಾವಣೆಗೆ ಕಳೆದ 15ವರ್ಷಗಳಿಂದ ಶ್ರಮಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳ ಸಾಧನೆ ಅಪಾರವಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೂಡಲಗಿ ವಲಯದ ವಿದ್ಯಾರ್ಥಿನಿಯೋರ್ವಳು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವುದು ಹೆಮ್ಮೆಯನ್ನುಂಟು ಮಾಡಿದೆ ಎಂದು ಶಾಸಕ ಮತ್ತು …
Read More »ಸಹಕಾರಿ ಸಂಘ, ಸಂಸ್ಥೆಗಳು ಹಳ್ಳಿಯ ಜನರ ಜೀವನಾಡಿವಿದ್ದಂತೆ.
ಬೆಟಗೇರಿ: ಗ್ರಾಮೀಣ ವಲಯದ ಸಹಕಾರಿ ಸಂಘ, ಸಂಸ್ಥೆಗಳು ಹಳ್ಳಿಯ ಜನರ ಜೀವನಾಡಿವಿದ್ದಂತೆ. ಸಂಘ ಸಂಸ್ಥೆಗಳು ಸಮಗ್ರ ಪ್ರಗತಿ ಸಾಧಿಸಲು ಸ್ಥಳೀಯರ ಸಹಕಾರ ಅವಶ್ಯಕವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್‍ನ ನೂತನ ನಿರ್ದೇಶಕ ಸತೀಶ ಕಡಾಡಿ ಅವರು ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕಲ್ಲೋಳಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಶಾಖೆಯಲ್ಲಿ ಸೋಮವಾರ ನ.2ರಂದು ನಡೆದ ಬಿಡಿಸಿಸಿ ಬ್ಯಾಂಕ್‍ನ ನೂತನ ನಿರ್ದೇಶಕರಾಗಿ ಅವಿರೂಧವಾಗಿ ಆಯ್ಕೆಯಾಗಿರುವ ಸತೀಶ ಕಡಾಡಿ ಅವರ ಸತ್ಕಾರ ಹಾಗೂ …
Read More »ನಿಧನ ವಾರ್ತೆ ಉದ್ದಪ್ಪ ಮನ್ನಾಪೂರ
ನಿಧನ ವಾರ್ತೆ ಉದ್ದಪ್ಪ ಮನ್ನಾಪೂರ (85) ಮೂಡಲಗಿ: ಸಮೀಪದ ಮನ್ನಾಪೂರ ಗ್ರಾಮದ ಉದ್ದಪ್ಪ ದೇವಪ್ಪ ಮನ್ನಾಪೂರ (85) ಹೃಧಯಾಘತದಿಂದ ರವಿವಾರ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರೂ ಪುತ್ರಿಯರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Read More »ನಿಶ್ವಾರ್ಥ ಸೇವೆ ಆತ್ಮ ತೃಪ್ತಿ ನೀಡುತ್ತದೆ: ಪ್ರೊ.ಕೆ.ಜೆ.ಮಾಲಗಾಂವೆ
ನಿಶ್ವಾರ್ಥ ಸೇವೆ ಆತ್ಮ ತೃಪ್ತಿ ನೀಡುತ್ತದೆ: ಪ್ರೊ.ಕೆ.ಜೆ.ಮಾಲಗಾಂವೆ ಐನಾಪೂರ: ನಮ್ಮ ಸೇವೆಯು ಪ್ರಾಮಾಣಿಕವಾಗಿದ್ದರೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂದು ಐನಾಪೂರದ ಕೆ.ಆರ್.ಇ.ಎಸ್. ಸಂಸ್ಥೆ ಪ.ಪೂ. ಕಾಲೇಜಿನ ಪ್ರಾಚಾರ್ಯ ಪ್ರೊ. ಕೆ.ಜೆ. ಮಾಲಗಾಂವೆ ಹೇಳಿದರು. ಅವರು ನವ್ಯಸ್ಪೂರ್ತಿ ಸಮಾಜ ಸಂಸ್ಥೆ, ಐನಾಪೂರ ಹಾಗೂ ಕೆ.ಆರ್.ಇ.ಎಸ್. ಹೈಸ್ಕೂಲ್ ಸನ್ 1998-99 ಸಾಲಿನ ಹಳೆಯ ವಿದ್ಯಾರ್ಥಿಗಳ ಬಳಗ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸತ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಜಗತ್ತನ್ನೇ ತಲ್ಲಣಗೊಳಿಸಿದ …
Read More »‘ಭಾರತೀಯ ರಾಷ್ಟ್ರೀಯ ಏಕತೆಯು ವಿಶ್ವಕ್ಕೆ ಮಾದರಿಯಾಗಿದೆ
‘ಭಾರತೀಯ ರಾಷ್ಟ್ರೀಯ ಏಕತೆಯು ವಿಶ್ವಕ್ಕೆ ಮಾದರಿಯಾಗಿದೆ’ ಮೂಡಲಗಿ: ‘ಭಾರತ ದೇಶವು ವಿವಿಧತೆಯಲ್ಲಿ ಏಕತೆ ಸಾಧಿಸಿರುವುದು ಇಡೀ ವಿಶ್ವಕ್ಕೆ ಮಾದರಿಯಾಗಿದೆ’ ಎಂದು ಸಾಹಿತಿ ಬಾಲಶೇಖರ ಬಂದಿ ಹೇಳಿದರು. ಇಲ್ಲಿಯ ಮಂಜುನಾಥ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಮೂಡಲಗಿ ಪೊಲೀಸ್ ಇಲಾಖೆಯಿಂದ ಆಚರಿಸಿದ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಏಕತೆಯು ಯಾರದೇ ಒತ್ತಾಯಕ್ಕಾಗಿ ಇರದೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಅಂತರಾತ್ಮದ ಬದ್ಧತೆಯಾಗಿರಬೇಕು ಎಂದರು. ಏಕತೆ ದಿನಾಚರಣೆಯನ್ನು ಭಾರತ ದೇಶವನ್ನು ಒಂದುಗೂಡಿಸಿದ …
Read More »ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ
ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮೂಡಲಗಿ : ಪಟ್ಟಣದ ವಾಹನ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಮ್ಮ ಕಚೇರಿಯಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ತಮ್ಮ ವಾಹನಗಳಿಗೆ ಕನ್ನಡದ ಬಾವುಟ ಕಟ್ಟಿ ನಗರದ ಪ್ರಮುಖ ರಸ್ತೆಗಳಲ್ಲಿ ಕನ್ನಡ ಪರ ಘೋಷಣೆಗಳನ್ನು ಕೂಗುತ್ತಾ ವಾಹನದಲ್ಲಿ ಸಂಚರಿಸುವ ಮೂಲಕ ಕನ್ನಡ ರಾಜ್ಯೋತ್ಸವನ್ನು ಆಚರಿಸಿದರು
Read More »