Breaking News
Home / inmudalgi (page 60)

inmudalgi

ರಾಮಾಯಣ ಮಹಾಕಾವ್ಯವು ಪ್ರಪಂಚದಲ್ಲಿ ವಿಶಿಷ್ಟ ಸ್ಥಾನದಲ್ಲಿದೆ

  ಮೂಡಲಗಿ : ಮಹರ್ಷಿಯವರು ಬರೆದಿರುವ ರಾಮಾಯಣ ಮಹಾಕಾವ್ಯವು ಪ್ರಪಂಚದ ಮಹಾಕಾವ್ಯಗಳಲ್ಲಿಯೆ ಅತ್ಯಂತ ವಿಶಿಷ್ಟ ಸ್ಥಾನದಲ್ಲಿದೆ. ಇಂದಿನ ಆದುನಿಕ ಮಾನವನ ಜೀವನ ಶೈಲಿಯಲ್ಲಿ ಇರಬೇಕಾದ ನೈತಿಕ, ಆಧ್ಯಾತ್ಮಿಕ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಮೌಲ್ಯಗಳಮೇಲೆ ಬೆಳಕು ಚೆಲ್ಲುತ್ತದೆ ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್. ಆರ್. ಭಾಗೋಜಿ ಹೆಳಿದರು. ಅವರು ದಿವಾಣಿ ಹಾಗೂ ಜೆಎಮ್‍ಎಪ್‍ಸಿ ನ್ಯಾಯಲಯದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ಯ ಮಾತನಾಡುತ್ತ ಹಿಂದು ಧರ್ಮದ ಹಲವು ಪ್ರಮುಖ ಗ್ರಂಥಗಳಲ್ಲಿ …

Read More »

ರಾಮಾಯಣ ರಚನೆಯಲ್ಲಿ ಮಹರ್ಷಿ ವಾಲ್ಮೀಕಿ ಅಗ್ರಗಣ್ಯರು – ಬಿ.ಎಂ. ಕಬ್ಬೂರೆ

ಮೂಡಲಗಿ : ರಾಮಾಯಣ ಗ್ರಂಥ ರಚನೆಯಲ್ಲಿ ಮಹರ್ಷಿ ವಾಲ್ಮೀಕಿ ಅಗ್ರಗಣ್ಯನಾಗಿದ್ದು ಒಬ್ಬ ದರೋಡೆಕೊರನಾಗಿದ್ದ ರತ್ನಾಕರ ಮಹರ್ಷಿ ವಾಲ್ಮೀಕಿಯಾಗಿ ನಾರದಮುನಿಗಳ ಸಂದೇಶದಂತೆ ಪರಿವರ್ತನೆಯಾಗಿ ಮಾನವ ಕುಲದಲ್ಲಿ ಶ್ರೇಷ್ಠತೆಯ ಮೌಲ್ಯಗಳನ್ನು ಹೊಂದಿರುವ ರಾಮನ ಜೀವನದ ಯಶೋಗಾಥೆಯನ್ನು ಪರಿಚಯಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ರಾಮನಾಮದಲ್ಲಿ ದೇವನಿದ್ದು ಸಾರ್ವಕಾಲಿಕ ಸಾಮಾಜಿಕ ಮೌಲ್ಯಗಳನ್ನು ರಾಮಾಯಣದ 24000 ಶ್ಲೋಕಗಳಲ್ಲಿ ಪರಿಚಯಸುವಲ್ಲಿ ಮಹರ್ಷಿ ವಾಲ್ಮೀಕಿ ಮನುಕುಲದ ಮಹಾನ್ ವಿದ್ವಾಂಸರಾಗಿದ್ದಾರೆ ಎಂದು ಮೂಡಲಗಿಯ ಆರ್‍ಡಿಎಸ್ ಪದವಿ ಕಾಲೇಜಿನ ಇತಿಹಾಸ ಉಪನ್ಯಾಸಕ ಬಿ.ಎಂ. …

Read More »

ಮಹರ್ಷಿ ವಾಲ್ಮೀಕಿ ಜಯಂತಿಗೆ ಶುಭ ಕೋರಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಅರಭಾವಿ ಶಾಸಕ ಮತ್ತು ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ನಾಡಿನ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭ ಕೋರಿದ್ದಾರೆ. ಮಹರ್ಷಿ ವಾಲ್ಮೀಕಿ ಅವರು ಮನುಕುಲಕ್ಕೆ ಮಾರಕವಾಗಿದ್ದ ರಾಕ್ಷಸಿ ಸಮೂಹವನ್ನು ಸಂಹಾರ ಮಾಡಿ ಶೋಷಣೆ ರಹಿತ, ವರ್ಗ ರಹಿತ, ಜಾತಿ ರಹಿತ, ಸಮಪಾಲು- ಸಮಬಾಳು, ಸರಿ ಸಮಾನವಾದ ಅವಕಾಶದ ಸಂದೇಶಗಳನ್ನು ಸಾರಿದ್ದಾರೆ. ಈ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ರಾಮಾಯಣವನ್ನು ರಚನೆ ಮಾಡಿ …

Read More »

ಕಲಾರಕೊಪ್ಪ ಚಾಮುಂಡೇಶ್ವರಿ ಜಾತ್ರೆಯಲ್ಲಿ ಪಾಲ್ಗೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಅರಭಾವಿ ಕ್ಷೇತ್ರವು ಕಳೆದ ೨೦ ವರ್ಷಗಳಿಂದ ಶಿಕ್ಷಣದಲ್ಲಿ ಮಹತ್ತರ ಸಾಧನೆ ಮಾಡುತ್ತಿದ್ದು, ಕಲಾರಕೊಪ ಗ್ರಾಮವೂ ಸಹ ಇದಕ್ಕೆ ಹೊರತಾಗಿಲ್ಲ. ಇಲ್ಲಿ ಸುಮಾರು ಜನ ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಮಸ್ಥರ ಶೈಕ್ಷಣಿಕ ಕಾಳಜಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಮಂಗಳವಾರ ಸಂಜೆ ತಾಲ್ಲೂಕಿನ ಕಲಾರಕೊಪ್ಪ ಗ್ರಾಮದ ಚಾಮುಂಡೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ …

Read More »

ಮೌನಮಲ್ಲಿಕಾರ್ಜುನ ಮಠದಲ್ಲಿ ಶ್ರೀದೇವಿ ಪುರಾಣ ಮಂಗಲೋತ್ಸವ

ಬೆಟಗೇರಿ:ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಮೌನಮಲ್ಲಿಕಾರ್ಜುನ ಮಠದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಸಾಗಿಬರುತ್ತಿರುವ ಶ್ರೀದೇವಿ ಪುರಾಣ ಪ್ರವಚನ ಮಂಗಲೋತ್ಸವ ಮತ್ತು ಮಾಸಿಕ ಶಿವಾನುಭವ ಹಾಗೂ ಶಿರಹಟ್ಟಿ ಫಕೀರೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಅ.17ರಂದು ಸಾಯಂಕಾಲ 4 ಗಂಟೆಗೆ ನಡೆಯಲಿದೆ. ಸಂಜೆ 7 ಗಂಟೆಗೆ ಮಂಗಲ ಧರ್ಮಸಭೆ ನಡೆಯಲಿದ್ದು, ಸ್ಥಳೀಯ ಮೌನ ಮಲ್ಲಿಕಾರ್ಜುನ ಮಠದ ಮೌನಮಲ್ಲಿಕಾರ್ಜುನ ಶಿವಯೋಗಿಗಳು ಅಧ್ಯಕ್ಷತೆ, ಶಿರಹಟ್ಟಿ ಜಗದ್ಗುರು ಫಕೀರೇಶ್ವರ ಸಂಸ್ಥಾನಮಠದ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. …

Read More »

ಉಚಿತ ನೇತ್ರ ತಪಾಸಣಾ ಶಿಬಿರ

ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾಮ ಪಂಚಾಯತ ಕುಲಗೋಡ ಹಾಗೂ ಶ್ರೀ ಸಾಯಿರತ್ನ ಫೌಂಡೇಶನ ಮತ್ತು ಮುಸ್ಲಿಂ ಬಾಂಧವರು ನೇತೃತ್ತದಲ್ಲಿ   ನಡೆದ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆವಾಗಿದ್ದು. 200 ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಇಂದು ಮಂಗಳವಾರ ಇವರಲ್ಲಿಯ 20 ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗೆ ಗ್ರಾಪಂ ಮತ್ತು ಸಾಯಿರತ್ನ ಫೌಂಡೇಶನ ವ್ಯವಸ್ಥೆ ಮಾಡಿದ್ದು. ವಾಹನ ಮತ್ತು ಸಕಲ ಸೌಕರ್ಯ …

Read More »

ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 99 ನೇ ಅನ್ನದಾಸೋಹ

‘ಅನ್ನದಾನವು ಶ್ರೇಷ್ಠ ದಾನವಾಗಿದೆ’ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ 99ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು. ಲಯನ್ಸ್ ಪರಿವಾರ ಅಧ್ಯಕ್ಷ ಸಂಜಯ ಮೋಕಾಶಿ ಮಾತನಾಡಿ ‘ಅನ್ನದಾನವ ಶ್ರೇಷ್ಠ ದಾನವಾಗಿದ್ದು ಲಯನ್ಸ್ ಕ್ಲಬ್‍ದಿಂದ ಕೆಳೆದ ಹಲವು ವರ್ಷಗಳಿಂದ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಅನ್ನದಾನ ಸೇವೆಯನ್ನು ಸಲ್ಲಿಸುತ್ತಿರವೆವು’ ಎಂದರು. ಲಯನ್ಸ್ ಪರಿವಾರದ ಖಜಾಂಚಿ ಕೃಷ್ಣಾ ಕೆಂಪಸತ್ತಿ ಅವರು ತಮ್ಮ ಚಿರಂಜೀವ …

Read More »

ಯುವ ಉದ್ಯೋಗಿಗಳಿಗೆ ಚಾಟ್ಸ್ ತರಬೇತಿ ಯಶಸ್ವಿ

ಯುವ ಉದ್ಯೋಗಿಗಳಿಗೆ ಚಾಟ್ಸ್ ತರಬೇತಿ ಯಶಸ್ವಿ. ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿಯ ಯುವ ಜನರಿಗೆ ಉದ್ಯೋಗಾಧಾರಿತ ತರಬೇತಿ ಶಿಬಿರದಲ್ಲಿ ಉತ್ತರ ಭಾರತ ಮತ್ತು ಉತ್ತರ ಕರ್ನಾಟಕ ಚಾಟ್ಸ್ ತರಬೇತಿ ನೀಡಲಾಯಿತು. ಇದರಲ್ಲಿ ಉತ್ತರ ಕರ್ನಾಟಕ ಚಾಟ್ಸ್ ತರಬೇತುದಾರರಾಗಿ ಮೂಡಲಗಿಯ ಮಂಜುನಾಥ ರೇಳೆಕರ ಮತ್ತು ಕುಮಾರ್ ಮೋಮಿನ ಅವರು ಭಾಗವಹಿಸಿದ್ದರು. ಇಲಾಖೆಯ ಮುಖ್ಯಸ್ಥರು ಮತ್ತು ಆಯೋಜಕರು ಇಲ್ಲಿನ ಭಾಗದ ತಿಂಡಿ ತಿನಿಸುಗಳನ್ನು …

Read More »

ದೇವರ ದಯೆಯಿಂದ ಈ ಬಾರಿ ಉತ್ತಮವಾಗಿ ಮಳೆಯಾಗುತ್ತಿದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡುತ್ತಿದೆ. ರೈತರು ಸುಖವಾಗಿದ್ದರೆ ಇಡೀ ದೇಶವೇ ಸುಖದಿಂದ ಇರುತ್ತದೆ – ಬೆಮ್ಯುಲ್ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ದೇವರ ದಯೆಯಿಂದ ಈ ಬಾರಿ ಉತ್ತಮವಾಗಿ ಮಳೆಯಾಗುತ್ತಿದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡುತ್ತಿದೆ. ರೈತರು ಸುಖವಾಗಿದ್ದರೆ ಇಡೀ ದೇಶವೇ ಸುಖದಿಂದ ಇರುತ್ತದೆ ಎಂದು ಬೆಮ್ಯುಲ್ ಅಧ್ಯಕ್ಷರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ರವಿವಾರ ಸಂಜೆ ತಾಲ್ಲೂಕಿನ ಹಳ್ಳೂರ ಗ್ರಾಮದ ಮಹಾಲಕ್ಷ್ಮಿ ದೇವರ ದರ್ಶನ ಪಡೆದು ಮಾತನಾಡಿದ ಅವರು, ದಸರಾ ಮುಗಿದು ದೀಪಾವಳಿ ಹಬ್ಬಕ್ಕೆ ಅಣಿಯಾಗುತ್ತಿರುವ ಈ ಸಂದರ್ಭದಲ್ಲಿ ದೇವರು ಎಲ್ಲರಿಗೂ ಒಳ್ಳೇಯದು ಮಾಡುತ್ತಾನೆ ಎಂದವರು …

Read More »

‘ನಶೀಸುತ್ತಿರುವ ರಂಗಕಲೆ ಉಳಿಸುವುದು ಅವಶ್ಯವಿದೆ’- ಬಸವರಾಜ ಹಿರೇಮಠ

ಮೂಡಲಗಿ ತಾಲ್ಲೂಕಿನ ಕಲ್ಲೋಳಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ನಾಟಕ ಪ್ರದರ್ಶನವನ್ನು ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರದ ಉಪನಿರ್ದೇಶಕ ಬಸವರಾಜ ವಿ. ಹಿರೇಮಠ ಉದ್ಘಾಟಿಸಿ ಮಾತನಾಡಿದರು ಮೂಡಲಗಿ: ‘ಟಿವಿ, ಮೊಬೈಲ್ ಗೀಳಿನಿಂದ ಇಂದು ರಂಗಭೂಮಿ, ರಂಗಕಲೆಗಳು ನಶೀಸಿ ಹೋಗುತ್ತಲಿದ್ದು ರಂಗಕಲೆಗಳನ್ನು ಇಂದು ಉಳಿಸುವುದು ಅವಶ್ಯವಿದೆ’ ಎಂದು ಬೆಳಗಾವಿಯ ನಗರಾಭೀವೃದ್ಧಿ ಪ್ರಾಧಿಕಾರದ ಉಪನಿರ್ದೇಶಕ ಬಸವರಾಜ ಹಿರೇಮಠ ಹೇಳಿದರು. ತಾಲ್ಲೂಕಿನ ಕಲ್ಲೋಳಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಬಸವ ಮಂಟಪದಲ್ಲಿ ಜೈ ಹನುಮಾನ ಯುವಜನ ಸೇವಾ …

Read More »