Breaking News
Home / inmudalgi (page 36)

inmudalgi

ಎರಡು ಗುಂಪುಗಳ ನಡುವೆ ತುರುಸಿನ ಚುನಾವಣೆ ಸ್ಪರ್ಧೆ.!

ಎರಡು ಗುಂಪುಗಳ ನಡುವೆ ತುರುಸಿನ ಚುನಾವಣೆ ಸ್ಪರ್ಧೆ.! *ಬೆಟಗೇರಿ ಪಿಕೆಪಿಎಸ್ ಆಡಳಿತ ಮಂಡಳಿಗೆ ಚುನಾವಣೆ * ಬಿರುಸಿನ ಪ್ರಚಾರ* ಗ್ರಾಮಸ್ಥರಲ್ಲಿ ಕುತುಹಲ ವರದಿ-ಅಡಿವೇಶ ಮುಧೋಳ. ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಒಟ್ಟು 12 ಸ್ಥಾನಗಳ ಸದಸ್ಯರ ಆಯ್ಕೆಗಾಗಿ 24 ಜನ ಅಭ್ಯರ್ಥಿಗಳು ಚುನಾವಣೆ ಅಖಾಡದಲ್ಲಿದ್ದು. ಇದೇ ಶನಿವಾರ ಡಿ.14ರಂದು ಚುನಾವಣೆಯ ಮತದಾನ ನಡೆಯುವ ಹಿನ್ನಲೆಯಲ್ಲಿ ಬಿರುಸಿನ ಚುನಾವಣೆ ಪ್ರಚಾರ …

Read More »

ನಬಾರ್ಡ್ ಮೂಲಕ ಸ್ಟಾರ್ಟ್-ಅಪ್‌ಗಳಿಗೆ ಬೆಂಬಲ ಒದಗಿಸುವ ಯೋಜನೆ

ಮೂಡಲಗಿ: ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು 2018-19ನೇ ಸಾಲಿನಿಂದ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ “ಆವಿಷ್ಕಾರ ಮತ್ತು ಕೃಷಿ ಉದ್ಯಮಶೀಲತೆ ಅಭಿವೃದ್ಧಿ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಮೂಲಕ , ಸ್ಟಾರ್ಟ್‌ಅಪ್‌ಗಳಿಗೆ ಆರ್ಥಿಕ ಮತ್ತು ತಾಂತ್ರಿಕ ಬೆಂಬಲವನ್ನು ನೀಡುವ ಮೂಲಕ ನಾವೀನ್ಯತೆ ಮತ್ತು ಕೃಷಿ ಉದ್ಯಮಶೀಲತೆಯನ್ನು ಉತ್ತೇಜಿಸುತ್ತಿದೆ. 2019-20 ರಿಂದ 2023-24 ರವರೆಗೆ 1708 ಕೃಷಿ ಸ್ಟಾರ್ಟ್‌ಅಪ್‌ಗಳಿಗೆ 122.50 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು …

Read More »

ತೊಂಡಿಕಟ್ಟಿಯಲ್ಲಿ ಅಯ್ಯಪ್ಪಸ್ವಾಮಿ ಮಹಾಪೂಜೆ

 ಅಯ್ಯಪ್ಪಸ್ವಾಮಿ ಮಹಾಪೂಜೆ ತೊಂಡಿಕಟ್ಟಿ; ಇಲ್ಲಿಯ ಓಂ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮೀತಿಯಿಂದ 27ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಹಾಗೂ ನಿರಂತರವಾಗಿ 18ನೇ ವರ್ಷ ಶಬರಿ ಮಲೈ ಯಾತ್ರೆ ಕೈಗೋಳ್ಳುತ್ತಿರುವ ಗರುಸ್ವಾಮಿಗಳಿಗೆ ಸನ್ಮಾನ ಕಾರ್ಯಕ್ರಮ ಬುಧವಾರ ಡಿ.11 ರಂದು ತೊಂಡಿಕಟ್ಟಿ ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಲಿದೆ. ಮಧ್ಯಾಹ್ನ 12-30 ರವರಿಗೆ ಅನ್ನ ಸಂತರ್ಪಣೆ ಮತ್ತು 3ಗಂಟೆಯಿಂದ ವಿವಿಧ ವಾಧ್ಯಮೇಳಗೊಳೊಂದಿಗೆ ಶ್ರೀ ಅಯ್ಯಪ್ಪಸ್ವಾಮಿ ಭಾವಚಿತ್ರದ …

Read More »

ಮಾಜಿ ಸಿಎಂ ಕೃಷ್ಣ ವಿಧಿವಶ- ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ

ಮಾಜಿ ಸಿಎಂ ಕೃಷ್ಣ ವಿಧಿವಶ- ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ ಗೋಕಾಕ: ಪದ್ಮ ವಿಭೂಷಣ, ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ (೯೩) ಅವರ ನಿಧನಕ್ಕೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ. ನಗುಮುಖದ ಮೂಲಕ ತಮ್ಮದೇಯಾದ ವಿಶಿಷ್ಟ ಶೈಲಿಯ ರಾಜಕಾರಣದ ಮೂಲಕ ಗಮನ ಹರಿಸಿದ್ದ ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿ, ಸ್ಪಿಕರ್ ಆಗಿ, ಕೇಂದ್ರದ ಮಂತ್ರಿಯಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. …

Read More »

ಬೆಳಗಾವಿಯಿಂದ ಶಬರಿಮಲೆಗೆ ತೆರಳುವ ವಿಶೇಷ ರೈಲು ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಈರಣ್ಣ ಕಡಾಡಿ

ಬೆಳಗಾವಿ: ಬೆಳಗಾವಿ-ಶಬರಿಮಲೆ ಕೊಲ್ಲಂ ನಡುವೆ ವಿಶೇಷ ರೈಲು ಸಂಚಾರಕ್ಕೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಸೋಮವಾರ ಡಿ-09 ರಂದು ಬೆಳಗಾವಿ ರೈಲು ನಿಲ್ದಾಣದಲ್ಲಿ ಬೆಳಗಾವಿಯಿಂದ ಶಬರಿಮಲೆಗೆ ತೆರಳುವ ವಿಶೇಷ ರೈಲು ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶಬರಿಮಲೆಗೆ ಕರ್ನಾಟಕದಿಂದ ಪ್ರತಿ ವರ್ಷ ಲಕ್ಷಾಂತರ ಭಕ್ತರು ಯಾತ್ರೆ ಕೈಗೊಳ್ಳುತ್ತಾರೆ. ಜಿಲ್ಲೆಯಿಂದಲೂ …

Read More »

ಜನರ ಪ್ರೀತಿ, ವಿಶ್ವಾಸದಿಂದಲೇ ನಮ್ಮ ಕುಟುಂಬಕ್ಕೆ ಅಧಿಕಾರ; ಕುಟುಂಬ ರಾಜಕೀಯ ಪರ ಬ್ಯಾಟ್ ಬೀಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

*ಯಾದವಾಡದಲ್ಲಿ ಭಂಡಾರಮಯವಾದ ಕನಕದಾಸರ ಜಯಂತ್ಯೋತ್ಸವ* *ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಅದ್ದೂರಿಯಾಗಿ ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಿದ ಗ್ರಾಮಸ್ಥರು* *ಜನರ ಪ್ರೀತಿ, ವಿಶ್ವಾಸದಿಂದಲೇ ನಮ್ಮ ಕುಟುಂಬಕ್ಕೆ ಅಧಿಕಾರ; ಕುಟುಂಬ ರಾಜಕೀಯ ಪರ ಬ್ಯಾಟ್ ಬೀಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ* ಮೂಡಲಗಿ: ಜನರ ಪ್ರೀತಿ, ವಿಶ್ವಾಸದಿಂದಾಗಿಯೇ ನಮ್ಮ ಒಂದೇ ಕುಟುಂಬದಲ್ಲಿ ಐವರು ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಜನಸೇವೆಯನ್ನು ಮಾಡುತ್ತಿದ್ದೇವೆ. ಇದರಲ್ಲಿ ಕುಟುಂಬ ರಾಜಕೀಯದ ಪ್ರಶ್ನೆಯೇ ಉದ್ಭವಿಸುವದಿಲ್ಲ ಎಂದು ಶಾಸಕ …

Read More »

ವೇಟ್‌ ಲಿಪ್ಟಿಂಗ್‌ದಲ್ಲಿ ರಾಷ್ಟ ಮಟ್ಟಕ್ಕೆ ಆಯ್ಕೆ

ವೇಟ್‌ ಲಿಪ್ಟಿಂಗ್‌ದಲ್ಲಿ ರಾಷ್ಟ ಮಟ್ಟಕ್ಕೆ ಆಯ್ಕೆ ಮೂಡಲಗಿ: ಮೂಡಲಗಿ ಕೇಶವಕುಮಾರ ಲಕ್ಕಪ್ಪ ವ್ಯಾಪಾರಿ ರಾಜೀವ ಗಾಂಧಿ ವಿಶ್ವವಿದ್ಯಾಲಯದ ರಾಜ್ಯ ಮಟ್ಟದ 89 ಕೆಜಿ ವಿಭಾಗದ ವೇಟ್‌ ಲಿಪ್ಟಿಂಗ್‌ದಲ್ಲಿ ಸತತ ಎರಡನೇ ಬಾರಿ ಪ್ರಥಮ ಸ್ಥಾನದಲ್ಲಿ ಬಂಗಾರ ಪದಕ ಪಡೆದುಕೊಂಡು ರಾಷ್ಟ್ರ ಮಟ್ಟದ ವೇಟ್‌ ಲಿಪ್ಟಿಂಗ್‌ ಸ್ಪರ್ಧೆಗೆ ಆಯ್ಕೆಯಾಗಿರುವನು. ಸದ್ಯ ಮೂಡಬಿದರಿಯ ಆಳ್ವಾ ಅಯುರ್ವೇದಿಕ ವೈದ್ಯಕೀಯ ಕಾಲೇಜುದಲ್ಲಿ ದ್ವಿತೀಯ ವರ್ಗದಲ್ಲಿ ಓದುತ್ತಿರುವ ಕೇಶವಕುಮಾರ ಮೂಡಲಗಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿರುವನು. …

Read More »

ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯಾದವಾಡ ಘಟಕ ವತಿಯಿಂದ ಆಯೋಜಿಸಲಾಗಿದ್ದ, ಯಾದವಾಡ ಸಾಂಸ್ಕೃತಿಕ ಉತ್ಸವ-2024

ಮೂಡಲಗಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾದವಾಡದಲ್ಲಿ ನಮಗೆ ಅಭೂತಪೂರ್ವ ಬೆಂಬಲ ಸಿಕ್ಕರೂ ಸೋಲಬೇಕಾಯಿತು. ಸೋತೆವು ಎಂದ ಮಾತ್ರಕ್ಕೆ ಕೈಕಟ್ಟಿ ಕುಳಿತುಕೊಳ್ಳುವ ಜಾಯಮಾನ ನಮ್ಮದಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ತಾಲೂಕಿನ ಯಾದವಾಡ ಗ್ರಾಮದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯಾದವಾಡ ಘಟಕ ವತಿಯಿಂದ ಆಯೋಜಿಸಲಾಗಿದ್ದ, ಯಾದವಾಡ ಸಾಂಸ್ಕೃತಿಕ ಉತ್ಸವ-2024 ರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು ,ಯಾವುದೇ ಕೆಲಸಗಳನ್ನು ಮಾಡಲು ಮುಂದಾದರೆ …

Read More »

ಬಸ್ಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ಮೂಡಲಗಿ: ಭಗವಂತ ತಮ್ಮ ಸೇವೆ ಮಾಡಲು ಅವಕಾಶ ನೀಡಿದರಿಂದ ಶಿವಾಪೂರ(ಹ) ಗ್ರಾಮಕ್ಕೆ ವಿಶೇಷ ಆದ್ಯತೆ ನೀಡಿ ಅಭಿವೃದ್ದಿ ಮಾಡಲಾಗುತ್ತಿದ್ದು ಗ್ರಾಮದ ಅಡಿವಿಸಿದ್ದೇಶ್ವರ ಮಠ, ಬಸ್ಸ್ ನಿಲ್ದಾಣ ಹಾಗೂ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಶೆಲ್ಟರ್ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ರವಿವಾರದಂದು ತಾಲೂಕಿನ ಶಿವಾಪೂರ (ಹ) ಗ್ರಾಮದಲ್ಲಿ ರಾಜ್ಯಸಭಾ ಸಂಸದರ ಸ್ಥಳಿಯ ಪ್ರದೇಶಾಭಿವೃದ್ದಿ ಯೋಜನೆಯಡಿ ಮೂಡಲಗಿ ರಸ್ತೆಗೆ ಹೊಂದಿಕೊಂಡ ಬಸ್ಸ್ …

Read More »

ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಶಿಸ್ತು ಮತ್ತು ದೇಶಾಭಿಮಾನ ಕಲಿಸಿರಿ-ಗಜಾನನ ಮನ್ನಿಕೇರಿ   

 ಮೂಡಲಗಿ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಶಿಸ್ತನ್ನು ಕಲಿಸಬೇಕೆಂದು ಬೆಳಗಾವಿಯ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಗಜಾನನ ಮನ್ನಿಕೇರಿ ಹೇಳಿದರು. ಅವರು ತಾಲೂಕಿನ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಶ್ರೀ ನಿಜಗುಣದೇವರ ವಿದ್ಯಾಸಂಸ್ಥೆ ವತಿಯಿಂದ ಜರುಗಿದ  ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ಕಬ್ ಬುಲ್‌ಬುಲ್ ದಳಗಳನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪೂಜ್ಯ ಶ್ರೀ ನಿಜಗುಣದೇವ ಮಹಾಸ್ವಾಮಿಗಳು ತಮ್ಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ …

Read More »