Breaking News
Home / inmudalgi (page 360)

inmudalgi

ಪಬ್ಲಿಕ್ ಹೀರೋ ಆಗಿ ಮಿಂಚಿದ : ರಮೇಶ್ ಖೇತಗೌಡರ

ಮುಗಳಖೋಡ : ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಧಾನಕಾರ್ಯದರ್ಶಿಗಳು, ಯುವನಾಯಕ ಹಾಗೂ ಮುಗಳಖೋಡ ಪುರಸಭೆ ಸದಸ್ಯ ರಮೇಶ ಖೇತಗೌಡರ ಅವರಿಂದ ಮುಗಳಖೋಡ ಪಟ್ಟಣದ ವಾರ್ಡ್ ನಂ. 2 ರ ಪ್ರತಿ ಕುಟುಂಬಕ್ಕೂ ಸ್ಯಾನಿಟೈಸರ್, ಮಾಸ್ಕ್ ಹಾಗೂ ಕಿರಾಣಿ/ದಿನಸಿ ಸಾಮಾನುಗಳನ್ನು ವಿತರಿಸಲಾಯಿತು. ಮಹಾಮಾರಿ ಕೊರೋನಾ ವೈರಸ್ ದೇಶದ ತುಂಬಾ ಮರಣ ಮೃದಂಗ ಭರಿಸುತ್ತಿರುವ ಈ ಕೊರೋನಾ ದಿನ ದಿನಕ್ಕೂ ಹೆಚ್ಚು ಹರಡುತ್ತಿದ್ದು, ಭಯಾನಕ ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶದ ಪ್ರಧಾನಮಂತ್ರಿಗಳ ಆದೇಶದ ಮೇರೆಗೆ …

Read More »

ಅಕ್ರಮ ಮದ್ಯ ಮಾರಾಟ ಆರೋಪ ಹಿನ್ನಲೆ, ಅಬಕಾರಿ ಅಧಿಕಾರಿಗಳಿಂದ ವೈನ್ ಶಾಪ್ ಮೇಲೆ ದಾಳಿ, ಪರಿಶೀಲನೆ

ಅಥಣಿ: ದೇಶಾದ್ಯಾಂತ ಕರೊನಾ ವೈರಸ್ ಅಟ್ಟಹಾಸ ಹಿನ್ನಲೆ ಕೇಂದ್ರ ಸರಕಾರ 21 ದಿನಗಳ ಲಾಕ್ ಡೌನ್ ಘೋಷಣೆಯಾಗಿದೆ. ರಾಜ್ಯ ಸರಕಾರ ರಾಜ್ಯದ ಎಲ್ಲ ಮದ್ಯಮಾರಾಟವನ್ನು ನಿಷೇಧ ಮಾಡಿರುವದರಿಂದ ಅಕ್ರಮ ಮದ್ಯ ಮಾರಾಟ ಧಂದೆ ತಲೆ ಎತ್ತಿದೆ. ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿರುವ ಸರೋವರ ವೈನ್ಸ ಶಾಪ್ ನಿಂದ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿರುವ ದೂರು ಬೆಳಗಾವಿ ಜಿಲ್ಲಾ ಅಬಕಾರಿ ಅಧಿಕಾರಿಗಳಿಗೆ ತಪುಪಿರುವ ಹಿನ್ನಲೆಯಲ್ಲಿ ಗೋಕಾಕ ಸಬ್ ಡಿವಿಜನ್ ನ ಅಬಕಾರಿ …

Read More »

ಕೊರೋನಾ ಸೋಂಕು ನಿವಾರಣೆಗಾಗಿ ದುಡಿಯುತ್ತಿರುವವರನ್ನು ಅವರು ಅಭಿನಂದನೆ

ಗೋಕಾಕ್ : ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಕೊರೋನಾ ಮಹಾಮಾರಿಗೆ ವಿಶ್ವಾದ್ಯಂತ ಇದುವರೆಗೂ ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ತೆತ್ತಿದ್ದಾರೆ. ನಮ್ಮ ದೇಶದಲ್ಲಿಯೂ 246 ಮಂದಿ ಜೀವ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದ್ವಿಶತಕ ದಾಟಿದೆ. ಪರಿಸ್ಥಿತಿ ನಿಯಂತ್ರಿಸಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಮಧ್ಯೆ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ಸೋಂಕು ನಿವಾರಣೆಗಾಗಿ ದುಡಿಯುತ್ತಿರುವವರನ್ನು ಅವರು ಅಭಿನಂದಿಸಿದ್ದಾರೆ. ಇಂಥ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಮ್ಮನ್ನು ರಕ್ಷಿಸುತ್ತಿರುವ …

Read More »

ಏಪ್ರಿಲ್‌ 30 ರವರೆಗೆ ರಾಜ್ಯದಲ್ಲಿ ಲಾಕ್‌ ಡೌನ್‌ ಮುಂದುವರಿಕೆ -ಯಡಿಯೂರಪ್ಪ ಘೋಷಣೆ

ಮಾರಣಾಂತಿಕ ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ದೇಶದಾದ್ಯಂತ ಘೋಷಿಸಲಾಗಿದ್ದ ಲಾಕ್‌ ಡೌನ್‌ ಏಪ್ರಿಲ್‌ 14 ರಂದು ಅಂತ್ಯವಾಗುತ್ತಿದ್ದು, ಇದನ್ನು ಏಪ್ರಿಲ್‌ 30 ರವರೆಗೆ ವಿಸ್ತರಣೆ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಸಿದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಮಾಧ್ಯಮ ಗೋಷ್ಟಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ನರೇಂದ್ರ ಮೋದಿಯವರ ಜೊತೆಗೆ ನಡೆಸಿದ ಸಭೆಯ ಮಾಹಿತಿ ಹಂಚಿಕೊಂಡ ಯಡಿಯೂರಪ್ಪನವರು, ಇನ್ನೂ 15 ದಿನಗಳ …

Read More »

ಪಾವ್ರ್ವತೆವ್ವಾ ಅಥಣಿ ಅವರಿಂದ ಬಡವರಿಗೆ ಆಹಾರ ದಾನ್ಯ ವಿತರಣೆ

ಮೂಡಲಗಿ: ಕೊರೊನಾ ವೈರಸ್‍ದಿಂದ್ ಲಾಕ್ ಡೌನ್ ಹಿನ್ನೆಲೇಯಲ್ಲಿ ಸಂಕಷ್ಟಕ್ಕಿಡಾಗಿದ ಇಲ್ಲಿಯ ಪುರಸಭೆಯ 3ನೇವಾರ್ಡಿನ ಸದಸ್ಯೆ ಪಾವ್ರ್ವತೆವ್ವಾ ಸಿದ್ದಪ್ಪ ಅಥಣಿ ಅವರು ತಮ್ಮ ವಾರ್ಡಿನ ಅಮ್ಮನ ನಗರದ ಕಡು ಬಡವರಿಗೆ ದಿನನಿತ್ಯ ಬಳಕೆಯ ಆಹಾರ ದಾನ್ಯ ಬೆಳೆ, ಬೆಲ್ಲ, ಎಣ್ಣಿ, ಅಕ್ಕಿ, ಚಹಾಪುಡಿ, ಸಕ್ಕರಿ, ವಿತರಿಸಿದರು. ಈ ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ಪರಪ್ಪ ಮುನ್ಯಾಳ, ಐ.ಎಸ್.ಕೊಣ್ಣುರ, ಶಿವಾನಂದ ಸಣ್ಣಕ್ಕಿ, ಹಾಗೂ ಚನ್ನಬಸು ಬಡ್ಡಿ, ಡಾ.ವಾಯ್.ಬಿ.ಮುಳವಾಡ, ಕಾಶಪ್ಪ ಝಂಡೇಕುರಬರ, ಚನ್ನಪ್ಪ ಅಥಣಿ, ಶಿವಲಿಂಗ …

Read More »

ದೇವರ ಹೆಸರಿನಲ್ಲಿ ಮನೆಯಿಂದ ಹೊರಗೆ ಬಂದರೆ ಹುಶಾರ್…

ಮೂಡಲಗಿ : ಎಪ್ರೀಲ 12 ರಂದು ನಡೆಯುವ ರಥೋತ್ಸವದ ಹಾಗೂ ದೇವರ ಜಾತ್ರೆಯ ಹೆಸರಿನಲ್ಲಿ ಮನೆಯಿಂದ ಹೋರ ಬಂದರೆ ಕೇಸ್ ದಾಖಲಿಸಲಾಗುವದು. ಇದೆ 12 ರಂದು ಸಂಜೆ ನಡೆಯಬೇಕಿದ್ದ ಜಡಿಸಿದ್ದೇಶ್ವರ ಯೋಗೆಂದ್ರರ ಹಗ್ಗವಿಲ್ಲದ ರಥೋತ್ಸವ ರದ್ದು ಪಡಿಸಲಾಗಿದ್ದು ಎಂದು ಕುಲಗೋಡ ಠಾಣೆಯ ಪಿ.ಎಸ್.ಐ ಎಚ್.ಕೆ ನರಳೆ ಹೇಳಿದರು. ಇವರು ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದ ಶ್ರೀ ಜಡಿಸಿದ್ದೇಶ್ವರ ಮಠದಲ್ಲಿ ಇಂದು ಮುಂಜಾನೆ ಹಮ್ಮಿಕೊಳ್ಳಲಾದ ಪ್ರಮುಖರ ಸಭೆಯಲ್ಲಿ ಮಾತನಾಡಿ 5 ಕಿಂತ …

Read More »

ಹೂ ಬೆಳೆದು ಹೈರಾಣಾದ ಅನ್ನದಾತ : ಕರುಣೆ ಇಲ್ಲದೆ ಬರೆ ಎಳೆದ ಕೊರೋನಾ

ಅಥಣಿ : ಮನುಷ್ಯ ತಾನೊಂದು ಬಗೆದರೆ ವಿಧಿ ಇನ್ನೊಂದು ಬಗೆಯಿತು ಅನ್ನುವಂತೆ ಸದ್ಯ ಲಕ್ಷ ಲಕ್ಷ ಎನಿಸುವ ಕನಸು ಕಂಡಿದ್ದ ಅನ್ನದಾತನ ಆಸೆ ನುಚ್ಚು ನೂರಾಗಿದೆ ಕಳೆದ ಎರಡು ವರ್ಷಗಳಿಂದ ವಿಭಿನ್ನ ಪ್ರಯೋಗ ಮಾಡುವ ನಿಟ್ಟಿನಲ್ಲಿ ಜರ್ಬೇರಿ ಹೂವು ಬೆಳೆದಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ರೈತನ ಕಟುಂಬ ಸದ್ಯ ಕೊರೊನಾ ಲಾಕ್ ಡೌನ ನಿಂದ ಕಣ್ಣೀರು ಹಾಕುವಂತಾಗಿದೆ. ಎರಡು ಮೂರು ವರ್ಷಗಳಿಂದ ವಿಭಿನ್ನ ಬೆಳೆ ಅಂತ …

Read More »

ಹಿಪ್ಪರಗಿ ಬ್ಯಾರೇಜಿನ ಹಿನ್ನೀರನ್ನು ಹರಿಸದಿರಲು ಮನವಿ

ರಬಕವಿ-ಬನಹಟ್ಟಿ: ಹಿಪ್ಪರಗಿ ಆಣೆಕಟ್ಟಿನ ಕೃಷ್ಣಾ ನದಿಯ ಹಿನ್ನಿರಿನಿಂದ ಆಣೆಕಟ್ಟಿನ ಕೆಳಭಾಗದಲ್ಲಿನ ನೀರನ್ನು ಹರಿಸಬಾರದೆಂದು ರಬಕವಿ-ಬನಹಟ್ಟಿ ಬಿಜೆಪಿ ಘಟಕದ ವತಿಯಿಂದ ರಬಕವಿ-ಬನಹಟ್ಟಿ ತಹಶೀಲ್ದಾರರ ಮೂಲಕ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿಲಾಯಿತು. ಹಿಪ್ಪರಗಿ ಆಣೆಕಟ್ಟಿನ ಕೃಷ್ಣಾ ನದಿ ಹಿನ್ನೀರನ್ನು ರಬಕವಿ-ಬನಹಟ್ಟಿ, ಅಥಣಿ, ಕಾಗವಾಡ, ಕುಡಚಿ ಹಾಗೂ ಜಮಖಂಡಿ ತಾಲೂಕಿನ ಸುಮಾರು 100 ಗ್ರಾಮಗಳ ಜಾನುವಾರಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ನೀರನ್ನು ಕೆಳಭಾಗದಲ್ಲಿ ಹರಿಸುವದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ …

Read More »

ಮುಧೋಳದಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನಲೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಚೇರಿ ಸಿಬ್ಬಂದಿಗಳಿಂದ ಯಾದವಾಡಾ ಗ್ರಾಮದ ಜನತೆಗೆ ಜಾಗೃತಿಯನ್ನು ಮೂಡಿಸಲಾಯಿತು

ಮೂಡಲಗಿ: ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ಕೊರೊನಾ ಸೊಂಕು ಧೃಡಪಟ್ಟಿರುವ ಹಿನ್ನಲೆಯಲ್ಲಿ ಮೂಡಲಗಿ ತಾಲೂಕಿನ ಕೊನೆಯ ಭಾಗವಾಗಿರುವ ಯಾದವಾಡ ಜಿಲ್ಲಾ ಪಂಚಾಯತ ಕ್ಷೇತ್ರಗಳಲ್ಲಿ ತಾಲೂಕಾಡಳಿತ ಮತ್ತು ಟೀಮ್ ಎನ್‍ಎಸ್‍ಎಫ್ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಬುಧವಾರದಂದು ಮುಧೋಳದ ವ್ಯಕ್ತಿಯೊರ್ವನಿಗೆ ಕೊರೊನಾ ವೈರಸ್ ಕಂಡುಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಮುಧೋಳಕ್ಕೆ ಹೊಂದಿಕೊಂಡಿರುವ ಹಳ್ಳಿಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ವಿಶೇಷ ಮನವಿಯನ್ನು ಅಧಿಕಾರಿಗಳ ತಂಡ ಮಾಡಿಕೊಂಡಿತ್ತು. ಕೊರೊನೊ ಹಿನ್ನಲೆಯಲ್ಲಿ …

Read More »

ಪೌಡರ್‍ಪ್ಲಾಂಟ್‍ನಲ್ಲಿ ದುಡಿಯುತ್ತಿರುವ ಕಾರ್ಮಿಕರು, ಸಿಬ್ಬಂದಿಗಳನ್ನು ಅಭಿನಂದಿಸಿದ ಬಾಲಚಂದ್ರ ಜಾರಕಿಹೊಳಿ

ರಾಮನಗರ: ಕೊರೊನಾ ಹಿನ್ನಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಟ್ರೇಟ್ರಾ/ಪ್ಲೆಕ್ಸಿಪ್ಯಾಕ್ ಮಾದರಿಯ ಹಾಲುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಇವುಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ದೊರೆಯುವಂತೆ ಮಾಡಲು ಮುಂದಿನ ದಿನಗಳಲ್ಲೂ ಸಹ ಸನ್ನದ್ಧರಾಗುವಂತೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು. ಬುಧವಾರ ಸಂಜೆ ರಾಮನಗರದ ಹಾಲಿನ ಪುಡಿ ಘಟಕಕ್ಕೆ ಭೇಟಿ ನೀಡಿದ ಬಳಿಕ ಕೆಎಮ್‍ಎಫ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದರು. …

Read More »