ಬೆಳಗಾವಿ : ಬೆಳಗಾವಿ ತಾಲೂಕಿನಲ್ಲಿ 130 , ಜಿಲ್ಲೆಯಲ್ಲಿ 219 ಸೋಂಕಿತರು ದೃಢಪಟ್ಟಿದ್ದಾರೆ. ಇನ್ನು ರಾಯಬಾಗ್ ತಾಲೂಕಿನಲ್ಲಿ 24, ಚಿಕ್ಕೋಡಿ ತಾಲೂಕಿನಲ್ಲಿ 17, ಗೋಕಾಕ್ ತಾಲೂಕಿನಲ್ಲಿ 14, ಸವದತ್ತಿ ತಾಲೂಕಿನಲ್ಲಿ 13, ರಾಮದುರ್ಗ ತಾಲೂಕಿನಲ್ಲಿ 8, ಹುಕ್ಕೇರಿ ತಾಲೂಕಿನಲ್ಲಿ 7, ಖಾನಾಪುರ ತಾಲೂಕಿನಲ್ಲಿ 3, ಬೈಲಹೊಂಗಲ ತಾಲೂಕಿನಲ್ಲಿ 01, ಅಥಣಿ ತಾಲೂಕಿನಲ್ಲಿ 02 ಸೋಂಕಿತರು ದೃಢಪಟ್ಟಿದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿ ಇಂದು ನಾಲ್ವರನ್ನು ಕಿಲ್ಲರ್ ಕೊರೊನಾ ಬಲಿ ಪಡೆದುಕೊಂಡಿದೆ. ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾಗೆ …
Read More »ತುಕ್ಕಾನಟ್ಟಿಯಲ್ಲಿ ಸಾಮಾಜಿಕ ಅಂತರದೊಂದಿಗೆ ಹೊರಾಂಗಣ ಶಿಕ್ಷಣ.
ತುಕ್ಕಾನಟ್ಟಿಯಲ್ಲಿ ಸಾಮಾಜಿಕ ಅಂತರದೊಂದಿಗೆ ಹೊರಾಂಗಣ ಶಿಕ್ಷಣ. ಮೂಡಲಗಿ: ಮಹಾಮಾರಿ ಕೊರೊನಾ ವೈರಸ್‍ದಿಂದಾಗಿ ಶಾಲೆಗಳು ತೆರೆಯದೇ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಕೂಡಾ ನಮ್ಮ ಗ್ರಾಮೀಣ ಮಟ್ಟದ ಬಡ ಕುಟಂಬಗಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಕಾರಣ ಬಡ ಮಕ್ಕಳ ಜನ ವಸತಿ ಪ್ರದೇಶಕ್ಕೆ ಶಿಕ್ಷಕರೇ ಹೋಗಿ ಸಾಮಾಜಿಕ ಅಂತರದಲ್ಲಿ ಬಯಲು ಪ್ರದೇಶದಲ್ಲಿ ಶಿಕ್ಷಣ ನೀಡುತ್ತಿದ್ದೇವೆ ಎಂದು ಮೂಡಲಗಿ ವಲಯದ ತುಕ್ಕಾನಟ್ಟಿಯ ಸರಕಾರಿ ಶಾಲೆಯ ಮುಖ್ಯ …
Read More »ಮೂಡಲ, ಮೂಡಣ ಎಂಬುದೇ ಮೂಡಲಗಿ : ಶ್ರೀ ಮಹಾದೇವ ಪೋತರಾಜ
ಮೂಡಲ, ಮೂಡಣ ಎಂಬುದೇ ಮೂಡಲಗಿ : ಶ್ರೀ ಮಹಾದೇವ ಪೋತರಾಜ ಗೋಕಾಕ: ಮೂಡಣ ಪ್ರದೇಶ ಎಂಬ ದಿಗ್ವಾಚಕ ಪದವೇ ಮೂಡಲಗಿ ಎಂದಾಗಿರಬಹುದು ಎಂದು ಖಾನಟ್ಟಿಯ ಪಿ.ಎಚ್. ಡಿ ಸಂಶೋಧನಾರ್ಥಿ ಶ್ರೀ ಮಹಾದೇವ ಪೋತರಾಜ ಅಭಿಪ್ರಾಯಿಸಿದರು. ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡ ಕೋವಿಡ್ 2019 ಲಾಕ್ ಡೌನ್ ನಿಮಿತ್ಯ ಗೂಗಲ್ ಮೀಟ್ ಸೆಮಿನಾರ್ ಅಲ್ಲ ವೇಬಿನಾರ್ ವಿಶೇಷ ಉಪನ್ಯಾಸ ಮಾಲಿಕೆ 16ನೇ ಗೋಷ್ಠಿಯಲ್ಲಿ “ಮೂಡಲಗಿ ಐತಿಹಾಸಿಕ ಚಿಂತನೆ” ವಿಷಯ ಕುರಿತು …
Read More »ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರನ್ನಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೇಮಕ
ಮೂಡಲಗಿ: ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರನ್ನಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲು ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕಳೆದ 30 ವರ್ಷಗಳ ಕಾಲ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಮುಖಂಡರಾಗಿ ಪಕ್ಷದ ಸಂಘಟನೆಗೆ ನಿರಂತರ ಶ್ರಮಿಸುತ್ತಾ ಬಂದಿರುವ ನೂತನ ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡ ಈರಣ್ಣ ಕಡಾಡಿ ಅವರು, ಈ ಮೊದಲು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ, 2 ಸಲ …
Read More »ರವಿವಾರದ ಸಂತೆಯನ್ನು ಸಂಪೂರ್ಣ ರದ್ದು- ಈಶ್ವರ ಬಳಿಗಾರ
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನಡೆಯುತ್ತಿದ್ದ ಭಾನುವಾರದ ಸಂತೆಯನ್ನು ಕರೋನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಆ.2, ಆ.9, ಆ.16, ಆ.23, ಆ30ರ ದಿನಗಳ ರವಿವಾರದ ಸಂತೆಯನ್ನು ಸಂಪೂರ್ಣ ರದ್ದು ಮಾಡಲಾಗಿದೆ. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಸಹಕರಿಸಬೇಕು ಎಂದು ಸ್ಥಳೀಯ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ ತಿಳಿಸಿದ್ದಾರೆ. ಶನಿವಾರ ಆ.1 ರಂದು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಬೆಟಗೇರಿ ಗ್ರಾಮದ ಹಿರಿಯ ನಾಗರಿಕರ …
Read More »ಸ್ಥಳನಾಮವೆಂದರೆ ಊರು ಕೇರಿ ಹಳ್ಳಿ ಗ್ರಾಮ- – ಪ್ರೊ. ಯರಿಯಪ್ಪ ಬೆಳಗುರ್ಕಿ
ಸ್ಥಳನಾಮವೆಂದರೆ ಊರು ಕೇರಿ ಹಳ್ಳಿ ಗ್ರಾಮ- – ಪ್ರೊ. ಯರಿಯಪ್ಪ ಬೆಳಗುರ್ಕಿ ಗೋಕಾಕ: ಸಾಂಸ್ಕೃತಿಕ ಇತಿಹಾಸಕ್ಕೆ ಸ್ಥಳೀಯ ನೆಲದ ಹೆಸರುಗಳನ್ನು ಅರ್ಥೈಸುವಲ್ಲಿ ಅಧ್ಯಯನದ ಅಗತ್ಯವಿದೆ. ಒಂದು ಪ್ರದೇಶದ ಜನರ ನೆಲೆ, ಜಾಗ, ಸ್ಥಳ ಹೆಸರುಗಳಿಗೆ ಊರು, ಕೇರಿ, ಹಳ್ಳಿ, ಗ್ರಾಮ ಎಂದು ಕರೆಯಲಾಗಿದೆ ಎಂದು ರಾಯಚೂರು ಜಿಲ್ಲೆಯ ಸಿಂಧನೂರಿನ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕ ಯರಿಯಪ್ಪ ಬೆಳಗುರ್ಕಿ ಅಭಿಪ್ರಾಯ ಪಟ್ಟರು. ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡ ಕೋವಿಡ್ …
Read More »ಭಾರತದ ಸಂಸ್ಕøತಿ ಬಿಂಬಿಸುವ ಹೊಸ ಶಿಕ್ಷಣ ನೀತಿ. ಕೇಂದ್ರ ಸರಕಾರದ ಹೊಸ ಶಿಕ್ಷಣ ನೀತಿ ; ಎಚ್.ಆರ್.ಎನ್ ಸ್ವಾಗತ.
ಭಾರತದ ಸಂಸ್ಕøತಿ ಬಿಂಬಿಸುವ ಹೊಸ ಶಿಕ್ಷಣ ನೀತಿ. ಕೇಂದ್ರ ಸರಕಾರದ ಹೊಸ ಶಿಕ್ಷಣ ನೀತಿ ; ಎಚ್.ಆರ್.ಎನ್ ಸ್ವಾಗತ. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕು ಎಂಬ ಅನೇಕ ವರ್ಷಗಳ ಬೇಡಿಕೆ ಈಗ ಈಡೇರಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿ 2020ನ್ನು ತಾವು ಹಾರ್ದಿಕವಾಗಿ ಸ್ವಾಗತಿಸುವುದಾಗಿ ವಿಧಾನ ಪರಿಷತ್ ಸದಸ್ಯ ಹನುಮಂತ ಆರ್ ನಿರಾಣಿ ತಿಳಿಸಿದ್ದಾರೆ. ಭಾರತದ ಭವ್ಯ ಪರಂಪರೆ ಮತ್ತು …
Read More »ಕಹಾಮ ನೌಕರರಿಗೆ ಕೊರೋನಾ ವಿಮೆ ಜಾರಿ : ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನಂದಿನಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಬಾಲಚಂದ್ರ ಜಾರಕಿಹೊಳಿ
ಕಹಾಮ ನೌಕರರಿಗೆ ಕೊರೋನಾ ವಿಮೆ ಜಾರಿ : ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನಂದಿನಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಬಾಲಚಂದ್ರ ಜಾರಕಿಹೊಳಿ ಬೆಂಗಳೂರು : ಮಹಾಮಾರಿ ಕೊರೋನಾ ವೈರಸ್ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಕಹಾಮ ನೌಕರರಿಗೆ ಕೊರೋನಾ ವಿಮೆ ಮಾಡಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಶುಕ್ರವಾರದಂದು ಈ ಹೇಳಿಕೆ ನೀಡಿರುವ ಅವರು, …
Read More »ಸೈಕಲ್ ಸವಾರಿ ಪಿ.ಎಸ್.ಐ ಕರ್ತವ್ಯಕ್ಕೆ ಒಂದು ಸೆಲ್ಯೂಟ್!
ಸೈಕಲ್ ಸವಾರಿ ಪಿ.ಎಸ್.ಐ ಕರ್ತವ್ಯಕ್ಕೆ ಒಂದು ಸೆಲ್ಯೂಟ್! ಮೂಡಲಗಿ : ಎಷ್ಟೋ ಮಂದಿ ದೊಡ್ಡ ದೊಡ್ಡ ಅಧಿಕಾರಿಗಳು, ಜನಪ್ರತಿನಿಧಿಗಳು, ಮರಿ, ಕಿರಿ ರಾಜಕಾರಣಿಗಳು ತಮ್ಮ ವಾಹನ(ಕಾರ, ಜೀಪ್, ಇತ್ಯಾದಿ)ಗಳು ಸುಸ್ಥಿತಿಯಲ್ಲಿ ಇಲ್ಲದಾಗ ಅಥವಾ ಚಾಲಕರು ಇಲ್ಲದಿದ್ದಾಗ ಅಂದಿನ ಕರ್ತವ್ಯದ ಸಂಚಾರವನ್ನೆ ರದ್ದುಗೊಳಿಸಿದ ಅಥವಾ ಮುಂದೂಡುವ ಇಂತಹ ಸಮಯದಲ್ಲಿ ಇಲ್ಲೊಬ್ಬರು ನಿಷ್ಟಾವಂತ ಪೋಲಿಸ್ ಅಧಿಕಾರಿ ಪ್ರತಿನಿತ್ಯ ಮುಂಜಾನೆ ಸೈಕಲ್ ಸವಾರಿ ಮಾಡುತ್ತಾ ಜನರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದಾರೆ. ಒಮ್ಮೊಮ್ಮೆ ಠಾಣೆ ವ್ಯಾಪ್ತಿಯ …
Read More »ಮೂಡಲಗಿ ಪುರಸಭೆ ಕಚೇರಿಯಲ್ಲಿ ಮತ್ತೊಂದು ಸೋಂಕು ಪತ್ತೆ
ಮೂಡಲಗಿ : ಪಟ್ಟಣದ ತಾಲೂಕು ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಕೇಂದ್ರದ ಎದುರಿಗೆ ಇರುವ ಪುಟ್ಟ ಹೋಟೆಲ್ ಮತ್ತು ತಹಸೀಲ್ದಾರ್ ಕಚೇರಿಯಲ್ಲಿ ಸೋಂಕು ಪತ್ತೆಯಾಗಿತ್ತು. ಆದರೆ ಮತ್ತೆ ಪುರಸಭೆ ಕಚೇರಿಯಲ್ಲಿ ಇನ್ನೋರ್ವ ವ್ಯಕ್ತಿಗೆ ಸೋಂಕು ದೃಡಪಟ್ಟಿದೆ ಇಂದು ಒಂದೇ ದಿನ ಮೂಡಲಗಿ ಪಟ್ಟಣದಲ್ಲಿ ಒಟ್ಟು 4 ಸೋಂಕು ಪತ್ತೆಯಾಗಿವೆ.
Read More »